
ಶಿವಮೊಗ್ಗ ಲೈವ್.ಕಾಂ | SHIMOGA | 5 ಮೇ 2020
ಸಾಮಾಜಿಕ ಅಂತರ ಲೆಕ್ಕಕ್ಕಿಲ್ಲ.. ಮಾಸ್ಕ್ ತೊಡೆಬೇಕು ಅನ್ನುವ ನಿಯಮಕ್ಕೆ ಕ್ಯಾರೆ ಅನ್ನೋರಿಲ್ಲ.. ಸ್ಯಾನಿಟೈಸರ್ ಇಲ್ವೇ ಇಲ್ಲ.. ಈ ನಿಯಮಗಳನ್ನು ಗಾಳಿಗೆ ತೂರಿ, ವ್ಯಾಪಾರ ನಡೆಸುತ್ತಿದ್ದವರಿಗೆ ಇವತ್ತು ಶಿವಮೊಗ್ಗ ತಹಶೀಲ್ದಾರ್ ಬಿಸಿ ಮುಟ್ಟಿಸಿದ್ದಾರೆ.
ಶಿವಮೊಗ್ಗ ತಹಶೀಲ್ದಾರ್ ನಾಗರಾಜ್ ಅವರು ಇವತ್ತು ಶಿವಮೊಗ್ಗದ ಗಾಂಧಿ ಬಜಾರ್‍ನಲ್ಲಿ ದಿಢೀರ್ ಕಾರ್ಯಾಚರಣೆ ನಡೆಸಿದರು. ಪ್ರತಿ ಅಂಗಡಿಯನ್ನು ಪರಿಶೀಲಿಸಿದ ಅವರು, ಮಾಸ್ಕ್ ತೊಡೆದೆ ವ್ಯಾಪಾರ ನಡೆಸುತ್ತಿರುವವರು, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ವಹಿವಾಟು ನಡೆಸುತ್ತಿದ್ದ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡದರು. ಅಲ್ಲದೆ, ದಂಡವನ್ನು ಹಾಕಿದರು.


ಅಂಗಡಿಯಲ್ಲಿ ವ್ಯಾಪಾರ ಮಾಡುವವರು ಮಾತ್ರವಲ್ಲ, ಗ್ರಾಹಕರು ಕೂಡ ಮಾಸ್ಕ್ ತೊಡಬೇಕು. ಮಾಸ್ಕ್ ಹಾಕದ ಗ್ರಾಹಕರೊಂದಿಗೆ ವ್ಯಾಪಾರ ನಡೆಸುವಂತಿಲ್ಲ. ಮಾಸ್ಕ್ ತೊಡಬೇಕು ಎಂದು ಗ್ರಾಹಕರಿಗೆ ಜಾಗೃತಿ ಮೂಡಿಸಬೇಕು. ಅಲ್ಲದೆ ವ್ಯಾಪಾರದ ಸಂದರ್ಭ ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕು. ಸ್ಯಾನಿಟೈಸರ್ ಬಳಕೆಯು ಕಡ್ಡಾಯವಾಗಿದೆ. ಇದನ್ನು ಉಲ್ಲಂಘಿಸಿದ್ದಕ್ಕಾಗಿ ವ್ಯಾಪಾರಿಗಳಿಗೆ ದಂಡ ಹಾಕಲಾಗಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ತಹಶೀಲ್ದಾರ್ ನಾಗರಾಜ್ ಅವರು, ಜನರಲ್ಲಿ, ವ್ಯಾಪಾರಿಗಳಲ್ಲಿ ಈ ಜಾಗೃತಿ ಮೂಡಿಸಲಿಲ್ಲ ಅಂದರೆ ಕರೋನ ಮಹಾಮಾರಿಯ ಅತಂಕ ಇನ್ನಷ್ಟು ಹೆಚ್ಚಳವಾಗಲಿದೆ. ಮಾಸ್ಕ್ ತೊಡದೆ ವ್ಯಾಪಾರಕ್ಕೆ ಬಂದವರಗೂ ದಂಡ ಹಾಕಲಾಗುತ್ತಿದೆ. ಇವತ್ತು ಈತನಕ 100 ಕೇಸ್ ಹಾಕಲಾಗಿದೆ ಎಂದು ತಹಶೀಲ್ದಾರ್ ನಾಗರಾಜ್ ಅವರು ಹೇಳಿದರು.

ಮಹಾನಗರ ಪಾಲಿಕೆ ಅಧಿಕಾರಿಗಳು, ಪೊಲೀಸ್ ಇಲಾಖೆ ಸಿಬ್ಬಂದಿ ಕೂಡ ಈ ವೇಳೆ ಜೊತೆಯಲ್ಲಿದ್ದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]