| No.1 News Website |
| ಶಿವಮೊಗ್ಗ ಲೈವ್ ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್ ಹೊಂದಿರುವ ವೆಬ್‌ಸೈಟ್. ನೀವು ನಮ್ಮ ವಾಟ್ಸಪ್ ಗ್ರೂಪ್ ಸೇರಲು » ಇಲ್ಲಿ ಕ್ಲಿಕ್ ಮಾಡಿ. |
![]()
ಶಿವಮೊಗ್ಗ: ಕಾಂಗ್ರೆಸ್ ಕೈಗೊಂಡಿರುವ ವೋಟ್ ಚೋರ್ – ಗದ್ದಿ ಛೋಡ್ ಅಭಿಯಾನ ನ.8ಕ್ಕೆ ಒಂದು ವರ್ಷ ಪೂರೈಸುತ್ತಿದ್ದು, ಜಿಲ್ಲೆಗೆ ನೀಡಿದ್ದ 1.50 ಲಕ್ಷ ಸಹಿ (Signature) ಸಂಗ್ರಹವೂ ಪೂರ್ಣವಾಗಲಿದೆ. ಈ ದಾಖಲೆಯನ್ನು ನ.11ರಂದು ಕೆಪಿಸಿಸಿಗೆ ಸಲ್ಲಿಸಲಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ತಿಳಿಸಿದರು.
ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ ಭಂಡಾರಿ, ಮತದಾನದಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ತಡೆಯುವ ದೃಷ್ಟಿಯಿಂದ ಅಭಿಯಾನ ಆರಂಭಿಸಲಾಗಿತ್ತು. ಈ ಮೂಲಕ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಮತಗಳ್ಳತನದ ಬಗ್ಗೆ ಅರಿವು ಮೂಡಿಸುವ ಜತೆಗೆ ಸಹಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯಲ್ಲಿ ಕಳೆದ ತಿಂಗಳಿಂದ ಸಹಿ ಸಂಗ್ರಹ ಅಭಿಯಾನ ನಡೆಸಲಾಗಿದೆ ಎಂದರು.
ರಾಜ್ಯಕ್ಕೆ 1,11,11,111 ಗುರಿ
ರಾಜ್ಯ ಕಾಂಗ್ರೆಸ್‌ಗೆ 1,11,11,111 ಸಹಿ ಸಂಗ್ರಹದ ಗುರಿ ನೀಡಲಾಗಿತ್ತು. ಈಗಾಗಲೆ ಒಂದು ಕೋಟಿಗೂ ಅಧಿಕ ಸಹಿ ಸಂಗ್ರಹಿಸಲಾಗಿದೆ. ನಮ್ಮ ಜಿಲ್ಲೆಗೆ 1.50 ಲಕ್ಷ ಸಹಿ ಸಂಗ್ರಹದ ಗುರಿ ಇದ್ದು, 1.40 ಸಹಿ ಸಂಗ್ರಹಿಸಲಾಗಿದೆ. ಇನ್ನು ಮೂರು ದಿನದಲ್ಲಿ ಉಳಿದ ಗುರಿ ಸಾಧಿಸಿ, ನ.11ರಂದು ಇದನ್ನು ಕೆಪಿಸಿಸಿಗೆ ಸಲ್ಲಿಸಲಿದ್ದೇವೆ ಎಂದು ತಿಳಿಸಿದರು.
