ಶಿವಮೊಗ್ಗ LIVE
ಶಿವಮೊಗ್ಗ: ನಗರದ ಮಲೆನಾಡು ಶಿವಮೊಗ್ಗ ಸ್ವಿಮ್ಮಿಂಗ್ ಅಸೋಸಿಯೇಷನ್ ಹಾಗೂ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ನ.30ರಂದು ಗೋಪಾಲಗೌಡ ಬಡಾವಣೆಯ ಶಿವಮೊಗ್ಗ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನ ಈಜು ಕೊಳದಲ್ಲಿ ರಾಜ್ಯಮಟ್ಟದ 2ನೇ ನಾನ್ ಮೆಡಲಿಸ್ಟ್ ಸ್ವಿಮ್ ಮೀಟ್ ಈಜು ಸ್ಪರ್ಧೆ ಆಯೋಜಿಸಲಾಗಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ ತಿಳಿಸಿದರು.
ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕ್ರೀಡಾಕೂಟಕ್ಕೆ ನ.30ರ ಬೆಳಗ್ಗೆ 7ಕ್ಕೆ ಚಾಲನೆ ನೀಡಲಾಗುವುದು. ಬೆಳಗ್ಗೆ 8.30ಕ್ಕೆ ಸ್ಪರ್ಧೆಗಳು ಆರಂಭವಾಗುತ್ತವೆ. 2011ರಿಂದ 2019ರ ಒಳಗೆ ಜನಿಸಿದ ಮಕ್ಕಳಿಗಾಗಿ 8 ವಿಭಾಗದಲ್ಲಿ ಸ್ಪರ್ಧೆಗಳನ್ನು ನಡೆಸಲಾಗುವುದು. ಜನ್ಮ ದಿನಾಂಕಕ್ಕೆ ಸಂಬಂಧಿಸಿದ ದಾಖಲೆ ಸಲ್ಲಿಸುವುದು ಕಡ್ಡಾಯವಾಗಿದೆ. ರಾಷ್ಟ್ರ, ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕ ಪಡೆಯದೇ ಇರುವವರು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದರು.

300ಕ್ಕೂ ಹೆಚ್ಚು ಸ್ಪರ್ಧಿಗಳು
ಸುಮಾರು 15 ಜಿಲ್ಲೆಗಳಿಂದ 300ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಬಟರ್ ಪ್ರೈ, ಬ್ಯಾಕ್‌ಸ್ಟೋಕ್, ಕಿಕ್‌ಬೋರ್ಡ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಇದಕ್ಕೆ ₹600 ಪ್ರವೇಶ ಶುಲ್ಕವಿದ್ದು, ಸ್ವಿಮ್ಮಿಂಗ್ ರಿಲೇ ಸ್ಪರ್ಧೆಗೆ ₹400 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಒಟ್ಟಾರೆ ಚಾಂಪಿಯನ್‌ಶಿಪ್‌ಗೆ ₹5,000 ನಗದು ಹಾಗೂ ರನ್ನರ್ ಅಪ್‌ಗೆ ₹3,000 ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ » ಇಂಟರ್‌ನೆಟ್ ಬಿಲ್ ಕಟ್ಟಲು ಮುಂದಾದ ನಿವೃತ್ತ ಉದ್ಯೋಗಿಯ ಬ್ಯಾಂಕ್ ಖಾತೆ ಖಾಲಿ, ಆಗಿದ್ದೇನು?
ಮಲೆನಾಡು ಸ್ವಿಮ್ಮಿಂಗ್ ಅಸೋಸಿಯೇಷನ್ ಅಧ್ಯಕ್ಷ ಸನತ್, ಪ್ರಮುಖರಾದ ವಿಜಯಕುಮಾರ್, ಜಯಲಕ್ಷ್ಮೀ, ಪ್ರಶಾಂತ್ ಮತ್ತಿತರರಿದ್ದರು.
LATEST NEWS
- ಕುತ್ತಿಗೆ ಹಿಸುಕಿ ಹೆಂಡತಿಯನ್ನು ಕೊಂದ ಗಂಡ, ಎಲ್ಲಿ? ಕಾರಣವೇನು?

- ಮತ್ತೆ 91 ಸಾವಿರಕ್ಕೆ ತಲುಪಿದ ಅಡಿಕೆ ರೇಟ್ | 12 ಜನವರಿ 2026 | ಅಡಿಕೆ ಧಾರಣೆ

- ನಿಯಂತ್ರಣ ತಪ್ಪಿದ ರಾಯಲ್ ಎನ್ಫೀಲ್ಡ್ ಬೈಕ್, ಅಪಘಾತ, ಸವಾರ ಸ್ಥಳದಲ್ಲೇ ಸಾವು

- ವೈನ್ ಶಾಪ್ನಲ್ಲಿ ಬಿಯರ್ ಬಾಟಲಿಯಿಂದ ಯುವಕನ ತಲೆಗೆ ಹೊಡೆದ ವ್ಯಕ್ತಿ, ಕಾರಣವೇನು?

- ‘ಇಡೀ ದೇಶವೇ ಸ್ವಾಗತಿಸಿದೆ, ಕಾಂಗ್ರೆಸ್ ನಾಯಕರು ಮಾತ್ರ ಹಗುರ ಮಾತಾಡುತ್ತಿದ್ದಾರೆ’, ಏನಿದು?

About The Editor
ನಿತಿನ್ ಆರ್.ಕೈದೊಟ್ಲು





