ನಂದಿನಿ ಗ್ರಾಹಕರಿಗೆ ಗುಡ್‌ ನ್ಯೂಸ್‌, 1 ಕೆ.ಜಿ ಬಕೆಟ್‌ ಮೊಸರು ಮಾರುಕಟ್ಟೆಗೆ ಎಂಟ್ರಿ, ಎಷ್ಟಿರುತ್ತೆ ರೇಟ್?‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟವು (ಶಿಮುಲ್) ಮಾರ್ಚ್ 1ರಿಂದ ಜಾರಿಗೆ ಬರುವಂತೆ 1 ಕೆ.ಜಿ ತೂಕದ ನಂದಿನಿ ಮೊಸರು ಬಕೆಟ್ ಅನ್ನು ಹೊಸದಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. (special discount)

ಒಂದು ಕೆ.ಜಿ ಮೊಸರು ಬಕೆಟ್‌ ದರ ₹95 ನಿಗದಿ ಮಾಡಲಾಗಿದೆ. ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವ ಆರಂಭಿಕ ಕೊಡುಗೆಯಾಗಿ ಪ್ರತಿ ಬಕೆಟ್‌ಗೆ ₹10 ರಿಯಾಯಿತಿ ನೀಡಲಾಗಿದೆ. ಹೀಗಾಗಿ ಗ್ರಾಹಕರಿಗೆ ಇದು ₹85 ದರದಲ್ಲಿ ಲಭ್ಯವಾಗಲಿದೆ ಎಂದು ಶಿಮುಲ್‌ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Nandini-Curd-1-KG-Bucket-in-Shimoga-market.

ಶಿಮುಲ್‌ ಒಕ್ಕೂಟವು ಈಗಾಗಲೇ 200 ಗ್ರಾಂ, 500 ಗ್ರಾಂ ಹಾಗೂ 5 ಕೆ.ಜಿ ಮತ್ತು 10 ಕೆ.ಜಿ ಬಕೆಟ್‌ಗಳಲ್ಲಿ ಮೊಸರನ್ನು ಮಾರಾಟ ಮಾಡುತ್ತಿದೆ. ಒಕ್ಕೂಟದ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಸರಾಸರಿ 66 ಸಾವಿರ ಕೆ.ಜಿ ಮೊಸರನ್ನು ಮಾರಾಟವಾಗುತ್ತಿದೆ.

ನಿತ್ಯ ಏಳು ಲಕ್ಷ ಕೆ.ಜಿ. ಹಾಲು ಸಂಗ್ರಹ

ತನ್ನ ವ್ಯಾಪ್ತಿಯಲ್ಲಿ ಬರುವ 1353 ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಪ್ರತಿನಿತ್ಯ ಎರಡು ಪಾಳಿಗಳಲ್ಲಿ ಸರಾಸರಿ 7.60 ಲಕ್ಷ ಕೆ.ಜಿ ಹಾಲನ್ನು ಸಂಗ್ರಹಿಸುತ್ತಿದೆ. ಈ ಹಾಲನ್ನು ಅತ್ಯಾಧುನಿಕ ಯಂತ್ರಗಳ ಮೂಲಕ ಸಂಸ್ಕರಿಸಿ, ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ.

ಇದನ್ನೂ ಓದಿ – ಸಚಿವ ಮಧು ಬಂಗಾರಪ್ಪ ಜನ್ಮದಿನ, ವಿದ್ಯಾರ್ಥಿಗಳು, ಪೌರ ಕಾರ್ಮಿಕರಿಗೆ ವಿಮಾನಯಾನ

ಒಕ್ಕೂಟವು ತನ್ನ ವ್ಯಾಪ್ತಿಯಲ್ಲಿ 1865 ಹಾಲಿನ ಡೀಲರ್‌ಗಳು, 195 ಫ್ರಾಂಚೈಸಿ ಪಾರ್ಲರ್‌ಗಳು ಹಾಗೂ 52 ಸ್ವಂತ ಪಾರ್ಲರ್‌ಗಳನ್ನು ಹೊಂದಿದೆ. ಈ ಮಾರಾಟ ಜಾಲದ ಮೂಲಕ ಪ್ರತಿನಿತ್ಯ 2.76 ಲಕ್ಷ ಲೀಟರ್ ಹಾಲು ಮತ್ತು ಸರಾಸರಿ 66 ಸಾವಿರ ಕೆ.ಜಿ ಮೊಸರನ್ನು ಮಾರಾಟ ಮಾಡಲಾಗುತ್ತಿದೆ. ನಂದಿನಿ ಬ್ರ್ಯಾಂಡ್ ಅಡಿ 150ಕ್ಕೂ ಹೆಚ್ಚು ವಿವಿಧ ಉತ್ಪನ್ನಗಳು ಹಾಗೂ ಐಸ್‌ಕ್ರೀಮ್‌ಗಳನ್ನು ಗ್ರಾಹಕರಿಗೆ ತಲುಪಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

number-1-advt-copy-new.webp

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment