ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್ಗೆ ಪ್ರವೇಶಾತಿ ಆರಂಭ
ಶಿವಮೊಗ್ಗ ಲೈವ್.ಕಾಂ | SHIMOGA NEWS | 5 MAY 2021
ಮೊದಲ ಡೋಸ್ ಲಸಿಕೆ ಪಡೆಯಲು ಬಂದುವರಿಗೆ ಇವತ್ತು ಶಿವಮೊಗ್ಗ ನಗರದ ವಿವಿಧೆಡೆ ಲಸಿಕೆ ಕೊಡದೆ ಕಳುಹಿಸಲಾಗುತ್ತಿದೆ. ಎರಡನೆ ಡೋಸ್ ಪಡೆಯಲು ಬಂದವರಿಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ.
ಶಿವಮೊಗ್ಗದ ಆಟೋ ಕಾಂಪ್ಲೆಕ್ಸ್ ಬಳಿಯ ಶ್ರೀರಾಮನಗರದ ಆರೋಗ್ಯ ಕೇಂದ್ರದಲ್ಲಿ ಲಸಿಕೆಗಾಗಿ ಜನರು ಬೆಳಗ್ಗೆಯಿಂದಲೇ ಕ್ಯೂನಲ್ಲಿ ನಿಂತಿದ್ದರು. ಆದರೆ ಲಸಿಕೆ ಸ್ಟಾಕ್ ಇಲ್ಲ ಎಂದು ಸಿಬ್ಬಂದಿಗಳು ತಿಳಿಸಿದರು. ಎರಡನೆ ಡೋಸ್ ಪಡೆಯುವವರಿಗೆ ಮಾತ್ರ ಲಸಿಕೆ ನೀಡಲಾಗುತ್ತದೆ ಎಂದರು. ಇದರಿಂದ ಕ್ಯೂನಲ್ಲಿ ನಿಂತಿದ್ದವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಾದ್ಯಂತ ಲಸಿಕೆ ಕೊರತೆ ಉಂಟಾಗಿದೆ. ಹಲವು ಕಡೆ ಲಸಿಕೆ ಇಲ್ಲ ಎಂದು ಬೋರ್ಡ್ ಹಾಕಲಾಗಿದೆ. ಆರೋಗ್ಯ ಸೇತು ಅಪ್ಲಿಕೇಷನ್ನಲ್ಲಿ ಬುಕ್ ಮಾಡಿಕೊಂಡು ಬನ್ನಿ ಎಂದು ಆರೋಗ್ಯ ಸಿಬ್ಬಂದಿ ತಿಳಿಸುತ್ತಿದ್ದಾರೆ. ಹಲವು ಹಿರಿಯ ನಾಗರಿಕರು ತಮ್ಮ ಬಳಿ ಅಂತಹ ಮೊಬೈಲ್ಗಳಿಲ್ಲ ಅನ್ನುತ್ತಿದ್ದಾರೆ. ಇನ್ನು, ಬುಕ್ ಮಾಡಿಕೊಂಡು ಬಂದರೂ ಲಸಿಕೆ ಸಿಗುತ್ತಿಲ್ಲ.
ಇವತ್ತಿನಿಂದ ಮೊದಲ ಡೋಸ್ ಲಸಿಕೆ ಪಡೆಯಲು ಬರುವವರಿಗೆ ಲಸಿಕೆ ನೀಡದಂತೆ ತಿಳಿಸಲಾಗಿದೆ ಎಂದು ಸುದ್ದಿ ಹಬ್ಬಿದೆ. ಲಸಿಕೆ ಸ್ಟಾಕ್ ಬಂದ ಬಳಿಕ ಎಲ್ಲರಿಗೂ ಲಸಿಕೆ ಕೊಡುವಂತೆ ಸೂಚಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com






