ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 1 FEBRUARY 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಕರ್ನಾಟಕದ ಧ್ವಜ ಹಿಡಿದು ಮೆರವಣಿಗೆಯಲ್ಲಿ ಸಾಗಿದ ವಿದ್ಯಾರ್ಥಿಗಳು. ಡೊಳ್ಳಿನ ಶಬ್ದದೊಂದಿಗೆ ಕನ್ನಡ ಪರ ಘೋಷಣೆ. ಕನ್ನಡದ ಕಂಪು ಸೂಸುತ್ತ ಸಮ್ಮೇಳನ ಅಧ್ಯಕ್ಷರ ರಾಜಬೀದಿ ಉತ್ಸವ. ಇದು ಜಿಲ್ಲಾ ಮಟ್ಟದ 18ಮೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಮುಖಾಂಶ.
ಶಿವಮೊಗ್ಗದ ಗೋಪಿಶೆಟ್ಟಿಕೊಪ್ಪದ ಚಾಲುಕ್ಯ ನಗರದಲ್ಲಿರುವ ಸಾಹಿತ್ಯ ಗ್ರಾಮದಲ್ಲಿ ನಡೆಯುತ್ತಿರುವ ಎರಡು ದಿನದ ಸಾಹಿತ್ಯ ಸಮ್ಮೇಳನಕ್ಕೆ ಇಂದು ಚಾಲನೆ ನೀಡಲಾಯಿತು.
ಅದ್ಧೂರಿ ರಾಜಬೀದಿ ಉತ್ಸವ
ಗೋಪಾಳದ ಆನೆ ಪ್ರತಿಮೆ ವೃತ್ತದಿಂದ ಸಾಹಿತ್ಯ ಗ್ರಾಮದವರೆಗೆ ಸಮ್ಮೇಳನ ಅಧ್ಯಕ್ಷ ಡಾ. ಎಸ್.ಪಿ.ಪದ್ಮಪ್ರಸಾದ್ ಅವರ ರಾಜಬೀದಿ ಉತ್ಸವ ನಡೆಯಿತು. ತೆರೆದ ವಾಹನದಲ್ಲಿ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ನಡೆಸಲಾಯಿತು. ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಶಾಲೆ, ಕಾಲೇಜು ವಿದ್ಯಾರ್ಥಿಗಳು ನಡ ಧ್ವಜ ಹಿಡಿದು ಪಥ ಸಂಚಲನ ನಡೆಸಿದರು. ಸಾರ್ವಜನಿಕರು, ಸಾಹಿತ್ಯ ಪರಿಷತ್ತಿನ ಪ್ರಮುಖರು, ಅತಿಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಹಿರಿಯ ಸಾಹಿತಿ ಡಾ. ಎಲ್.ಎನ್.ಮುಕುಂದರಾಜ್ ಅವರು ಸಾಹಿತ್ಯ ಸಮ್ಮೇಳಕ್ಕೆ ಚಾಲನೆ ನೀಡಿದರು.
ಸಮ್ಮೇಳನ ಅಧ್ಯಕ್ಷರು ಭಾಷಣದ ಪ್ರಮುಖಾಂಶ
ಜಿಲ್ಲೆಯ 18ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ. ಎಸ್.ಪಿ.ಪದ್ಮಪ್ರಸಾದ್ ಅವರು ಭಾಷಣ ಮಾಡಿದರು. ಅವರ ಭಾಷಣದ ಮೂರು ಪ್ರಮುಖಾಂಶ ಇಲ್ಲಿದೆ.
ಪ್ರಮುಖಾಂಶ 1 : ಕನ್ನಡ ಭಾಷೆ ದುರ್ಬಲಗೊಳ್ಳಲು ಕನ್ನಡಿಗರ ಪಾತ್ರವು ಇದೆ. ಇಂಗ್ಲೀಷ್ ಮಾಧ್ಯಮದಲ್ಲಿ ಓದಿದರೆ ಮಾತ್ರ ಮಕ್ಕಳಿಗೆ ಉಜ್ವಲ ಭವಿಷ್ಯ ಎಂಬ ಭ್ರಮೆಯಲ್ಲಿ ಪೋಷಕರಿದ್ದಾರೆ. ಆದ್ದರಿಂದ ಕನ್ನಡ ಶಾಲೆಗಳು ಸೊರಗಿವೆ. ಶಿವಮೊಗ್ಗ ಜಿಲ್ಲೆಯಲ್ಲೇ 43 ಕನ್ನಡ ಶಾಲೆಗಳು ಮುಚ್ಚಿವೆ. ಇವುಗಳ ಮಧ್ಯೆ ಸರ್ಕಾರಿ ಶಾಲೆಗಳ ಉನ್ನತೀಕರಣ ಆಗುತ್ತಿರುವುದು ಸಮಾಧಾನದ ಸಂಗತಿ.
