ಶಿವಮೊಗ್ಗದಲ್ಲಿ 50 ಚೆಕ್ ಪೋಸ್ಟ್ ನಿರ್ಮಿಸಿ 2 ಗಂಟೆ ದಿಢೀರ್ ತಪಾಸಣೆ, ಏನೆಲ್ಲ ಸಿಕ್ತು?

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

SHIVAMOGGA LIVE NEWS | SHIMOGA | 28 ಜುಲೈ 2022

ಅಪರಾಧ ಚಟುವಟಿಕೆ ನಿಯಂತ್ರಣಕ್ಕೆ ಶಿವಮೊಗ್ಗ ಪೊಲೀಸರು ಕಳೆದ ರಾತ್ರಿ ದಿಢೀರ್ ಕಾರ್ಯಾಚರಣೆ ನಡೆಸಿದರು. ನಗರದ 50 ಕಡೆ ಚೆಕ್ ಪೋಸ್ಟ್ (CHECK POST) ನಿರ್ಮಿಸಿ ವಾಹನಗಳ ತಪಾಸಣೆ ನಡೆಸಲಾಯಿತು. ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದವರ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಲಾಯಿತು.

Shimoga Nanjappa Hospital

ಟ್ರಾಫಿಕ್ ನಿಯಮ ಉಲ್ಲಂಘನೆ ಕೇಸ್

ಮಾರಕಾಸ್ತ್ರ ಹಿಡಿದು ಓಡಾಡುವವರು, ಮದ್ಯ ಸೇವಿಸಿ ವಾಹನ ಚಲಾಯಿಸುವುದು, ಗಾಂಜಾ ಸೇವನೆ ಮತ್ತು ಹೆಲ್ಮೆಟ್ ಧರಿಸದೆ ವಾಹನ ಚಲಾವಣೆ ಮಾಡುವುದು ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆ ಪತ್ತೆ ಕಾರ್ಯ ನಡೆಸಲಾಯಿತು.

ಚೆಕ್ ಪೋಸ್ಟ್’ಗಳಲ್ಲಿ (CHECK POST) ವಾಹನಗಳನ್ನು ತಡೆದು ದಾಖಲೆಗಳ ಪರಿಶೀಲನೆ ನಡೆಸಲಾಯಿತು. ಈ ವೇಳೆ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಸಂಬಂಧ 350 ಪ್ರಕರಣ, 93 ಲಘು ಪ್ರಕರಣ ದಾಖಲು ಮಾಡಲಾಯಿತು.

ದಿಢೀರ್ ಮನೆಗಳ ತಪಾಸಣೆ

ಇನ್ನು, ಅಪರಾಧ ಹಿನ್ನೆಲೆ ಉಳ್ಳವರ ಮನೆಗಳನ್ನು ಪೊಲೀಸರು ತಪಾಸಣೆ ನಡೆಸಿದರು. 30 ವರ್ಷದೊಳಗಿನ ಅಪರಾಧ ಹಿನ್ನೆಲೆ ಉಳ್ಳವರ ಮನೆಗಳಲ್ಲಿ ತಪಾಸಣೆ ನಡೆಸಲಾಯಿತು. ಅಲ್ಲದೆ ವೈನ್ ಶಾಪ್ ಸುತ್ತಮುತ್ತ ಹಾಗೂ ನಿರ್ಜನ ಪ್ರದೇಶಗಳಲ್ಲಿ ಕುಡಿದು ತೊಂದರೆ ಕೊಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಯಿತು.

ತಲ್ವಾರ್, ಡ್ರ್ಯಾಗರ್ ಪತ್ತೆ

ಪೊಲೀಸರ ಶೋಧ ಕಾರ್ಯದ ವೇಳೆ ಮಾರಕಾಸ್ತ್ರಗಳು ಪತ್ತೆಯಾಗಿವೆ. ತಲ್ವಾರ್, ಡ್ರ್ಯಾಗರ್’ಗಳು ಸಿಕ್ಕಿದ್ದು, ಅವುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 1 ತಲ್ವಾರ್, 4 ಹರಿತವಾದ ಡ್ರ್ಯಾಗರ್ ವಶಪಡಿಸಿಕೊಳ್ಳಲಾಗಿದೆ.

ಪರಿಶೀಲನೆ ವೇಳೆ 11 ಅಬಕಾರಿ ಪ್ರಕರಣ, 350 ಸಂಚಾರಿ ಉಲ್ಲಂಘನೆ ಪ್ರಕರಣ, 93 ಲಘು ಪ್ರಕರಣ, 96 ತಂಬಾಕು ಪ್ರಕರಣ, 10 ಗಾಂಜಾ ಸೇವನೆ ಮಾಡಿದ ಪ್ರಕರಣಗಳನ್ನು ದಾಖಲು ಮಾಡಿಕೊಳ್ಳಲಾಗಿದೆ.

ದೊಡ್ಡ ಸಂಖ್ಯೆಯ ಪೊಲೀಸರಿಂದ ದಾಳಿ

ನಗರದ ವಿವಿಧೆಡೆ ಪೊಲೀಸರು ಸತತ ಎರಡು ಗಂಟೆ ಕಾರ್ಯಾಚರಣೆ ನಡೆಸಿದರು. ಹೊರ ತಾಲ್ಲೂಕಿನಿಂದಲು ಪೊಲೀಸರು, ಡಿಎಆರ್ ಸಿಬ್ಬಂದಿಯನ್ನು ಶೋಧ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ – ಪೊಲೀಸರಿಗೆ ಸಿಕ್ಕಿಬಿದ್ದ ಮೂವರು ಬರೀ ಬೈಕ್ ಕಳ್ಳರಾಗಿರಲಿಲ್ಲ

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

Leave a Comment