ಗೋಪಿ ಸರ್ಕಲ್‌ ಅಲ್ಲ, ಇದು ಟಿ.ಸೀನಪ್ಪ ಶೆಟ್ಟಿ ಸರ್ಕಲ್‌, ಅನಾವರಣವಾಯ್ತು ಹೊಸ ಬೋರ್ಡ್‌

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 11 AUGUST 2023

SHIMOGA : ಟಿ.ಸೀನಪ್ಪ ಶೆಟ್ಟಿ ವೃತ್ತದಲ್ಲಿ ಸ್ಥಾಪಿಸಲಾಗಿರುವ ನೂತನ ನಾಮಫಲಕವನ್ನು (Name Board) ಶಾಸಕ ಎಸ್‌.ಎನ್‌.ಚನ್ನಬಸಪ್ಪ ಅನಾವರಣ ಮಾಡಿದರು.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಯಾರೆಲ್ಲ ಏನೇನು ಹೇಳಿದರು?

ಎಸ್‌.ಎನ್‌.ಚನ್ನಬಸಪ್ಪ, ಶಾಸಕ : ‘ಈ ಮೊದಲು ಇದನ್ನು ಗೋಪಿ ವೃತ್ತ ಎಂದು ಕರೆಯುತ್ತಿದ್ದರು. 1956ರಲ್ಲಿ ಟಿ. ಸೀನಪ್ಪ ಶೆಟ್ಟಿ ವೃತ್ತ ಎಂದು ನಾಮಕರಣ ಮಾಡಲಾಯಿತು. ಸರ್ಕಲ್‌ ಅಭಿವೃದ್ಧಿಗೆ ಆ ಕಾಲದಲ್ಲಿಯೇ ಸೀನಪ್ಪ ಶೆಟ್ಟಿ ಅವರ ಕುಟುಂಬ 25 ಸಾವಿರ ರೂ. ಕೊಟ್ಟಿದ್ದರು. ಸರ್ಕಲ್‌ ಮಧ್ಯೆ ಕಾರಂಜಿ ನಿರ್ಮಿಸಿದ್ದರು. ರಸ್ತೆ ಅಗಲೀಕರಣದ ಕಾರಂಜಿಯನ್ನು ಪಾಲಿಕೆಗೆ ಕೊಂಡೊಯ್ಯಲಾಯಿತು. ಈಗ ಅಲ್ಲಿಯು ಕಾರಂಜಿಯನ್ನು ತೆಗೆಯಲಾಗಿದೆ. ಗೋಪಿ ವೃತ್ತ ಅನ್ನುವ ಬದಲು ಇನ್ಮುಂದೆ ಟಿ.ಸೀನಪ್ಪ ಶೆಟ್ಟಿ ವೃತ್ತ ಎಂದೇ ಬಳಕೆ ಮಾಡೋಣ.ʼ

ಇದನ್ನೂ ಓದಿ – ಕೇಂದ್ರ ಸಚಿವರನ್ನು ಭೇಟಿಯಾದ ಶಿವಮೊಗ್ಗ ಸಂಸದ, ಮೆಕ್ಕೆಜೋಳ ಕುರಿತು ಮಹತ್ವದ ಮನವಿ, ಏನಿದೆ ಮನವಿಯಲ್ಲಿ?

ವೆಂಕಟೇಶ ಮೂರ್ತಿ : ‘ಪುರಸಭೆ, ನಗರಸಭೆಯಿಂದ ಹಿಡಿದು ಈಗನ ಪಾಲಿಕೆಯ ತನಕ ಎಲ್ಲ ದಾಖಲೆಗಳಲ್ಲು ಟಿ.ಸೀನಪ್ಪ ಶೆಟ್ಟಿ ವೃತ್ತ ಎಂದೆ ಪ್ರಕಟಿಸಲಾಗಿದೆ. ಈಗ ಪಾಲಿಕೆ ವತಿಯಿಂದ ನಾಮಫಲಕ (Name Board) ಸ್ಥಾಪಿಸಿ ಅಧಿಕೃತವಾಗಿ ಉದ್ಘಾಟಿಸಲಾಗಿದೆ. ನಮ್ಮ ಕುಟುಂಬದ ಹಿರಿಯ ದೂರದೃಷ್ಟಿಗೆ ಮನ್ನಣೆ ಸಿಕ್ಕಿದೆ.ʼ

ಟಿ.ಸೀನಪ್ಪ ಶೆಟ್ಟಿ ಅವರ ಕುಟುಂಬದ ಟಿ.ಆರ್‌.ಅಶ್ವಥನಾರಾಯಣ ಶೆಟ್ಟಿ, ಟಿ.ಎಸ್.ಸಂದೀಪ್‌, ವಿಶ್ವನಾಥ್‌, ಗುರುಚರಣ್‌, ರಘುನಂದನ್‌, ವೈ.ಹೆಚ್‌.ನಾಗರಾಜ್‌, ಖಂಡೋಬರಾವ್‌, ಜಿ.ವಿಜಯಕುಮಾರ್‌ ಸೇರಿದಂತೆ ಹಲವರು ಇದ್ದರು.

PARISHRAMA neet academy

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment