ಜೆಎನ್‌ಎನ್‌ ಕಾಲೇಜಿನಲ್ಲಿ ಸದೃಡ 2.0, ರಾಜ್ಯದ ವಿವಿಧೆಡೆಯಿಂದ ಬರ್ತಿದ್ದಾರೆ ಸಾವಿರ ಸಾವಿರ ವಿದ್ಯಾರ್ಥಿಗಳು, ಏನಿದು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ : ಜೆ.ಎನ್‌.ಎನ್‌ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಮಾ.15 ರಿಂದ 18ರವರೆಗೆ ರಾಜ್ಯಮಟ್ಟದ ಅಂತರಮಹಾವಿದ್ಯಾಲಯ ಮಟ್ಟದ ಅಥ್ಲೆಟಿಕ್ಸ್‌ ಕ್ರೀಡಾಕೂಟ (Sports Meet) ಸದೃಡ 2.0 ಆಯೋಜಿಸಲಾಗಿದೆ. ವಿ‍ಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಕ್ರೀಡಾಕೂಟ ನಡೆಯುತ್ತಿದೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರಾಷ್ಟ್ರೀಯ ಶಿಕ್ಷಣ ಸಂಸ್ಥೆ (ಎನ್.ಇ.ಎಸ್‌) ಪದಾಧಿಕಾರಿಗಳು, ವ್ಯವಸ್ಥೆ ಕುರಿತು ತಿಳಿಸಿದರು.

ಯಾರೆಲ್ಲ ಏನೆಲ್ಲ ಹೇಳಿದರು?

ಕ್ರೀಡೆಯಿಂದ ವ್ಯಕ್ತಿತ್ವ ವಿಕಸನವಾಗಲಿದೆ. ಅದಕ್ಕಾಗಿ ಈ ಹಿಂದೆ ಸದೃಢ 1 ಆಯೋಜಿಸಿದ್ದೆವು. ಈಗ 2ನೇ ಅವೃತ್ತಿಯ ಸದೃಡ ಅಥ್ಲೆಟಿಕ್ಸ್‌ ಸ್ಪರ್ಧೆ ನಡೆಸಲಾಗುತ್ತಿದೆ. 220 ಕಾಲೇಜುಗಳ, 1500ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಮೂರು ದಿನ ವಿವಿಧ ಸ್ಪರ್ಧೆಗಳು ನಡೆಯಲಿದೆ. ಇದೇ ಮೊದಲ ಬಾರಿ ಇ.ಡಿ.ಎಂ ಸಾಫ್ಟ್‌ವೇರ್‌ ಬಳಸಿ ತೀರ್ಪು ನೀಡಲಾಗುತ್ತಿದೆ. ಅತ್ಯಂತ ಉನ್ನತ ಮಟ್ಟದ ಕ್ರೀಡಾಕೂಟ ಇದಾಗಿದೆ.

– ಜಿ.ಎಸ್.ನಾರಾಯಣರಾವ್‌, ಅಧ್ಯಕ್ಷ, ರಾಷ್ಟ್ರೀಯ ಶಿಕ್ಷಣ ಸಮಿತಿ

NES-President-G-Narayanarao-press-meet

2013ರಲ್ಲಿ ಸದೃಡ 1 ಹೆಸರಿನಲ್ಲಿ ಕ್ರೀಡಾಕೂಟ ಆಯೋಜಿಸಲಾಗಿತ್ತು. ಮತ್ತೊಮ್ಮೆ ಕ್ರೀಡಾಕೂಟ (Sports Meet) ಆಯೋಜನೆಗೆ ವಿ.ಟಿ.ಯು ಅನುಮತಿ ನೀಡಿದೆ. ಈಗ ಸದೃಡ 2.0 ಹೆಸರಿನಲ್ಲಿ ಕ್ರೀಡಾಕೂಟ ನಡೆಸಲಾಗುತ್ತಿದೆ. ವಿ.ಟಿ.ಯು ವ್ಯಾಪ್ತಿಯ ಜೆ.ಎನ್‌.ಎನ್‌ ಹೊರತು ಮತ್ಯಾವ ಕಾಲೇಜಿಗು ಎರಡನೆ ಬಾರಿ ಕ್ರೀಡಾಕೂಟ ಆಯೋಜಿಸಲು ಅವಕಾಶ ಲಭಿಸಿಲ್ಲ. ಜೆ.ಎನ್‌.ಎನ್‌ ಇಂಜಿನಿಯರಿಂಗ್‌ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ರಾಜ್ಯದಲ್ಲಿ ಟಾಪ್‌ 3ನೇ ಸ್ಥಾನದಲ್ಲಿದೆ. ಕ್ರೀಡಾಕೂಟಗಳಲ್ಲಿ ಟಾಪ್‌ 5ನೇ ಸ್ಥಾನದಲ್ಲಿದೆ.

