
ಶಿವಮೊಗ್ಗ ಲೈವ್.ಕಾಂ | SHIMOGA NEWS | 12 ಮೇ 2020
ಶಿವಮೊಗ್ಗದ ಟ್ರಾಫಿಕ್ ಪೊಲೀಸ್ ಠಾಣೆಗೆ ನಾಗರಹಾವು ನುಗಿತ್ತು. ಇದರಿಂದ ಠಾಣೆಯಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.
ಉರಗ ಪ್ರೇಮಿ ಕಾಚಿನಕಟ್ಟೆಯ ಆಕಾಶ್ ನಾಗರ ಹಾವನ್ನು ಹಿಡಿದು, ಸುರಕ್ಷಿತವಾಗಿ ಬಿಟ್ಟು ಬಂದಿದ್ದಾರೆ. ವಿದ್ಯಾನಗರದಲ್ಲಿರುವ ಪೂರ್ವ ಸಂಚಾರಿ ಪೊಲೀಸ್ ಠಾಣೆಗೆ ನುಗ್ಗಿದ್ದ ಹಾವು, ಕೆಲಕಾಲ ಬಾಗಿಲು ಬಳಿ ಅವಿತು ಕುಳಿತಿತ್ತು. ಇದನ್ನು ಗಮನಿಸಿದ ಪೊಲೀಸರು ಕೂಡಲೇ ಆಕಾಶ್‍ಗೆ ಮಾಹಿತಿ ನೀಡಿದ್ದರು.
ಕೆಲ ತಿಂಗಳ ಹಿಂದೆಯು ಈ ಠಾಣೆಯೊಳಗೆ ನಾಗರ ಹಾವು ನುಗ್ಗಿತ್ತು. ಆಗ ಸ್ನೇಕ್ ಕಿರಣ್ ಅವರು ಹಾವು ಹಿಡಿದಿದ್ದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]