ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 9 ಅಕ್ಟೋಬರ್ 2019
ಎರಡು ತಿಂಗಳ ಬಳಿಕ ವಾಹನಗಳ ಸಂಚಾರಕ್ಕೆ ಮುಕ್ತವಾಗಿದ್ದ ತುಂಗಾ ನದಿ ಹಳೆ ಸೇತುವೆ ಕೆಲವೆ ಗಂಟೆಯಲ್ಲಿ ಮತ್ತೆ ಬಂದ್ ಆಗಿದೆ.
ಸೇತುವೆ ಮೇಲೆ ಭಾರಿ ವಾಹನ ಸಂಚಾರ ನಿಷೇಧಿಸಲಾಗಿದೆ. ಭಾರಿ ವಾಹನಗಳು ಸೇತುವೆ ಮೇಲೆ ಸಂಚರಿಸುವುದನ್ನು ತಡೆಯಲು ಎರಡು ಕಡೆ ಹ್ಯಾಂಗ್ಲರ್’ಗಳನ್ನು ಅಳವಡಿಸಲಾಗಿದೆ. ಈ ಹ್ಯಾಂಗ್ಲರ್’ಗೆ ಗೂಡ್ಸ್ ಆಟೋ ಡಿಕ್ಕಿ ಹೊಡೆದಿದೆ. ಹ್ಯಾಂಗ್ಲರ್ ಬೆಂಡ್ ಆಗಿದ್ದು, ವಾಹನ ಸಂಚಾರವನ್ನು ಪುನಃ ಸ್ಥಗಿತಗೊಳಿಸಲಾಗಿದೆ.
ಎರಡು ತಿಂಗಳು ಬಂದ್ ಆಗಿತ್ತು ಸೇತುವೆ
ಹಳೆ ಸೇತುವೆ ಮುಂಭಾಗ ರಸ್ತೆಯಲ್ಲಿ ಸೀಳು ಬಿಟ್ಟಿತ್ತು. ಇದರಿಂದ ದುರಸ್ಥಿ ಕಾಮಗಾರಿ ನಡೆದು ಎರಡು ತಿಂಗಳ ಬಳಕ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ದ್ವಿಚಕ್ರ ವಾಹನಗಳು, ಕಾರು, ಆಟೋಗಳಿಗೆ ಮಾತ್ರವೆ ಸೇತುವೆ ಮೇಲೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಬಿ.ಹಚ್.ರಸ್ತೆಯಲ್ಲಿ ಟ್ರಾಫಿಕ್ ಜಾಮ್
ಅಪಘಾತದ ಬಳಿಕ ದಿಢೀರ್ ವಾಹನಗಳ ಮಾರ್ಗದಲ್ಲಿ ಬದಲಾವಣೆ ಮಾಡಲಾಯಿತು. ಟ್ರಾಫಿಕ್ ಪೊಲೀಸರು ಹೊಸ ಸೇತುವೆ ಮೇಲೆ ವಾಹನ ಸಂಚಾರಕ್ಕೆ ಅನುವು ಮಾಡಿದರು. ಇದರಿಂದ ಟ್ರಾಫಿಕ್ ಸಮಸ್ಯೆ ಉಂಟಾಯಿತು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422