ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 6 OCTOBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಗೋಪಿ ಸರ್ಕಲ್ನಲ್ಲಿ ಅಳವಡಿಸಿದ್ದ ಅಲಂಕಾರಿಕ ಕಲ್ಲಿನ ರೇಲಿಂಗ್ (Stone railing) ನಾಪತ್ತೆಯಾಗಿದೆ. ಎಂ.ಜಿ.ಪ್ಯಾಲೇಸ್ ಮುಂಭಾಗ ಅಳವಡಿಸಿದ್ದ ರೇಲಿಂಗ್ಗಳು ಕಾಣೆಯಾಗಿವೆ.
ಸ್ಮಾರ್ಟ್ ಸಿಟಿ ಯೋಜನೆ ಅಡಿ ಗೋಪಿ ಸರ್ಕಲ್ನಲ್ಲಿ ಫುಟ್ಪಾತ್ಗೆ ಕಲ್ಲಿನ ರೇಲಿಂಗ್ (Stone railing) ಅಳವಡಿಸಲಾಗಿದೆ. ಶ್ರೀನಿಧಿ ಟೆಕ್ಸ್ಟೈಲ್ಸ್ ಮುಂಭಾಗ, ಅನ್ಮೋಲ್ ಹೊಟೇಲ್ ಕಟ್ಟಡದ ಎದುರು ಮತ್ತು ಎಂ.ಜಿ.ಪ್ಯಾಲೇಸ್ ಮುಂಭಾಗ ಕಲ್ಲಿನ ಅಲಂಕಾರಿಕ ರೇಲಿಂಗ್ ಹಾಕಲಾಗಿತ್ತು.
ಇದನ್ನೂ ಓದಿ- ಶಿವಮೊಗ್ಗ ಗಾಂಧಿ ಬಜಾರ್ ವ್ಯಾಪಾರಿಗಳದ್ದು ‘ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು’ ಸ್ಥಿತಿ
ಮೊದಲೇ ಹಾನಿಯಾಗಿತ್ತು
ಅಷ್ಟೇನು ಗಟ್ಟಿಮುಟ್ಟಲ್ಲದ, ಅಲಂಕಾರಕ್ಕಷ್ಟೆ ಸೀಮಿತವಾಗಿದ್ದ ಕಲ್ಲಿನ ರೇಲಿಂಗ್ ಇದಾಗಿದೆ. ಹಾಗಾಗಿ ನಾಗರಿಕ ಸಂಘಟನೆಗಳು ಕೂಡ ಕಲ್ಲಿನ ರೇಲಿಂಗ್ ವಿಚಾರದಲ್ಲಿ ಆಕ್ಷೇಪಣೆ ವ್ಯಕ್ತಪಡಿಸಿದ್ದವು. ಅಳವಡಿಸಿದ ಕೆಲವೇ ಸಮಯಕ್ಕೆ ಕಲ್ಲಿನ ರೇಲಿಂಗ್ಗಳು ತುಂಡಾಗಿ ಬಿದ್ದಿದ್ದವು. ಅಂಬಿಕಾ ಬುಕ್ ಸ್ಟಾಲ್ ಪಕ್ಕದಲ್ಲಿ ಅವುಗಳನ್ನು ಜೋಡಿಸಿ ಇಡಲಾಗಿತ್ತು. ಈ ಕುರಿತು ಶಿವಮೊಗ್ಗ ಲೈವ್.ಕಾಂ 2022ರ ಡಿಸೆಂಬರ್ ತಿಂಗಳಲ್ಲೇ ವರದಿ ಮಾಡಿತ್ತು.
ಈಗ ಕಲ್ಲಿನ ರೇಲಿಂಗ್ ನಾಪತ್ತೆ
ಎಂ.ಜಿ.ಪ್ಯಾಲೇಸ್ ಮುಂಭಾಗ ಇದ್ದ ಕಲ್ಲಿನ ರೇಲಿಂಗ್ ಈಗ ನಾಪತ್ತೆಯಾಗಿದೆ. ಈ ಕುರಿತು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಮಾಯಣ್ಣಗೌಡ ಅವರನ್ನು ಪ್ರಶ್ನಿಸಿದಾಗ, ಗಣಪತಿ ಮೆರವಣಿಗೆ ಸಂದರ್ಭ ರೇಲಿಂಗ್ ಹಾನಿಯಾಗಿತ್ತು. ಈ ಹಿನ್ನೆಲೆ ತೆಗೆದಿರಿಸಲಾಗಿದೆ. ಪುನಃ ಅಳವಡಿಸಲಾಗುತ್ತದೆ ಎಂದು ತಿಳಿಸಿದರು.
ರೇಲಿಂಗ್ ಕಾಮಗಾರಿಯ ಕುರಿತು ಆರಂಭದಿಂದಲು ಆಕ್ಷೇಪಣೆ ಇದೆ. ಸ್ಮಾರ್ಟ್ ಸಿಟಿಯ ಹಿಂದಿನ ಅಧಿಕಾರಿಗಳು ಈ ಕುರಿತು ಕ್ಯಾರೆ ಅನ್ನಲಿಲ್ಲ. ಈಗ ಸ್ಮಾರ್ಟ್ ಸಿಟಿಯ ಯೋಜನೆಯ ಒಂದೊಂದೇ ‘ಅಲಂಕಾರ’ಗಳು ನಾಪತ್ತೆಯಾಗುತ್ತಿವೆ.