SHIVAMOGGA LIVE NEWS | 18 AUGUST 2023
SHIMOGA : ವಾಟ್ಸಪ್ ಮೂಲಕ ಸಾರ್ವಜನಿಕರ ಸಮಸ್ಯೆ (Problems) ಆಲಿಸುವ ವಿಭಿನ್ನ ಪ್ರಯೋಗ ಮಾಡಿದ್ದ ಶಾಸಕ ಎಸ್.ಎನ್.ಚನ್ನಬಸಪ್ಪ ಈಗ ಇನ್ನೊಂದು ವಿನೂತನ ಹೆಜ್ಜೆ ಇಟ್ಟಿದ್ದಾರೆ. ಇನ್ನು ಐದು ವರ್ಷ ಶಿವಮೊಗ್ಗ ನಗರ ಹೇಗಿರಬೇಕು ಎಂದು ನಾಗರಿಕರಿಂದ ಸಲಹೆ (Suggestion) ಪಡೆಯಲು ಮುಂದಾಗಿದ್ದಾರೆ. ಇದಕ್ಕಾಗಿ ನಗರದ 50 ಕಡೆ ಸಲಹಾ ಪೆಟ್ಟಿಗೆಗಳನ್ನು (Suggestion Box) ಇರಿಸಲು ತೀರ್ಮಾನಿಸಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ MLA ಕಚೇರಿಯಲ್ಲಿ ವಾಟ್ಸಪ್ ಹೆಲ್ಪ್ಲೈನ್ ಶುರು, ಏನಿದು? ಹೇಗಿರುತ್ತೆ? ಜನಕ್ಕೇನು ಉಪಯೋಗ?
ಶಿವಮೊಗ್ಗದ ಗೋಪಿ ಸರ್ಕಲ್ನಲ್ಲಿ (Gopi Circle) ಸಲಹಾ ಪಟ್ಟೆಗೆ ಇರಿಸುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅಭಿಯಾನಕ್ಕೆ ಚಾಲನೆ ನೀಡಿದರು.
ಏನಿದು ಸಲಹಾ ಪೆಟ್ಟಿಗೆ?
ಆ.17ರಿಂದ ಆ.31ರವರೆಗೆ ಶಿವಮೊಗ್ಗ ನಗರದ ಆಯ್ದ 50 ಕಡೆ ಸಲಹಾ ಪೆಟ್ಟಿಗೆಗಳನ್ನು ಇರಿಸಲು ತೀರ್ಮಾನಿಸಲಾಗಿದೆ. ಇದರ ಜೊತೆಗೆ ಮಾಹಿತಿ ಕಾರ್ಡುಗಳು ಇರಲಿವೆ. ನಾಗರಿಕರು ಇನ್ನು ಐದು ವರ್ಷ ಶಿವಮೊಗ್ಗ ನಗರ ಹೇಗಿರಬೇಕು ಎಂದು ಕಾರ್ಡುಗಳಲ್ಲಿ ಅಭಿಪ್ರಾಯ ಬರೆದು, ಸಲಹಾ ಪೆಟ್ಟಿಗೆಗೆ ಹಾಕಬಹುದು. ನಂತರ ಶಾಸಕರ ಕಚೇರಿ ಕರ್ತವ್ಯ ಭವನದಲ್ಲಿ ಈ ಕಾರ್ಡುಗಳನ್ನು ಪರಿಶೀಲಿಸಿ ಮುಂದಿನ ಯೋಜನೆ ಸಿದ್ಧಪಡಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಗೋಪಿ ವೃತ್ತದಲ್ಲಿ ಅಭಿಪ್ರಾಯ ಸಂಗ್ರಹಿಸಲಾಯಿತು. ಸಾರ್ವಜನಿಕರು, ಪೊಲೀಸ್ ಸಿಬ್ಬಂದಿ, ಮಳಿಗೆಗಳ ಮಾಲೀಕರು ಸೇರಿದಂತೆ ಹಲವರು ತಮ್ಮ ಅಭಿಪ್ರಾಯ ಬರೆದು ಪೆಟ್ಟಿಗೆಗೆ ಹಾಕಿದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200