ಶಿವಮೊಗ್ಗ ಲೈವ್.ಕಾಂ | SHIMOGA NEWS | 31 MAY 2021
ಕಠಿಣ ಲಾಕ್ ಡೌನ್ ಜಾರಿಯಾದರೂ ಅನಗತ್ಯವಾಗಿ ತಿರುಗಾಡುವವರಿಗೆ ಬಿಸಿ ಮುಟ್ಟಿಸಲು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ಫೀಲ್ಡಿಗಿಳಿದಿದ್ದರು. ನಗರದ ಪ್ರಮುಖ ಕಡೆ ವಾಹನಗಳನ್ನು ತಪಾಸಣೆ ನಡೆಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸವಳಂಗ ರಸ್ತೆಯ ರೈಲ್ವೆ ಗೇಟ್ ಬಳಿ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ವಾಹನಗಳ ತಪಾಸಣ ನಡೆಸಿದರು. ಈ ವೇಳೆ ನೆಪಗಳನ್ನು ಹೇಳಿದವರ ವಾಹನಗಳನ್ನು ಸೀಜ್ ಮಾಡಿಸಿದರು.
‘ಮದುವೆಗೆ ಹೋಗ್ತಿದೀವಿ..’
ಮದುವೆ ಮನೆ ನೆಪದಲ್ಲಿ ಬಂದ ಕಾರೊಂದನ್ನು ಜಿಲ್ಲಾ ರಕ್ಷಣಾಧಿಕಾರಿ ಅವರು ತಡೆದು ಮಾಹಿತಿ ಕೇಳಿದರು. ಮದುವೆಗೆ ಹೋಗತ್ತಿರುವುದಾಗಿ ಕಾರಿನಲ್ಲಿದ್ದವರು ನೆಪ ಹೇಳಿದರು. ಆದರೆ ತಹಶೀಲ್ದಾರ್ ಅನುಮತಿ ಪತ್ರ ತೋರಿಸದೆ ಇದ್ದಿದ್ದರಿಂದ ವಾಹನ ಸೀಜ್ ಮಾಡುವಂತೆ ಎಸ್‍ಪಿ ಸೂಚಿಸಿದರು.
ಲೇಟಾಗಿದ್ದ ಸರ್ಕಾರಿ ನೌಕರನಿಗೆ ಬಿಸಿ
ಬಿಎಸ್‍ಎನ್‍ಎಲ್ ಉದ್ಯೋಗಿಯೊಬ್ಬರು 12 ಗಂಟೆ ಹೊತ್ತಿಗೆ ಚೆಕ್ ಪೊಸ್ಟ್‍ಗೆ ಬಂದಿದ್ದರು. ತಾವು ಕಚೇರಿಗೆ ತೆರಳುತ್ತಿದ್ದೇನೆ ಎಂದರು. ಇಷ್ಟು ತಡವಾಗಿ ಕಚೇರಿಗೆ ಹೋಗುತ್ತಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್, ಸೀನಿಯರ್‍ಗಳಿಗೆ ಫೋನ್ ಮಾಡಿ ಕೊಡುವಂತೆ ಸೂಚಿಸಿ ಕಾರು ಪಕ್ಕಕ್ಕೆ ನಿಲ್ಲಿಸಲು ಸೂಚಿಸಿದರು.
ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ಸಂಜೀವ್ ಕುಮಾರ್, ಪಿಎಸ್‍ಐ ಮಂಜುನಾಥ್ ಮತ್ತು ಸಿಬ್ಬಂದಿ ಅವರು ಜಿಲ್ಲಾ ರಕ್ಷಣಾಧಿಕಾರಿ ಅವರಿಗೆ ಸಾಥ್ ನೀಡಿದರು.
ಜಿಲ್ಲಾ ರಕ್ಷಣಾಧಿಕಾರಿ ತಪಾಸಣೆಯ ವಿಡಿಯೋ ರಿಪೋರ್ಟ್ ಇಲ್ಲಿದೆ
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]