ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಫೆಬ್ರವರಿ 24ರಿಂದ ಐದು ದಿನ ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬ ಜಾತ್ರೆಯು (Kote Marikamba Jatre) ವೈಭವದಿಂದ ನಡೆಯಲಿದೆ. ಈ ಬಾರಿ ದೇವಿಗೆ ಚಿನ್ನದ ಮುಖವಾಡ, ಗರ್ಭಗುಡಿಗೆ ಬೆಳ್ಳಿ ಬಾಗಿಲು ಅರ್ಪಿಸಲಾಗುತ್ತಿದೆ ಎಂದು ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ ತಿಳಿಸಿದರು.
ದೇವಸ್ಥಾನದ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್, ಫೆ.24ರಂದು ತವರುಮನೆ ಗಾಂಧಿ ಬಜಾರ್‌ನಲ್ಲಿ ತಾಯಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಅಲ್ಲಿ ದೇವಿಯ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಸಮಿತಿಯವರು ಏನೆಲ್ಲ ಹೇಳಿದರು? ಇಲ್ಲಿದೆ ಪ್ರಮುಖಾಂಶ
1ಗಾಂಧಿ ಬಜಾರ್‌ನಲ್ಲಿ ಜರ್ಮನ್ ಟೆಂಟ್ ಹಾಕಲಾಗುತ್ತದೆ. ಯಾವುದೆ ಗೊಂದಲ ಇಲ್ಲದೆ ಭಕ್ತರು ದೇವಿಯ ದರ್ಶನ ಪಡೆದು ಹೋಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಭಕ್ತರಿಗೆ ಪಾನಕ, ನೀರು, ಮಜ್ಜಿಗೆ, ಪ್ರಸಾದ ವಿನಿಯೋಗ ಮಾಡಲಾಗುತ್ತದೆ. ಶಿವಪ್ಪನಾಯಕ ಪ್ರತಿಮೆಯಿಂದ ಕರ್ನಾಟಕ ಸಂಘದವರೆಗೆ ಪೆಂಡಾಲ್ ಹಾಕಲಾಗುತ್ತದೆ.2ಬೆಳಗಿವ ಜಾವ ನಾಡಿಗರ ಮನೆಯಿಂದ ಮದುವೆ ಆಚರಣೆಯಂತೆ ಎಲ್ಲ ಪೂಜೆ ನಡೆಯಲಿದೆ. ವಿಶ್ವಕರ್ಮ ಸಮುದಾಯದವರು ಮಾಂಗಲ್ಯ ಧಾರಣೆ ಮಾಡಲಿದ್ದಾರೆ. ಫೆ.24ರ ರಾತ್ರಿ 9 ಗಂಟೆಗೆ ತವರುಮನೆಯಿಂದ ಉತ್ಸವದೊಂದಿಗೆ ಗದ್ದುಗೆಯತ್ತ ಕರೆತರಲಾಗುತ್ತದೆ.

