SHIVAMOGGA LIVE NEWS, 21 DECEMBER 2024
ಶಿವಮೊಗ್ಗ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಅವಾಚ್ಯವಾಗಿ ನಿಂದಿಸಿದ ಸಿ.ಟಿ.ರವಿ ಅವರನ್ನು ಶಾಸಕ ಸ್ಥಾನದಿಂದ ಅಮಾನತು (Suspend) ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ನ ಮಹಿಳಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಮಹಿಳೆಯರಿಗೆ ಗೌರವ ನೀಡಬೇಕಿದ್ದ ಹಿರಿಯ ಸದಸ್ಯ ಸಿ.ಟಿ.ರವಿ, ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕುರಿತು ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ. ಇದರ ಆಡಿಯೋ, ವಿಡಿಯೋವನ್ನು ಸಾರ್ವಜನಿಕರು ಗಮನಿಸಿದ್ದಾರೆ. ವೇದಿಕೆ ಮೇಲೆ ಮಹಿಳೆಯರಿಗೆ ಗೌರವ ತೋರಿಸುವ ಸಿ.ಟಿ.ರವಿ ವಿಧಾನಸೌಧದಲ್ಲಿ ಪದೇ ಪದೆ ಮಹಿಳೆಯರಿಗೆ ಅಗೌರವ ತೋರುವಂತೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಮುಖರಾದ ಸಮೀನಾ ಕೌಸರ್, ಸ್ಟೆಲ್ಲಾ ಮಾರ್ಟಿನ್, ಶಮೀನ್ ಬಾನು, ಅರ್ಚನಾ, ಚಂದ್ರಿಕಾ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಶೂ ಒಳಗಿಂದ ಹೆಡೆ ಎತ್ತಿದ ನಾಗರಹಾವು