ನಡು ರಸ್ತೆಯಲ್ಲೇ ಕೆಟ್ಟು ನಿಂತ ಬಸ್, ನೆಹರು ರೋಡಲ್ಲಿ ವಾಹನ ಸವಾರರಿಗೆ ಪೀಕಲಾಟ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS | SHIMOGA | 23 ಏಪ್ರಿಲ್ 2022

ತಾಂತ್ರಿಕ ದೋಷ ಕಾಣಿಸಿಕೊಂಡು ಖಾಸಗಿ ಬಸ್ಸೊಂದು ನಡುರಸ್ತೆಯಲ್ಲಿ ನಿಂತುಬಿಟ್ಟಿದೆ. ಇದರಿಂದ ನೆಹರೂ ರಸ್ತೆಯಲ್ಲಿ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ಗೋಪಿ ಸರ್ಕಲ್ ಕಡೆಯಿಂದ ನೆಹರೂ ರಸ್ತೆಯಲ್ಲಿ ಬಂದ ಸಿಟಿ ಬಸ್ಸಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಜೆಡಿಎಸ್ ಕಚೇರಿ ಸಮೀಪ ಘಟನೆ ಸಂಭವಿಸಿದೆ. ರಸ್ತೆಗೆ ಅಡ್ಡಲಾಗಿ ಬಸ್ ನಿಂತಿದೆ. ಬಸ್ಸನ್ನು ತಳ್ಳುವುದಕ್ಕು ಸಾಧ್ಯವಾಗದ ಹಿನ್ನೆಲೆ ರಸ್ತೆಯಲ್ಲೇ ನಿಂತಿದೆ.

ಬಸ್ ಅಡ್ಡಾದಿಡ್ಡಿ ನಿಂತಿರುವುದರಿಂದ ಗೋಪಿ ಸರ್ಕಲ್ ಕಡೆಯಿಂದ ನೆಹರೂ ರಸ್ತೆ ಮೂಲಕ ಅಮೀರ್ ಅಹಮದ್ ಸರ್ಕಲ್ ಕಡೆಗೆ ವಾಹನಗಳು ತೆರಳದಂತಾಗಿದೆ. ಇದರಿಂದ ಕೆಲ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು.

ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಂಚಾರ ದಟ್ಟಣೆ ನಿಯಂತ್ರಿಸುತ್ತಿದ್ದಾರೆ.

ಇದನ್ನೂ ಓದಿ | ತೀರ್ಥಹಳ್ಳಿಯಲ್ಲಿ ಮುಂದುವರೆದ ಬಸ್ ಸಂಘರ್ಷ, KSRTC ಬಸ್ ಡ್ರೈವರ್, ಕಂಡಕ್ಟರ್ ಮೇಲೆ ಹಲ್ಲೆ

Shimoga Nanjappa Hospital

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment