ಅಮೆರಿಕಾದಿಂದ ಐಫೋನ್ ಬರುತ್ತೆ ಅನ್ನೋ ಆಸೆ ಹುಟ್ಟಿಸಿ ಶಿವಮೊಗ್ಗದ ಯುವತಿಗೆ ಪಂಗನಾಮ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

 SHIVAMOGGA LIVE NEWS 

SHIMOGA | ಅಮೆರಿಕಾದಿಂದ (AMERICA) ಕಡಿಮೆ ಬೆಲೆಗೆ ಐಫೋನ್ (iphone se) ಖರೀದಿಸಿ ಕೊಡುತ್ತೇನೆ ಎಂದು ಇನ್ಸ್ಟಾಗ್ರಾಂನಲ್ಲಿ (INSTAGRAM) ನಂಬಿಸಿ, ಶಿವಮೊಗ್ಗದ ವಿದ್ಯಾರ್ಥಿನಿಗೆ 90 ಸಾವಿರ ವಂಚಿಸಲಾಗಿದೆ.

Shimoga Nanjappa Hospital

ಕಡಿಮೆ ಬೆಲೆಗೆ ಐಫೋನ್ ಲಭ್ಯವಿದೆ ಎಂದು ಇನ್ಸ್ಟಾಗ್ರಾಂನದಲ್ಲಿ ಪ್ರಕಟಿಸಿದ್ದ ಪೋಸ್ಟ್ ಗಮನಿಸಿ ವಿದ್ಯಾರ್ಥಿನಿ ಆತನನ್ನು ಸಂಪರ್ಕಿಸಿದ್ದಾಳೆ. ಮೊಬೈಲ್ ನಂಬರ್ ಮತ್ತು ಅಕೌಂಟ್ ನಂಬರ್ ಕೊಟ್ಟಿದ್ದ ವ್ಯಕ್ತಿ, 90 ಸಾವಿರ ರೂ. ಹಣವನ್ನು ಖಾತೆಗೆ ವರ್ಗಾಯಿಸುವಂತೆ ಸೂಚಿಸಿದ್ದ.

ಪೋಸ್ಟ್ ಮಾಡಿದವನು ತಿಳಿಸಿದ ಬ್ಯಾಂಕ್ ಖಾತೆಗೆ ವಿದ್ಯಾರ್ಥಿನಿ 47 ಸಾವಿರ ರೂ. ಹಣ ವರ್ಗಾಯಿದ್ದಾಳೆ. ಅಲ್ಲದೆ ತನ್ನ ಸ್ನೇಹಿತನ ಮೊಬೈಲ್’ನಲ್ಲಿ ಪೇಟಿಯಂ ಮೂಲಕ 43 ಸಾವಿರ ರೂ. ವರ್ಗಾಯಿಸಿದ್ದಳು. ಹಣ ತಲುಪಿದ್ದು, ಅಮೆರಿಕಾದಿಂದ ಐಫೋನ್ (iphone se) ಮೊಬೈಲ್ ತರಿಸಿಕೊಡುತ್ತೇನೆ ಎಂದು ಆತ ವಿದ್ಯಾರ್ಥಿನಿಗೆ ನಂಬಿಸಿದ್ದ.

ಮೇ ತಿಂಗಳಲ್ಲಿ ಹಣ ವರ್ಗಾಯಿಸಿದ್ದರೂ ಐಫೋನ್ ಕಳುಹಿಸದ ಹಿನ್ನೆಲೆ ವಿದ್ಯಾರ್ಥಿನಿ ಆ ವ್ಯಕ್ತಿಯನ್ನು ಸಂಪರ್ಕಿಸಿದ್ದಾಳೆ. ಐಫೋನ್ ಬೇಡ ಹಣ ಹಿಂತಿರುಗಿಸುವಂತೆ ಒತ್ತಾಯಿಸಿದ್ದಾಳೆ. ಆಗ ವಂಚಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ.

ಈ ಸಂಬಂದ ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ವಿದ್ಯಾರ್ಥಿನಿ ದೂರು ನೀಡಿದ್ದಾಳೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕ್ಲಿಕ್ ಮಾಡಿ ಇದನ್ನೂ ಓದಿ ಕೆಲಸ ಹುಡುಕ್ತಿದ್ದೀರಾ? ಹುಷಾರು, ಯಾಮಾರಿಸುವ ಜಾಲವಿದೆ, ಮಹಿಳೆಗೆ 4 ಲಕ್ಷ ರೂ. ಪಂಗನಾಮ

Sarji Hospital

ಕ್ಲಿಕ್ ಮಾಡಿ ಇದನ್ನೂ ಓದಿ ಮನೆಗೆ ಹೊರಟಿದ್ದವನ ಪಾಲಿಗೆ ಯಮ ಸ್ವರೂಪಿಯಾಗಿ ಬಂದ ಬೈಕ್, ಓರ್ವ ಸಾವು

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment