ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 12 ಜೂನ್ 2020
ಟ್ರಾವಲ್ ಹಿಸ್ಟರಿಯೇ ಇಲ್ಲ, ಆದರೂ ಸ್ವಾಮೀಜಿಗೆ ಕಾಣಿಸಿಕೊಂಡಿದೆ ಕರೋನ. ಇದು ಜಿಲ್ಲಾಡಳಿತದ ತಲೆ ನೋವು ಹೆಚ್ಚಿಸಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗದ ಆಶ್ರಮವೊಂದರ ಸ್ವಾಮೀಜಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೆ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಕರೋನ ಸೋಂಕು ತಗುಲಿರುವುದು ದೃಢವಾಗಿದೆ. ಹಾಗಾಗಿ ಸ್ವಾಮೀಜಿ ಅವರಿಗೆ ಚಿಕಿತ್ಸೆ ಆರಂಭಿಸಲಾಗಿದೆ.
ಟ್ರಾವಲ್ ಹಿಸ್ಟರಿಯೇ ಇಲ್ಲ
ಆಶ್ರಮದ ಸ್ವಾಮೀಜಿ ಅವರಿಗೆ ಟ್ರಾವಲ್ ಹಿಸ್ಟರಿಯೇ ಇಲ್ಲ. ಕರೋನ ಲಾಕ್ ಡೌನ್ ಸಂದರ್ಭದಲ್ಲೂ ಅವರು ಶಿವಮೊಗ್ಗದಲ್ಲಿಯೆ ಇದ್ದರು. ಹಾಗಿದ್ದು ಅವರಿಗೆ ಕರೋನ ಸೋಂಕು ತಗುಲಿದ್ದು ಹೇಗೆ ಅನ್ನುವುದು ಇನ್ನೂ ತಿಳಿದು ಬಂದಿಲ್ಲ.
ಮೂವರು ಪ್ರಾಥಮಿಕ ಸಂಪರ್ಕಕ್ಕೆ
ಸ್ವಾಮೀಜಿ ಅವರಿಗೆ ಕರೋನ ಸೋಂಕು ತಗುಲಿರುವ ಹಿನ್ನೆಲೆ ಅವರ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರನ್ನು ಗುರುತಿಸಲಾಗಿದೆ. ಆಪ್ತ ಸಹಾಯಕ, ಕೆಲಸದವರೊಬ್ಬರು ಸೇರಿ ಮೂವರನ್ನು ಕ್ವಾರಂಟೈನ್ನಲ್ಲಿ ಇರುವಂತೆ ಸೂಚಿಸಾಗಿದ್ದು, ಅವರ ಪರೀಕ್ಷೆ ನಡೆಸಲಾಗಿದೆ.
ಜಿಲ್ಲಾಡಳಿತಕ್ಕೆ ಹೊಸ ತಲೆನೋವು
ಆಶ್ರಮಕ್ಕೆ ಪ್ರತಿದಿನ ಭಕ್ತರು ಬಂದ ಹೋಗುತ್ತಾರೆ. ಯಾರೆಲ್ಲ ಬಂದು ಹೋಗಿದ್ದಾರೆ ಅನ್ನುವ ಪಟ್ಟಿ ಆಶ್ರಮದಲ್ಲಿ ಇಲ್ಲ. ಇದು ಜಿಲ್ಲಾಡಳಿತಕ್ಕೆ ಹೊಸ ತಲೆ ನೋವು ತಂದಿದೆ. ಮತ್ತೊಂದೆಡೆ ಸ್ವಾಮೀಜಿ ಅವರಿಗೆ ಪಾಸಿಟಿವ್ ಬಂದ ಹಿನ್ನೆಲೆ ಆಶ್ರಮದ ಆವರಣವನ್ನು ಸೀಲ್ ಡೌನ್ ಮಾಡಿ, ಸ್ಯಾನಿಟೈಸ್ ಮಾಡಲಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]