![]()
ಜನರಲ್ಲಿ ತಿಳಿವಳಿಕೆ ಮೂಡಿಸಲು ಅಭಿಯಾನ
ಹಿಂದೆ ವಿವಿಧ ಪಕ್ಷದ ನಾಯಕರು ಇವಿಎಂ ಹ್ಯಾಕ್ ಮಾಡಿ ಮತಗಳ್ಳತನ ಮಾಡುತ್ತಿದ್ದರು. ನಂತರದ ದಿನಗಳಲ್ಲಿ ವಿವಿಧ ತನಿಖಾ ಸಂಸ್ಥೆಗಳಿಂದ ಶಾಸಕರನ್ನು ಬೆದರಿಸಿ ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ ಈಗ ಮತ ಕಳ್ಳತನಕ್ಕೇ ಮುಂದಾಗಿದ್ದಾರೆ. ಇದನ್ನು ಜನ ಸಾಮಾನ್ಯರಿಗೆ ತಿಳಿಸುವುದು ಹಾಗೂ ಪ್ರಜಾಪ್ರಭುತ್ವದ ಕಗ್ಗೋಲೆ ತಡೆಯುವುದು ವೋಟ್ ಚೋರ್ – ಗದ್ದಿ ಛೋಡ್ ಅಭಿಯಾನದ ಉದ್ದೇಶವಾಗಿದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರಸನ್ನಕುಮಾರ್, ಪ್ರಮುಖರಾದ ಎಸ್.ಟಿ.ಹಾಲಪ್ಪ, ದೇವಿಕುಮಾರ್, ಲಕ್ಷ್ಮೀಕಾಂತ್ ಮತ್ತಿತರರಿದ್ದರು.
ಇದನ್ನೂ ಓದಿ » ಸವಳಂಗ ರಸ್ತೆಯಲ್ಲಿ ಕೊಮ್ಮನಾಳು ವ್ಯಕ್ತಿಯ ಬಲಿ ಪಡೆದ ಅಪರಿಚಿತ ವಾಹನ, ಹೇಗಾಯ್ತು ಘಟನೆ?
Signature
ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್ ಮೇಲೆ ಕ್ಲಿಕ್ ಮಾಡಿ, ಸುದ್ದಿ ಓದಿ.
- ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಾಲಿವುಡ್ ನಟರ ಫೋಟೊಗಳಿಗೆ ಚಪ್ಪಲಿ ಏಟು, ಕಾರಣವೇನು?
- ಆಯನೂರು ಸೇರಿ ಹಲವೆಡೆ ಡಿ.17ರಂದು ಕರೆಂಟ್ ಇರಲ್ಲ, ಎಲ್ಲೆಲ್ಲಿ? ಓದಲು ಇಲ್ಲಿ ಕ್ಲಿಕ್ ಮಾಡಿ
- ಅಡಿಕೆ ಧಾರಣೆ | 16 ಡಿಸೆಂಬರ್ 2025 | ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್?
- ತಾಳಗುಪ್ಪ – ಬೆಂಗಳೂರು ರೈಲು ಅರಸೀಕೆರೆವರೆಗೆ ಮಾತ್ರ, ಯಶವಂತಪುರ ಎಕ್ಸ್ಪ್ರೆಸ್ಗೆ ಬದಲಿ ಮಾರ್ಗ
- ಶಿವಮೊಗ್ಗದಲ್ಲಿ ಮೂರು ದಿನ ಕಣ್ಣಿನ ಉಚಿತ ತಪಾಸಣೆ, ಎಲ್ಲಿ? ಯಾರೆಲ್ಲ ಭಾಗವಹಿಸಬಹುದು?
- ಶಿವಮೊಗ್ಗದ ಬಸವನಗುಡಿ, ವಿದ್ಯಾನಗರದಲ್ಲಿ ಲೋಕಾಯುಕ್ತ ದಾಳಿ, ದಾಖಲೆಗಳ ಪರಿಶೀಲನೆ
- ಶಿವಮೊಗ್ಗದಲ್ಲಿ 300 ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ, ಇಲ್ಲಿವೆ ಸಾಲು ಸಾಲು ಫೋಟೊಗಳು
- ಇವತ್ತು ಉತ್ತರಾಷಾಢ ನಕ್ಷತ್ರ, ದ್ವಾದಶಿ, ರಾಶಿ ಫಲ ಹೇಗಿದೆ? – ಓದಲು ಇಲ್ಲಿ ಕ್ಲಿಕ್ ಮಾಡಿ
![]()