ಪ್ರಮುಖಾಂಶ 2 : ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು ಎಂದು ಸರೋಜಿನಿ ಮಹಿಷಿ ವರದಿ ಪ್ರಕಟವಾಗಿ 40 ವರ್ಷವಾಗಿದೆ. ಆದರು ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ದೊರೆಯುತ್ತಿಲ್ಲ. ಬಲವಾಗಿ ಕಾನೂನು ಜಾರಿಯಾದರೆ ಮಾತ್ರ ಕನ್ನಡಿಗರಿಗೆ ಉದ್ಯೋಗ ಲಭಿಸಲಿದೆ.
ಪ್ರಮುಖಾಂಶ 3 : ಶರಾವತಿ ಸಂತ್ರಸ್ತರ ಸಮಸ್ಯೆಗೆ ಪರಿಹಾರ ದೊರೆತಿಲ್ಲ, ಮಂಗನ ಕಾಯಿಲೆ ಬಿಗಡಾಯಿಸಿದೆ, ಅಡಿಕೆಗೆ ಕೊಳೆ ರೋಗ ಬಾಧಿಸುತ್ತಿದೆ. ಇದೆ ರೀತಿ ಶಿವಮೊಗ್ಗ ಜಿಲ್ಲೆಯ ಹಲವು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಬೇಕಿದೆ. ಜಿಲ್ಲೆಯಲ್ಲಿ ಕಾಲೇಜುಗಳ ಸಂಖ್ಯೆ ಹೆಚ್ಚಾಗಿದೆ. ರಸ್ತೆಗಳು ಉತ್ತಮ ಸ್ಥಿತಿಗೆ ತಲುಪಿರುವುದು ಸಮಾಧಾನದ ಸಂಗತಿ.
ಸಾಹಿತ್ಯ ಗ್ರಾಮದಲ್ಲಿ ವಿವಿಧ ಮಳಿಗೆ
ಸಾಹಿತ್ಯ ಸಮ್ಮೇಳನದ ಹಿನ್ನೆಲೆ ಸಾಹಿತ್ಯ ಗ್ರಾಮದಲ್ಲಿ ವಿವಿಧ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಪುಸ್ತಕಗಳು, ಗೃಹೋಪಯೋಗಿ ವಸ್ತುಗಳು, ಜವಳಿ ಸೇರಿದಂತೆ ವಿವಿಧ ಮಳಿಗೆಗಳಿವೆ. ಸಮ್ಮೇಳನಕ್ಕೆ ಆಗಮಿಸಿದ್ದವರು ವಿವಿಧ ಮಳಿಗೆಗಳಲ್ಲಿ ಹಲವು ವಸ್ತುಗಳನ್ನು ಖರೀದಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಡಿ.ಮಂಜುನಾಥ್, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಲಕ್ಷ್ಮಣ ಕೊಡಸೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು. ನೃಪತುಂಗ ಕಾರ್ಯಕ್ರಮದ ನಿರೂಪಣೆ ಮಾಡಿದರು.
ಇದನ್ನೂ ಓದಿ – ಭದ್ರಾ ಡ್ಯಾಂನಿಂದ ನದಿಗೆ ನೀರು ಹರಿಸಲು ದಿನಾಂಕ ಫಿಕ್ಸ್, ನೀರು ಬಿಡಲು ಇದೆ 2 ಕಾರಣ, ಎಷ್ಟು ಕ್ಯೂಸೆಕ್ ಬಿಡಲಾಗುತ್ತೆ?
ಉದ್ಘಾಟನೆ ಸಮಾರಂಭದ ಬಳಿಕ ಕವಿಗೋಷ್ಠಿ, ಸಮ್ಮೇಳನಾಧ್ಯಕ್ಷರ ಬದುಕು – ಬರಹ, ಕನ್ನಡ ಸಾಹಿತ್ಯ – ಸವಾಲುಗಳು ಗೋಷ್ಠಿಗಳು ನಡೆದವು. ಸಂಜೆ ಸುವರ್ಣ ಸ್ವರಸಂಭ್ರಮ ಕಾರ್ಯಕ್ರಮ ನಡೆಯಿತು.