ಶಿವಮೊಗ್ಗದ ಲೈವ್.ಕಾಂ | SHIMOGA NEWS | 1 ಫೆಬ್ರವರಿ 2022
ಮನೆಯೊಂದರ ಬಾತ್ ರೂಮ್ ಪೈಪ್ ಒಳಗೆ ಸೇರಿದ್ದ ನಾಗರ ಹಾವನ್ನು ಉರಗ ರಕ್ಷಕ ಸ್ನೇಕ್ ಕಿರಣ್ ಅವರು ಸೆರೆ ಹಿಡಿದಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗದ ಊರುಗಡೂರು ಸಮೀಪದ ಮದಾರಿಪಾಳ್ಯದ ಮೊಹಮದ್ ಜಬೀವುಲ್ಲಾ ಎಂಬುವವರ ಮನೆಯ ಬಾತ್ ರೂಮ್ ಪೈಪ್ ಒಳಗೆ ನಾಗರ ಹಾವು ಸೇರಿತ್ತು. ಇಡೀ ದಿನ ಕಾದು ರಾತ್ರಿ ಹೊತ್ತಿಗೆ ರಕ್ಷಣೆ ಮಾಡಿ, ಕಾಡಿಗೆ ಬಿಡಲಾಯಿತು.
ಜಬೀವುಲ್ಲಾ ಅವರ ಮನೆಯ ಬಾತ್ ರೂಮ್ ಪೈಪ್ ಒಳಗೆ ನಾಗರ ಹಾವು ಸೇರಿಕೊಂಡಿತ್ತು. ಇದನ್ನು ಕಂಡು ಮನೆಯವರು ಆತಂಕಕ್ಕೀಡಾಗಿ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿದ್ದರು.
ಇಡೀ ದಿನ ಕಾದರೂ ನಾಗರ ಹಾವು ಪೈಪ್ ಒಳಗಿಂದ ಹೊರಗೆ ಬರಲಿಲ್ಲ. ರಾತ್ರಿ 10 ಗಂಟೆ ಹೊತ್ತಿಗೆ ನಾಗರ ಹಾವು ಸ್ವಲ್ಪ ಹೊರಗೆ ಬಂದಿದೆ. ಆಗ ಕಿರಣ್ ಅವರು ನಾಗರ ಹಾವನ್ನು ರಕ್ಷಣೆ ಮಾಡಿದ್ದಾರೆ.
shimoga city | About Shivamogga Live