– ಡಾ. ವೈ.ವಿಜಯ ಕುಮಾರ್‌, ಪ್ರಾಂಶುಪಾಲ, ಜೆ.ಎನ್‌.ಎನ್‌ ಇಂಜಿನಿಯರಿಂಗ್‌ ಕಾಲೇಜು

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ಸಮಾರಂಭಕ್ಕೆ ಅರ್ಜುನ ಪ್ರಶಸ್ತಿ ವಿಜೇತ ಕ್ರೀಡಾಪಟು

ಜೆ.ಎನ್.ಎನ್‌ ಕಾಲೇಜು ಆವರಣದಲ್ಲಿ ಮಾ.15ರಂದು ಬೆಳಗ್ಗೆ 9 ಗಂಟೆಗೆ ಸದೃಡ 2.0ಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ವಿದ್ಯಾಶಂಕರ್‌.ಎಸ್‌ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಯಾಗಿ ಅರ್ಜುನ ಪ್ರಶಸ್ತಿ ವಿಜೇತ, ರಾಷ್ಟ್ರಮಟ್ಟದ ತರಬೇತುದಾರ ಎಸ್‌.ಡಿ.ಈಶನ್‌ ಭಾಗವಹಿಸಲಿದ್ದಾರೆ. ಎನ್‌.ಇ.ಎಸ್‌ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್‌ ಅಧ್ಯಕ್ಷತೆ ವಹಿಸಲಿದ್ದಾರೆ.

NES-President-G-Narayanarao-press-meet about Sports Meet.

ಮಾ.18ರಂದು ಮಧ್ಯಾಹ್ನ 3 ಗಂಟೆಗೆ ಸಮಾರೋಪ ಸಭೆ ನಡೆಯಲಿದೆ. ವಿ.ಟಿ.ಯು ಕುಲಸಚಿವ ಡಾ  ಟಿ.ಎನ್‌.ಶ್ರೀನಿವಾಸ್‌ ಮುಖ್ಯ ಅತಿಥಿಯಾಗಿರಲಿದ್ದಾರೆ. ವಿ.ಟಿ.ಯು ಹಣಕಾಸು ಅಧಿಕಾರಿ ಡಾ. ಪ್ರಶಾಂತ್‌ ನಾಯಕ ಗೌರವ ಅತಿಥಿಯಾಗಿರಲಿದ್ದಾರೆ. ಎನ್‌.ಇ.ಎಸ್‌ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್‌ ಅಧ್ಯಕ್ಷತೆ ವಹಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್‌.ಎನ್.ನಾಗರಾಜ್‌, ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ್‌, ಎಂಬಿಎ ವಿಭಾಗದ ಮುಖ್ಯಸ್ಥ ಡಾ. ಶ್ರೀಕಾಂತ್‌, ದೈಹಿಕ ಶಿಕ್ಷಣ ನಿರ್ದೇಶಕ ಚೇತನ್‌, ಎನ್.ಇ.ಎಸ್‌ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಂ.ನೃಪತುಂಗ ಉಪಸ್ಥಿತರಿದ್ದರು.

NFC-Chicken-Kabab

ಇದನ್ನೂ ಓದಿ » ಬೆಳ್ಳಂಬೆಳಗ್ಗೆ ಶುರುವಾಗಲಿಲ್ಲ ಸಿಟಿ ಬಸ್‌, ಪರಿಶೀಲಿಸಿದ ಡ್ರೈವರ್‌ಗೆ ಕಾದಿತ್ತು ಶಾಕ್‌

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : March 13, 2025

ಶಿವಮೊಗ್ಗದ ವಾಹನ ಸವಾರರೆ ಎಚ್ಚರ, ಪೊಲೀಸ್‌ ಇಲಾಖೆಯಿಂದ ಮಹತ್ವದ ಪ್ರಕಟಣೆ, ಏನದು?

ಶಿವಮೊಗ್ಗದ ವಾಹನ ಸವಾರರೆ ಎಚ್ಚರ, ಪೊಲೀಸ್‌ ಇಲಾಖೆಯಿಂದ ಮಹತ್ವದ ಪ್ರಕಟಣೆ, ಏನದು?

ಉಪನ್ಯಾಸಕ ಸುರೇಶ್‌ ನಿಗೂಢ ಸಾವು ಕೇಸ್‌, ಶಿವಮೊಗ್ಗ SP ಫಸ್ಟ್‌ ರಿಯಾಕ್ಷನ್‌, ಏನಂದ್ರು?

