ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA, 14 AUGUST 2024 : ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಒಕ್ಕೂಟದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆ ಫಲಿತಾಂಶ (Result) ಪ್ರಕಟವಾಗಿದೆ. ಬೆಳಗ್ಗೆ ಮತದಾನ ನಡೆದಿತ್ತು. ಸಂಜೆ ವೇಳೆಗೆ ಮತ ಎಣಿಕೆ ಪೂರ್ಣಗೊಂಡು ಫಲಿತಾಂಶ ಪ್ರಕಟಿಸಲಾಗಿದೆ. ಶಿವಮೊಗ್ಗ ತಹಶೀಲ್ದಾರ್ ಬಿ.ಎನ್.ಗಿರೀಶ್ ಅವರು ರಿಟರ್ನಿಂಗ್ ಆಫೀಸರ್ ಆಗಿದ್ದರು.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಶಿವಮೊಗ್ಗ ವಿಭಾಗ
ಅಭ್ಯರ್ಥಿ | ತಾಲೂಕು | ಪಡೆದ ಮತ |
ಆನಂದ.ಡಿ | ಭದ್ರಾವತಿ | 131 |
ಎಸ್.ಕುಮಾರ್ | ಭದ್ರಾವತಿ | 115 |
ಜಗದೀಶ್ ತ್ಯಾಜ್ಯವಳ್ಳಿ | ಶಿವಮೊಗ್ಗ | 47 |
ಕೆ.ಎಲ್.ಜಗದೀಶ್ವರ | ಶಿವಮೊಗ್ಗ | 105 |
ದಿನೇಶ್. ಹೆಚ್.ಬಿ | ಶಿವಮೊಗ್ಗ | 115 |
ಶಿವಮೊಗ್ಗ ವಿಭಾಗದಲ್ಲಿ ಚಲಾವಣೆಯಾಗಿದ್ದು 264 ಮತಗಳು. ಈ ಪೈಕಿ ಎರಡು ಮತಗಳು ತಿರಸ್ಕೃತಗೊಂಡಿವೆ. ಆರ್.ಎಂ.ಮಂಜುನಾಥ್ ಗೌಡ ಅವಿರೋಧ ಆಯ್ಕೆಯಾಗಿದ್ದಾರೆ. ಭದ್ರಾವತಿಯಿಂದ ಸ್ಪರ್ಧಿಸಿದ್ದ ಶಿಮುಲ್ ಮಾಜಿ ಅಧ್ಯಕ್ಷ ಡಿ.ಆನಂದ್, ಶಿವಮೊಗ್ಗ ತಾಲೂಕಿನಿಂದ ಸ್ಪರ್ಧಿಸಿದ್ದ ಹೆಚ್.ಬಿ.ದಿನೇಶ್ ಬಹುಮತ ಪಡೆದಿದ್ದಾರೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಸಾಗರ ವಿಭಾಗ
ಅಭ್ಯರ್ಥಿ | ತಾಲೂಕು | ಪಡೆದ ಮತ |
ಗಂಗಾಧರಪ್ಪ | ಸೊರಬ | 109 |
ದಯಾನಂದ ಗೌಡ್ರು | ಸೊರಬ | 124 |
ಭೂಕಾಂತ್ | ಶಿಕಾರಿಪುರ | 111 |
ಶಿವಶಂಕರಪ್ಪ | ಶಿಕಾರಿಪುರ | 162 |
ಸಾಗರ ವಿಭಾಗದಲ್ಲಿ ಚಲಾವಣೆಯಾಗಿದ್ದು 255 ಮತಗಳಿದ್ದವು. ವಿದ್ಯಾಧರ್ ಅವಿರೋಧ ಆಯ್ಕೆಯಾಗಿದ್ದಾರೆ. ಅವರದ್ದೆ ಸಿಂಡಿಕೇಟ್ನಲ್ಲಿದ್ದ ಟಿ.ಶಿವಶಂಕರಪ್ಪ, ಟಿ.ಎಸ್.ದಯಾನಂದ ಗೌಡ್ರು ಜಯಭೇರಿ ಭಾರಿಸಿದ್ದಾರೆ.
