ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 17 JANUARY 2023
SHIMOGA | ಸೋಗಾನೆಯಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣ (airport) ಕಾಮಗಾರಿ ಬಹುತೇಕ ಮುಗಿದಿದೆ. ಕೊನೆಯ ಹಂತದ ಕೆಲಸಗಳು ನಡೆಯುತ್ತಿವೆ. ಈ ನಡುವೆ ವಿಮಾನ ನಿಲ್ದಾಣದಲ್ಲಿನ ಉದ್ಯೋಗ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭವಾಗಿದೆ.

ಏನಿದು ಅಭಿಯಾನ?
ವಿಮಾನ ನಿಲ್ದಾಣ (airport) ಕಾಮಗಾರಿ ಪೂರ್ಣಗೊಂಡಿದೆ. ಇನ್ನೇನು ಇಲ್ಲಿ ಉದ್ಯೋಗವಕಾಶಗಳು ಲಭಿಸುವ ಸಾಧ್ಯತೆ ಇದೆ. ಈ ಸಂಬಂಧ ಅಭಿಯಾನ ಆರಂಭವಾಗಿದೆ.
‘ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ ಕೆಲಸ ಕೊಡಬೇಕು. ಇಲ್ಲವಾದಲ್ಲಿ ಮಲೆನಾಡು ಕೂಡ ಬೆಂಗಳೂರಿನ ಹಾಗೆ ವಲಸಿಗರ ಪಾಲಾಗಲಿದೆ’ ಎಂದು ಅಭಿಯಾನ ಆರಂಭಿಸಲಾಗಿದೆ. ಈ ಅಭಿಯಾನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಸ್ಪಂದನೆ ಸಿಗುತ್ತಿದೆ.
ಫೇಸ್ ಬುಕ್, ವಾಟ್ಸಪ್ ಮೂಲಕ ದೊಡ್ಡ ಸಂಖ್ಯೆ ಜನರು ಫೋಟೊ ಷೇರ್ ಮಾಡಿಕೊಳ್ಳುತ್ತಿದ್ದಾರೆ. ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಆಗ್ರಹಿಸುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಟ್ಯಾಗ್ ಮಾಡಿ ಮನವಿ ಸಲ್ಲಿಸಲಾಗುತ್ತಿದೆ.
ಇದನ್ನೂ ಓದಿ – ಶಿವಮೊಗ್ಗದ ಈ ಬ್ರ್ಯಾಂಡ್ ಭಾರಿ ಫೇಮಸ್, ವಿದೇಶಕ್ಕು ತಲುಪುತ್ತಿದೆ ಮಲೆನಾಡ ಟೇಸ್ಟ್, MN ಪಿಕಲ್ಸ್ ಬಗ್ಗೆ ನಿಮಗೆಷ್ಟು ಗೊತ್ತು?
LATEST NEWS
- ಸಾವಿನಲ್ಲು ಸಾರ್ಥಕತೆ ಮೆರೆದ ಶಿರಾಳಕೊಪ್ಪದ ಯುವಕ, ಬಹು ಅಂಗಾಂಗ ದಾನ, ಆಗಿದ್ದೇನು?

- ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ನಟಿ ರಂಜನಿ ರಾಘವನ್ ಉಪನ್ಯಾಸ, ಯಾವಾಗ? ಏನು ವಿಷಯ?

- ‘ಶಾಸಕರಿಗೆ ಹೇಳಿ ನೀನೆ ತಡೆದಿದ್ದೀಯ’ ಎಂದು ಆರೋಪಿಸಿ ವ್ಯಕ್ತಿ ಮೇಲೆ ಚಪ್ಪಲಿಯಿಂದ ಹಲ್ಲೆ, ಏನಿದು ಪ್ರಕರಣ?

- ಶಿವಮೊಗ್ಗದಲ್ಲಿ ರಾಷ್ಟ್ರಮಟ್ಟದ ಬಯಲು ಕುಸ್ತಿ, ಹೇಗಿತ್ತು ಎರಡನೇ ದಿನದ ಕಾದಾಟ? ಯಾರೆಲ್ಲ ಗೆದ್ದರು?

- ತೀರ್ಥಹಳ್ಳಿಯಲ್ಲಿ ಫಾರ್ಚುನರ್ ಕಾರಿನಲ್ಲಿ ಬಂದು ಇಂಜಿನಿಯರ್ಗೆ ಬೆದರಿಸಿ ಹಣ ವಸೂಲಿ, ಏನಿದು ಕೇಸ್?

About The Editor
ನಿತಿನ್ ಆರ್.ಕೈದೊಟ್ಲು

CLICK HERE TO JOIN SHIVAMOGGA LIVE WHATSAPP GROUP