ಉಪನ್ಯಾಸಕ ಸುರೇಶ್‌ ನಿಗೂಢ ಸಾವು ಕೇಸ್‌, ಶಿವಮೊಗ್ಗ SP ಫಸ್ಟ್‌ ರಿಯಾಕ್ಷನ್‌, ಏನಂದ್ರು?

ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದಲ್ಲಿ ನಾಗದರ್ಶನ, ದೊಡ್ಡ ಸಂಖ್ಯೆಯ ಭಕ್ತರು ಭಾಗಿ

ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದಲ್ಲಿ ನಾಗದರ್ಶನ, ದೊಡ್ಡ ಸಂಖ್ಯೆಯ ಭಕ್ತರು ಭಾಗಿ

ಟಾಟಾ ಏಸ್‌, ಆಟೋ ಡಿಕ್ಕಿ, ಮಗು ಸೇರಿ ಹಲವರಿಗೆ ಗಾಯ

ಟಾಟಾ ಏಸ್‌, ಆಟೋ ಡಿಕ್ಕಿ, ಮಗು ಸೇರಿ ಹಲವರಿಗೆ ಗಾಯ

ಮೀನು ಮಾರುಕಟ್ಟೆ ಬಳಿ ಕಿರಿಕ್‌, ಕಾರಿನ ಬೀಗದಿಂದ ವ್ಯಕ್ತಿಯ ಕಣ್ಣಿಗೆ ಹೊಡೆದು ಜೀವ ಬೆದರಿಕೆ, ಕಾರಣವೇನು?

ಮೀನು ಮಾರುಕಟ್ಟೆ ಬಳಿ ಕಿರಿಕ್‌, ಕಾರಿನ ಬೀಗದಿಂದ ವ್ಯಕ್ತಿಯ ಕಣ್ಣಿಗೆ ಹೊಡೆದು ಜೀವ ಬೆದರಿಕೆ, ಕಾರಣವೇನು?

ಮಂಚಿಯ ಪುರಾಣ ಪ್ರಸಿದ್ಧ ಜಾತ್ರೆ, ಬುಡ ಸಹಿತ ಬಿಲ್ವಪತ್ರೆ ಮರ ಕಿತ್ತು ತಂದ ದಾಸರ ಕುಟುಂಬ

ಮಂಚಿಯ ಪುರಾಣ ಪ್ರಸಿದ್ಧ ಜಾತ್ರೆ, ಬುಡ ಸಹಿತ ಬಿಲ್ವಪತ್ರೆ ಮರ ಕಿತ್ತು ತಂದ ದಾಸರ ಕುಟುಂಬ

ಅಡಿಕೆ ತೋಟದಲ್ಲಿ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಉಪನ್ಯಾಸಕರ ಮೃತದೇಹ ಪತ್ತೆ

ಅಡಿಕೆ ತೋಟದಲ್ಲಿ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಉಪನ್ಯಾಸಕರ ಮೃತದೇಹ ಪತ್ತೆ

ತಂದೆ ಸಾವಿನಲ್ಲೂ ಪರೀಕ್ಷೆ ಬರೆದ ವಿದ್ಯಾರ್ಥಿ, ಕಾರಿನಲ್ಲಿ ಕರೆದೊಯ್ದು ಪರೀಕ್ಷಾ ಕೇಂದ್ರಕ್ಕೆ ಬಿಟ್ಟ ಅಧಿಕಾರಿ

ತಂದೆ ಸಾವಿನಲ್ಲೂ ಪರೀಕ್ಷೆ ಬರೆದ ವಿದ್ಯಾರ್ಥಿ, ಕಾರಿನಲ್ಲಿ ಕರೆದೊಯ್ದು ಪರೀಕ್ಷಾ ಕೇಂದ್ರಕ್ಕೆ ಬಿಟ್ಟ ಅಧಿಕಾರಿ

ಮದುವೆ ಮುಗಿಸಿ ಭದ್ರಾವತಿಯ ನಾಗತಿಬೆಳಗಲು ತಾಂಡಾದ ಮನೆಗೆ ಮರಳಿದವರಿಗೆ ಕಾದಿತ್ತು ಆಘಾತ

ಮದುವೆ ಮುಗಿಸಿ ಭದ್ರಾವತಿಯ ನಾಗತಿಬೆಳಗಲು ತಾಂಡಾದ ಮನೆಗೆ ಮರಳಿದವರಿಗೆ ಕಾದಿತ್ತು ಆಘಾತ

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ JDS ಕಾರ್ಯಕರ್ತರ ಸಭೆ, MLA ಮಹತ್ವದ ಸೂಚನೆ, ಏನದು?

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ JDS ಕಾರ್ಯಕರ್ತರ ಸಭೆ, MLA ಮಹತ್ವದ ಸೂಚನೆ, ಏನದು?

Leave a Comment