SHIVAMOGGA LIVE | 29 MAY 2023
SHIMOGA : ನಗರದ ವಿವಿಧೆಡೆ ಸಂಜೆ ವೇಳೆ ಜೋರು ಗಾಳಿ ಮತ್ತು ಸಣ್ಣ ಪ್ರಮಾಣದಲ್ಲಿ ಮಳೆಯಾಗಿದೆ. ಗಾಳಿಯ ರಭಸಕ್ಕೆ ಹಲವು ಕಡೆ ಮರಗಳು (tree) ಧರೆಗುರುಳಿವೆ. ವಾಹನಗಳಿಗೆ ಹಾನಿಯಾಗಿದ್ದು, ಸಂಚಾರ ದಟ್ಟಣೆ ಉಂಟಾಗಿದೆ.
ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿ ತೆಂಗಿನ ಮರ (tree) ಧರೆಗುರುಳಿದೆ. ಸಾಧನಾ ಕಣ್ಣಿನ ಆಸ್ಪತ್ರೆ ರಸ್ತೆಯಲ್ಲಿ ನಿಂತಿದ್ದ ಎರಡು ಕಾರುಗಳ ಮೇಲೆ ತೆಂಗಿನ ಮರ ಬಿದ್ದಿದ್ದರಿಂದ ಕಾರುಗಳು ಜಖಂ ಆಗಿವೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಇದನ್ನೂ ಓದಿ – ವಾಟ್ಸಪ್ ಬಳಸುವಾಗ ಹುಷಾರ್, ಶಿವಮೊಗ್ಗದ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರುವಂತೆ ಮಾಡಿತು ಮೆಸೇಜ್, ಏನಿದು ಕೇಸ್?
ಸಂಜೆ ವೇಳೆ ಈ ಮಾರ್ಗದಲ್ಲಿ ವಾಹನ ಸಂಚಾರ ಹೆಚ್ಚು. ಇದೆ ವೇಳೆ ಮರ ಧರೆಗುರುಳಿದ್ದು, ಸುತ್ತಮುತ್ತಲ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಅದೃಷ್ಟವಶಾತ್ ಸಾವು, ನೋವು ಸಂಭವಿಸಿಲ್ಲ.
ಇನ್ನು, ನಗರದ ದೈವಜ್ಞ ಕಲ್ಯಾಣ ಮಂಟಪದ ಪಕ್ಕದಲ್ಲಿರುವ ಹೊಸಮನೆ ಬಡಾವಣೆಯ ರಸ್ತೆಯಲ್ಲಿಯು ತೆಂಗಿನ ಮರ ಧರೆಗುರುಳಿದೆ. ಭಾರಿ ಗಾಳಿಗೆ ಮರ ಬುಡಮೇಲಾಗಿದೆ. ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದಿದ್ದರಿಂದ ಸುತ್ತಮುತ್ತಲು ವಿದ್ಯುತ್ ಕಡಿತವಾಗಿದೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