ಚಿನ್ನದ ಮುಖವಾಡ, ಬೆಳ್ಳಿ ಬಾಗಿಲು
ಈ ಬಾರಿ ಮಾರಿಕಾಂಬ ದೇವಿಗೆ ಚಿನ್ನದ ಮುಖವಾಡ ಮತ್ತು ಗರ್ಭಗುಡಿಗೆ ಬೆಳ್ಳಿ ಬಾಗಿಲು ಅರ್ಪಿಸಲಾಗುತ್ತಿದೆ ಎಂದು ಸಮಿತಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ ತಿಳಿಸಿದರು. ದೇವಿಗೆ 1 ಕೆ.ಜಿ 600 ಗ್ರಾಂ ತೂಕದ ಚಿನ್ನದ ಮುಖವಾಡ ಅರ್ಪಣೆ ಮಾಡಲಾಗುತ್ತಿದೆ. ಗರ್ಭಗುಡಿಗೆ 16 ಕೆ.ಜಿ ತೂಕದ ಬಾಗಿಲು ನೀಡಲಾಗುತ್ತಿದೆ. ಇದೆಲ್ಲವು ಭಕ್ತರು ಅರ್ಪಣೆ ಮಾಡಿದ್ದಾರೆ. ಇದಕ್ಕಾಗಿ ದೇವಸ್ಥಾನ ಸಮಿತಿ ಚಂದಾ ಸಂಗ್ರಹ ಮಾಡಿಲ್ಲ ಎಂದರು.
ಗಾಂಧಿ ಬಜಾರ್‌ನಲ್ಲಿ ಮಹಾದ್ವಾರ
ಜಾತ್ರೆ ಅಂಗವಾಗಿ ಗಾಂಧಿ ಬಜಾರ್ ಪ್ರವೇಶದಲ್ಲಿ ಮಹಾದ್ವಾರ ನಿರ್ಮಿಸಲಾಗುತಿದೆ. ಕಾಳಿ ಅಲಂಕಾರದ 20 ಅಡಿ ಎತ್ತರ, 22 ಅಡಿ ಅಗಲದ ಪ್ರತಿಮೆ ನಿಲ್ಲಿಸಲಾಗುತ್ತದೆ. ಕಳೆದ ಬಾರಿಯು ಮಹಾದ್ವಾರಕ್ಕೆ ಉತ್ತಮ ಪ್ರತಿಕ್ರಿಯೆ ಇತ್ತು.
ಇದನ್ನೂ ಓದಿ – ಫುಡ್ ಕೋರ್ಟ್‌ನಿಂದ ಹೊರ ಬಂದ ವ್ಯಕ್ತಿಯ ಕಾಲಿನ ಮೇಲೆ ಬೈಕ್ ಹತ್ತಿಸಿ, ಕಲ್ಲಿನಿಂದ ಹೊಡೆದು ಹಲ್ಲೆ
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಉಮಾಪತಿ, ಹನುಂತಪ್ಪ, ರಾಮಯ್ಯ, ಸತ್ಯನಾರಾಯಣ, ತಿಮ್ಮಯ್ಯ, ಲೋಕೇಶ್, ಚಂದ್ರಶೇಖರ್, ಶ್ರೀಧರಮೂರ್ತಿ, ಪ್ರಕಾಶ್, ಹರೀಶ್ ರಾಜ್ ಸೇರಿದಂತೆ ಹಲವರು ಇದ್ದರು.
LATEST NEWS
- ಶಿವಮೊಗ್ಗದ ಡೇಂಜರ್ ಹಂಪ್ಗಳಿಗೆ 24 ಗಂಟೆಯ ಗಡುವು, ಬೈಕ್ನಲ್ಲಿ ಕಮಿಷನರ್ ಸಿಟಿ ರೌಂಡ್ಸ್

- ಶಿವಮೊಗ್ಗ, ಸಾಗರದಲ್ಲಿ ಕೆಲಸ ಹುಡುಕ್ತಿದ್ದೀರಾ? ಫೆಬ್ರವರಿ 18ರಂದು ನಡೆಯಲಿದೆ ಸಂದರ್ಶನ

- ಶಿವಮೊಗ್ಗ ಲೈವ್ BIG IMPACT, ಡೇಂಜರಸ್ ಹಂಪ್ಗಳಿಂದ ಶೀಘ್ರ ಮುಕ್ತಿ, ಮಹತ್ವದ ಮೀಟಿಂಗ್

- ಕೋಟೆ ಮಾರಿಕಾಂಬೆಗೆ 1 ಕೆಜಿ 600 ಗ್ರಾಂ ತೂಕದ ಚಿನ್ನದ ಮುಖವಾಡ

- ಫುಡ್ ಕೋರ್ಟ್‌ನಿಂದ ಹೊರ ಬಂದ ವ್ಯಕ್ತಿಯ ಕಾಲಿನ ಮೇಲೆ ಬೈಕ್ ಹತ್ತಿಸಿ, ಕಲ್ಲಿನಿಂದ ಹೊಡೆದು ಹಲ್ಲೆ

About The Editor
ನಿತಿನ್ ಆರ್.ಕೈದೊಟ್ಲು






