SHIVAMOGGA LIVE NEWS | 15 ಮಾರ್ಚ್ 2022
ತಾಂತ್ರಿಕ ತೊಂದರೆಯಿಂದ ವಿದ್ಯುತ್ ಕಂಬದಿಂದ ಬೆಂಕಿ ಕಿಡಿ ಬಿದ್ದು, ಮರಕ್ಕೆ ಬೆಂಕಿ ಹೊತ್ತಿಕೊಂಡಿದೆ. ವಿಚಾರ ತಿಳಿಸಿ ಬಹು ಹೊತ್ತಾದರೂ ಸ್ಥಳಕ್ಕೆ ಬಾರದ ಮೆಸ್ಕಾಂ ಸಿಬ್ಬಂದಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗ ವಿನೋಬನಗರ 60 ಅಡಿ ರಸ್ತೆ ಆಂಜನೇಯ ದೇವಸ್ಥಾನದ ಬಳಿ ಘಟನೆ ಸಂಭವಿಸಿದೆ.
ಕಿಡಿ ಬಿದ್ದು ಮರಕ್ಕೆ ಬೆಂಕಿ
ಮಧ್ಯಾಹ್ನದ ವೇಳೆ ವಿದ್ಯುತ್ ಕಂಬದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದೆ. ದಿಢೀರ್ ಬೆಂಕಿ ಹೊತ್ತಿದಂತಾಗಿ ಕಿಡಿ ಕೆಳಗೆ ಬಿದ್ದಿದೆ. ಕಂಬದ ಪಕ್ಕದಲ್ಲೇ ಇದ್ದ ಮರದ ಮೇಲೆ ಕಿಡಿ ಬಿದ್ದು, ಬೆಂಕಿ ಹೊತ್ತುಕೊಂಡಿದೆ. ಇದನ್ನು ಗಮನಿಸಿದ ಸ್ಥಳೀಯರು ಮೆಸ್ಕಾಂಗೆ ಕರೆ ಮಾಡಿ ಮಾಹಿತಿ ನೀಡಿದರು.
ಮರಕ್ಕೆ ಹೊತ್ತಿಕೊಂಡಿದ್ದ ಬೆಂಕಿ ನಂದಿಸಲು ಸ್ಥಳೀಯರು ಭಯಗೊಂಡರು. ಮೆಸ್ಕಾಂ ಸಿಬ್ಬಂದಿ ತಡವಾಗಿ ಸ್ಥಳಕ್ಕೆ ಬಂದಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಮೆಸ್ಕಾಂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಸ್ಥಳೀಯರನ್ನು ಸಮಾಧಾನಪಡಿಸಲು ವಿನೋಬನಗರ ಠಾಣೆಯಿಂದ ಪೊಲೀಸರು ಆಗಮಿಸಬೇಕಾಯಿತು.
ಇದನ್ನೂ ಓದಿ | BREAKING NEWS | ಭಾರಿ ಸ್ಪೋಟ, ಮನೆ ಸುಟ್ಟು ಭಸ್ಮ, ಗ್ರಾಮದಲ್ಲಿ ಕೆಲಕಾಲ ಆತಂಕ
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200