ದಾವಣಗೆರೆ ವಿಭಾಗ
ಅಭ್ಯರ್ಥಿ | ತಾಲೂಕು | ಪಡೆದ ಮತ |
ಅನಿಲ್ ಕುಮಾರ್ | ಹೊನ್ನಾಳಿ | 133 |
ಚೇತನ್ ಸೋಮಣ್ಣ | ದಾವಣಗೆರೆ | 211 |
ಜಗದೀಶಪ್ಪ ಬಣಕಾರ್ | ಹರಿಹರ | 182 |
ನಾಗರಾಜ್ ಕತ್ತಲಗೆರೆ | ಚನ್ನಗಿರಿ | 114 |
ಪಾಲಾಕ್ಷಪ್ಪ | ದಾವಣಗೆರೆ | 143 |
ಬಸಪ್ಪ | ಚನ್ನಗಿರಿ | 176 |
ಬಸವರಾಜಪ್ಪ | ಹೊನ್ನಾಳಿ | 164 |
ಹುನುಮನಹಳ್ಳಿ ಗೌಡ್ರು | ಹೊನ್ನಾಳಿ | 166 |
ಶಾಂತವೀರಪ್ಪ | ಹರಿಹರ | 92 |
ಸುರೇಶ್ | ನ್ಯಾಮತಿ | 38 |
ದಾವಣಗೆರೆ ವಿಭಾಗದಲ್ಲಿ 361 ಮತಗಳು ಚಲಾವಣೆಯಾಗಿದ್ದವು. 3 ಮತಗಳು ತಿರಸ್ಕೃತಗೊಂಡಿವೆ. ಶಿಮುಲ್ ಮಾಜಿ ಉಪಾಧ್ಯಕ್ಷ ಹೆಚ್.ಕೆ.ಬಸಪ್ಪ, ಜಗದೀಶಪ್ಪ ಬಣಕಾರ್, ಚೇತನ್ ಎಸ್.ನಾಡಿಗೇರ್, ಬಿ.ಜಿ.ಬಸವರಾಜಪ್ಪ ಆಯ್ಕೆಯಾಗಿದ್ದಾರೆ.
ಚಿತ್ರದುರ್ಗ ವಿಭಾಗ
ಅಭ್ಯರ್ಥಿ | ತಾಲೂಕು | ಪಡೆದ ಮತ |
ಕಾಂತರಾಜ್ | ಹೊಸದುರ್ಗ | 57 |
ತಿಪ್ಪೇಸ್ವಾಮಿ | ಚಿತ್ರದುರ್ಗ | 99 |
ಯಶವಂತರಾಜು | ಹಿರಿಯೂರು | 79 |
ರಾಮೇಶಪ್ಪ | ಹೊಸದುರ್ಗ | 56 |
ರವಿಕುಮಾರ್ | ಹೊಸದುರ್ಗ | 163 |
ರೇವಣಸಿದ್ದಪ್ಪ | ಚಿತ್ರದುರ್ಗ | 109 |
ವೀರಭದ್ರಬಾಬು | ಚಳ್ಳಕೆರೆ | 106 |
ಶಂಕರಲಿಂಗಪ್ಪ | ಹೊಸದುರ್ಗ | 42 |
ಶಿವಣ್ಣ | ಹಿರಿಯೂರು | 100 |
ಶಿವಾನಂದ | ಹೊಳಲ್ಕೆರೆ | 33 |
ಶೇಖರಪ್ಪ | ಹೊಳಲ್ಕೆರೆ | 106 |
ಸಂಜೀವಮೂರ್ತಿ | ಚಳ್ಳಕೆರೆ | 134 |
ಚಿತ್ರದುರ್ಗ ವಿಭಾಗದಲ್ಲಿ 289 ಮತಗಳು ಚಲಾವಣೆಯಾಗಿದೆ. 11 ಮತಗಳು ತಿರಸ್ಕೃತವಾಗಿವೆ. ಈ ವಿಭಾಗದ ಜಿ.ಪಿ.ರೇವಣಸಿದ್ದಪ್ಪ, ಶೇಖರಪ್ಪ.ಜಿ.ಬಿ, ಸಂಜೀವಮೂರ್ತಿ, ಬಿ.ಆರ್.ರವಿಕುಮಾರ್ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ ⇒ ಶಿವಮೊಗ್ಗ ಒಕ್ಕಲಿಗರ ಸಂಘದ ಚುನಾವಣೆ, ಫಲಿತಾಂಶ ಪ್ರಕಟ, ಯಾರೆಲ್ಲ ಗೆದ್ದಿದ್ದಾರೆ?