ಶಿವಮೊಗ್ಗ ಡಿಸಿ ಹೇಳಿದ ಸಕ್ಸಸ್‌ ಸೀಕ್ರೆಟ್‌, ‘ಈ ಕೆಲಸಕ್ಕೆ ದಿನಕ್ಕೆ ಸ್ವಲ್ಪ ಸಮಯ ಕೊಟ್ಟರು ಯಶಸ್ಸು ಸಾಧ್ಯʼ, ಏನದು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 29 JANUARY 2024

SHIMOGA : ಎಲ್ಲ ವಿಷಯಗಳಿಗು ಮೊಬೈಲ್‌ ಮೇಲೆ ಅವಲಂಬಿತವಾಗಲು ಸಾಧ್ಯವಿಲ್ಲ. ದಿನಕ್ಕೆ ಸ್ವಲ್ಪ ಸಮಯವಾದರು ಪುಸ್ತಕಗಳನ್ನು ಓದಬೇಕು. ಇದನ್ನು ರೂಢಿಸಿಕೊಂಡರೆ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ತಿಳಿಸಿದರು.

ಸಿಟಿಜನ್ಸ್ ಫೋರಂ, ಮಲ್ಟಿಪರ್ಪಸ್ ಸೋಷಿಯಲ್ ಸರ್ವಿಸ್ ಜಿಲ್ಲಾ ಸೊಸೈಟಿ, ಪೀಪಲ್ಸ್ ಲಾಯರ್ಸ್ ಗಿಲ್ಡ್ ಸಹಯೋಗದಲ್ಲಿ ವಕೀಲರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ಅವರ ‘ಕಳೆದ ಕಾಲ, ನಡೆದ ದೂರ’ ಕೃತಿ ಬಿಡುಗಡೆ ಮಾಡಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಮಾತನಾಡಿದರು.

ಯುವ ಜನತೆ ಉದ್ಯೋಗ ಪಡೆದ ನಂತರ ಓದುವ ಹವ್ಯಾಸ ಮರೆತಿದ್ದಾರೆ. ಜೀವನದ ಯಶಸ್ಸಿಗೆ ಓದು ಬಹಳ ಮುಖ್ಯ. ಆದ್ದರಿಂದ ಓದುವ ಅಭ್ಯಾಸ ರೂಢಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಯಾರೆಲ್ಲ ಏನೇನು ಮಾತನಾಡಿದರು?

ಜೀವನದಲ್ಲಿ ಸಾಧಿಸಲು, ಅರ್ಥಪೂರ್ಣಗೊಳಿಸಿಕೊಳ್ಳಲು ಪರಿಶ್ರಮ, ಪ್ರಾಮಾಣಿಕತೆ, ವಿನಯ ಅತಿ ಮುಖ್ಯ. ಸಕಾರಾತ್ಮಕ ಚಿಂತನೆಯ ಪುಸ್ತಕಗಳನ್ನು ಓದುವವರ ಸಂಖ್ಯೆ ಹೆಚ್ಚಾಗಬೇಕು.ನ್ಯಾ. ಶಿವರಾಜ್‌ ಪಾಟೀಲ್‌, ನಿವೃತ್ತ ನ್ಯಾಯಮೂರ್ತಿ

judge shivaraj patil, dr selvamani ias, kp sripal

ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರು ತೇಜಸ್ಸು ಕನ್ನಡ ನಾಡಿಗಲ್ಲದೇ ಇಡೀ ದೇಶಕ್ಕೆ ಹಬ್ಬಿದೆ. ಅತ್ಯಂತ ಹೃದಯವಂತ, ಮಾನವೀಯತೆಯ ಪ್ರತೀಕ ಮತ್ತು ಅತ್ಯಂತ ಸರಳ ವ್ಯಕ್ತಿ. ಅವರು ಕನ್ನಡದ ಕಣ್ಮಣಿ. ಕನ್ನಡದಲ್ಲಿಯೇ ಕೃತಿ ಬರೆದಿದ್ದಾರೆ. ಅವರ ಮೊಬೈಲ್ ಸಂದೇಶಗಳು ಕೂಡ ಕನ್ನಡದಲ್ಲಿಯೇ ಇರುತ್ತವೆ. ಈ ನಾಡಿಗೆ, ಭಾಷೆಗೆ ಅವರು ಅತ್ಯಂತ ಗೌರವ ನೀಡಿದ್ದಾರೆ.ಕೆ.ಪಿ.ಶ್ರೀಪಾಲ್‌, ಪೀಪಲ್ಸ್ ಲಾಯರ್ಸ್ ಗಿಲ್ಡ್ ಸಂಚಾಲಕ

ಸಿಟಿಜನ್ ಫೋರಂನ ಅಧ್ಯಕ್ಷ ಕೆ.ಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಟಿ.ಆರ್. ಅಶ್ವಥ ನಾರಾಯಣ ಶೆಟ್ಟಿ, ಎರಡನೆ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಶರಾದ ಬಿ.ಆರ್.ಪಲ್ಲವಿ, ವಕೀಲರ ಸಂಘದ ಅಧ್ಯಕ್ಷ ಬಿ.ಜಿ.ಶಿವಮೂರ್ತಿ, ಎಸ್‌ಎಂಎಸ್‌ಎಸ್‌ಎಸ್‌ನ ನಿರ್ದೇಶಕ ಫಾದರ್ ಕ್ಲಿಫರ್ಡ್ ರೋಷನ್ ಪಿಂಟೊ ಮತ್ತಿತರರಿದ್ದರು.

ಇದನ್ನೂ ಓದಿ – ಶಿವಮೊಗ್ಗ ಜಿಲ್ಲಾಧಿಕಾರಿ ವರ್ಗಾವಣೆ, ಹೊಸ ಡಿಸಿ ಯಾರು? ಇಲ್ಲಿದೆ ಅವರ ಕುರಿತ 3 ಪ್ರಮುಖಾಂಶ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment