ಶಿವಮೊಗ್ಗ – ಬೆಂಗಳೂರು ವಿಮಾನದ ಟಿಕೆಟ್‌ ಬಕ್ಕಿಂಗ್‌ಗೆ ದಿನಾಂಕ ಫಿಕ್ಸ್‌, ಯಾವ ಮಾದರಿ ವಿಮಾನ? ಎಷ್ಟು ಸೀಟ್‌ ಇರುತ್ತೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE | 15 JULY 2023

SHIMOGA : ಸೋಗಾನೆ ವಿಮಾನ ನಿಲ್ದಾಣದಿಂದ ವಿಮಾನಯಾನ ಸೇವೆ ಆರಂಭಕ್ಕೆ ಈಗಾಗಲೆ ದಿನಾಂಕ ನಿಗದಿಯಾಗಿದೆ. ಬೆಂಗಳೂರು – ಶಿವಮೊಗ್ಗ ನಡುವೆ ಪ್ರತಿದಿನ ಇಂಡಿಗೋ ವಿಮಾನ ಹಾರಾಟ ನಡೆಸಲಿದೆ. ಜು.20ರಿಂದ ಇಂಡಿಗೋ ಸಂಸ್ಥೆ ಟಿಕೆಟ್‌ ಬುಕ್ಕಿಂಗ್‌ (Ticket Booking) ಕೂಡ ಆರಂಭಿಸಲಿದೆ.

ಆ.11ರಿಂದ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಇಂಡಿಗೋ ಸಂಸ್ಥೆಯ ವಿಮಾನಗಳು ಹಾರಾಟ ಆರಂಭಿಸಲಿವೆ. ಪ್ರತಿದಿನ ಬೆಳಗ್ಗೆ 9 ಗಂಟೆಗೆ ಬೆಂಗಳೂರಿನಿಂದ ಹೊರಟು 10.30ಕ್ಕೆ ವಿಮಾನ ಶಿವಮೊಗ್ಗ ತಲುಪಲಿದೆ. ಮಧ್ಯಾಹ್ನ 12 ಗಂಟೆಗೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 1.30ಕ್ಕೆ ಬೆಂಗಳೂರು ತಲುಪಲಿದೆ.

ಟಿಕೆಟ್‌ ಬಕ್ಕಿಂಗ್‌ ಶುರುವಾಗಲಿದೆ

Airpot.1ಇಂಡಿಗೋ ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದ ಹೆಸರು ಪ್ರಕಟಿಸಿದೆ. ಆದರೆ ಟಿಕೆಟ್‌ ಬುಕ್ಕಿಂಗ್‌ಗೆ ಅವಕಾಶ ಕಲ್ಪಿಸಿರಲಿಲ್ಲ. ಈಗ ಟಿಕೆಟ್‌ ಬುಕ್ಕಿಂಗ್‌ (Ticket Booking) ಆರಂಭಿಸಲು ಇಂಡಿಗೋ ಸಂಸ್ಥೆ ನಿರ್ಧರಿಸಿದ್ದು, ಜು.20ರಿಂದ ಬುಕ್ಕಿಂಗ್‌ ಆರಂಭವಾಗಲಿದೆ. ಈ ಸಂಬಂಧ ಏಜೆಂಟ್‌ಗಳಿಗು ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ – GOOD NEWS – ಶಿವಮೊಗ್ಗದಿಂದ 4 ಹೊಸ ಮಾರ್ಗಗಳಲ್ಲಿ ವಿಮಾನ ಹಾರಾಟಕ್ಕೆ ಅನುಮತಿ, ಯಾವ್ಯಾವ ಮಾರ್ಗಗಳು?

ನಿಗದಿತ ದಿನಂಕದಂದು ಹಾರಾಟ ಶುರು

ನಿಗದಿತ ದಿನಾಂಕದಂದು ವಿಮಾನ ಹಾರಾಟ ಶುರವಾಗಲಿದೆ. ಮೊದಲಿಗೆ ಬೆಂಗಳೂರಿನಿಂದ ಶಿವಮೊಗ್ಗ ಮತ್ತು ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನಯಾನ ಸೇವೆ ಆರಂಭವಾಗಲಿದೆ. ಜನರ ಪ್ರತಿಕ್ರಿಯೆ ಗಮನಿಸಿ ಇಂಡಿಗೋ ಸಂಸ್ಥೆ ಸೇವೆ ವಿಸ್ತರಿಸಬಹುದು. ಈಗಾಗಲೆ ರಾಜ್ಯ ಸರ್ಕಾರವೆ ವಿಮಾನ ನಿಲ್ದಾಣದ ನಿರ್ವಹಣೆ ಮಾಡುವುದಾಗಿ ತಿಳಿಸಿದೆ.ಬಿ.ವೈ.ರಾಘವೇಂದ್ರ, ಶಿವಮೊಗ್ಗ ಸಂಸದ

Shivamogga-Bengaluru-Indigo-Airlines-ATR-72-Flight

78 ಸೀಟರ್‌ನ ವಿಮಾನ ಹಾರಾಟ

ಈ ಮಾರ್ಗಕ್ಕೆ ಇಂಡಿಗೋ ಸಂಸ್ಥೆ ಎಟಿಅರ್‌ 72 ಮಾದರಿಯ ವಿಮಾನವನ್ನು ಈ ಮಾರ್ಗದಲ್ಲಿ ಹಾರಿಸಲಿದೆ. ಇದರಲ್ಲಿ 78 ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ. 2+2 ಮಾದರಿ ಸೀಟುಗಳು ಇರಲಿವೆ. ಇಬ್ಬರು ಪೈಲೆಟ್‌, ಸಿಬ್ಬಂದಿ ವಿಮಾನದಲ್ಲಿ ಇರಲಿದ್ದಾರೆ.

Modern Concrete Walls

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment