ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 27 MAY 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ತಿರುಪತಿಯಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ ಸ್ಟಾರ್ ಏರ್ ವಿಮಾನವು (Flight) ಹವಾಮಾನ ವೈಪರಿತ್ಯದಿಂದ ಶಿವಮೊಗ್ಗದಲ್ಲಿ ಲ್ಯಾಂಡ್ ಆಗಲು ಸಾಧ್ಯವಾಗದೆ ಹೈದರಾಬಾದ್‌ಗೆ ತೆರಳಿತ್ತು. ಶನಿವಾರ ಮಧ್ಯಾಹ್ನ ಘಟನೆ ನಡೆದಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ತಿರುಪತಿಯಿಂದ ಮಧ್ಯಾಹ್ನ 1.05ಕ್ಕೆ ಹೊರಟ ವಿಮಾನ ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಎರಡು ಬಾರಿ ಪ್ರಯತ್ನಪಟ್ಟರು ಲ್ಯಾಂಡಿಂಗ್ ಸಾಧ್ಯವಾಗಲಿಲ್ಲ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ವಿಮಾನ ಹೈದರಾಬಾದ್‌ಗೆ ತೆರಳಿತ್ತು. ಸಂಜೆ 4 ಗಂಟೆಗೆ ಹೈದರಾಬಾದ್‌ನಿಂದ ಹೊರಟ ವಿಮಾನ 4.53ಕ್ಕೆ ಶಿವಮೊಗ್ಗದಲ್ಲಿ ಲ್ಯಾಂಡ್ ಆಗಿತ್ತು. ವಿಮಾನದಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ – ಶಿವಮೊಗ್ಗದ ರೋಡ್ ರೋಮಿಯೋಗಳಿಗೆ ಕಾದಿದೆ ಗ್ರಹಚಾರ, ಇವತ್ತಿಂದ ಚೆನ್ನಮ್ಮ ಪಡೆ ಆರಂಭ, ಏನಿದು?
ಮೋಡ ಕವಿದ ವಾತಾವರಣ ಮತ್ತು ಭಾರಿ ಮಳೆ ಸಂದರ್ಭ ಪೈಲೆಟ್‌ಗಳಿಗೆ ಶಿವಮೊಗ್ಗ ವಿಮಾನ ನಿಲ್ದಾಣದ ರನ್‌ವೇ ಗೋಚರಿಸುವುದಿಲ್ಲ. ಹಾಗಾಗಿ ಲ್ಯಾಂಡ್ ಮಾಡಲು ಒಂದೆರಡು ಬಾರಿ ಪ್ರಯತ್ನಿಸಿ ಸುರಕ್ಷತೆ ದೃಷ್ಟಿಯಿಂದ ವಿಮಾನವನ್ನು ಬೇರೆಡೆಗೆ ಡೈವರ್ಟ್ ಮಾಡಲಾಗುತ್ತದೆ. ರನ್ ವೇ ಕಾಣದಿದ್ದರು ತಂತ್ರಜ್ಞಾನ ಬಳಸಿ ಲ್ಯಾಂಡ್ ಮಾಡುವ ವ್ಯವಸ್ಥೆ ಇನ್ನು ಇಲ್ಲಿ ಅಳವಡಿಸದಿರುವುದು ಇದಕ್ಕೆ ಕಾರಣ.