ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಚಾಲುಕ್ಯ ನಗರದ ಸಾಹಿತ್ಯ ಗ್ರಾಮದಲ್ಲಿ ಮಾರ್ಚ್ 13 ಹಾಗೂ 14ರಂದು ಎರಡು ದಿನಗಳು ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ (Sahitya Sammelana) ಆಯೋಜಿಸಲಾಗಿದೆ. ಹಿರಿಯ ಸಾಹಿತಿ ವಿಜಯಶ್ರೀ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಿ. ಮಂಜುನಾಥ ತಿಳಿಸಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಮಂಜುನಾಥ್, ಮಾ.13ರಂದು ಬೆಳಗ್ಗೆ 9.30ಕ್ಕೆ ಧ್ವಜಾರೋಹಣದ ಮೂಲಕ ಸಮ್ಮೇಳನ ಆರಂಭವಾಗಲಿದೆ. ನಂತರ ಸಮ್ಮೇಳನದ ಸರ್ವಾಧ್ಯಕ್ಷರ ಜೊತೆಯಲ್ಲಿ ಗೋಪಾಳದ ಆನೆ ವೃತ್ತದಿಂದ ಕನ್ನಡ ಜಾಗೃತಿ ನಡಿಗೆ ಆರಂಭವಾಗಲಿದೆ. ಬೆಳಗ್ಗೆ 11.30ಕ್ಕೆ ವಿಮರ್ಶಕಿ ಎಂ.ಎಸ್. ಆಶಾದೇವಿ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಕವಿ ಸುಬ್ಬು ಹೊಲೆಯಾರ್ ಪಾಲ್ಗೊಳ್ಳಲಿದ್ದಾರೆ. ಹೆಚ್.ಪಿ. ಜಾನಕಿ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ ಎಂದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಅಮಾನವೀಯ ಕೃತ್ಯ, ಕಂಬಕ್ಕೆ ಬೆಕ್ಕಿನ ಮೃತದೇಹ ಕಟ್ಟಿದ ಕಿಡಿಗೇಡಿಗಳು
ಡಿ.ಬಿ. ರಜಿಯಾ, ರತ್ನಾಕರ ಕುನುಗೋಡು ಭಾಗವಹಿಸಲಿದ್ದಾರೆ. ಸರ್ಕಾರಿ ನೌಕರರ ಸಂಘದ ನಾಟಕ ತಂಡದಿಂದ ಪಿ. ಲಂಕೇಶ್ ಅವರ ಸಂಕ್ರಾಂತಿ ನಾಟಕ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.
ಮಾ.14ರಂದು ಶನಿವಾರ ಬೆಳಿಗ್ಗೆ 9.30ಕ್ಕೆ ಅಪರ ಜಿಲ್ಲಾಧಿಕಾರಿ ವಿ. ಅಭಿಷೇಕ್ ರಾಷ್ಟ್ರಧ್ವಜ, ಉಪ ವಿಭಾಗಾಧಿಕಾರಿ ಎಸ್. ಸತ್ಯನಾರಾಯಣ ಅವರು ನಾಡಧ್ವಜ, ಡಿ. ಮಂಜುನಾಥ ಪರಿಷತ್ತಿನ ಧ್ವಜಾರೋಹಣ ಮಾಡಲಿದ್ದಾರೆ. ಕಥೆ ಕೇಳೋಣ ಬನ್ನಿ ಗೋಷ್ಠಿಯಲ್ಲಿ ಕಥೆಗಾರ ಕಂ.ನಾಡಿಗ ನಾರಾಯಣ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಅಧ್ಯಕ್ಷತೆ ವಹಿಸುವರು.

ಸಂಜೆ 6 ಗಂಟೆಗೆ ನಡೆಯುವ ಸಮಾರೋಪದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಮ್ಮೇಳನಾಧ್ಯಕ್ಷೆ ವಿಜಯಶ್ರೀ, ಸಂಸದ ಬಿ.ವೈ. ರಾಘವೇಂದ್ರ, ಜಿಲ್ಲೆಯ ಎಲ್ಲಾ ಶಾಸಕರು ಪಾಲ್ಗೊಳ್ಳಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತಾಧಿಕಾರಿ ಕೆ.ಎ. ದಯಾನಂದ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆ.ಎಸ್. ಹುಚ್ಚರಾಯಪ್ಪ ಡಿ.ಗಣೇಶ್, ಎಂ.ಎಂ. ಸ್ವಾಮಿ, ಆರ್. ರತ್ನಯ್ಯ, ರಾಮಾಚಾರ್, ಎಸ್. ಷಣ್ಮುಖಪ್ಪ ಕೃಷ್ಣಮೂರ್ತಿ ಹಿಳ್ಳೋಡಿ, ಭೈರಾಪುರ ಶಿವಪ್ಪಗೌಡರು, ಕೆ. ಎಸ್. ಅನುರಾಧ, ನಳಿನಾಕ್ಷಿ, ಜೆ. ಕುಬೇರಪ್ಪ ಉಪಸ್ಥಿತರಿದ್ದರು.

LATEST NEWS
- ಶಿವಮೊಗ್ಗದಲ್ಲಿ ನಾಳೆಯಿಂದ ಎರಡು ದಿನ ಸಾಹಿತ್ಯ ಸಮ್ಮೇಳನ, ಯಾರೆಲ್ಲ ಭಾಗವಹಿಸ್ತಿದ್ದಾರೆ?

- ನವುಲೆ ಬಳಿ ನೇಣು ಬಿಗಿದುಕೊಂಡ ಯುವಕನನ್ನು ರಕ್ಷಿಸಿದ ಪೊಲೀಸರು, ಹೇಗಿತ್ತು ಕಾರ್ಯಾಚರಣೆ?

- ಹೊಂಬುಜದಲ್ಲಿ ಬೆಳ್ಳಿ ರಥೋತ್ಸವ, ಜಾತ್ರೆಯಲ್ಲಿ ಏನೇನಲ್ಲ ಪೂಜೆ ನಡೆಯಿತು?

- ಜನವರಿಯಲ್ಲಿ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ

- ಕಾರ್ಗಲ್ನಲ್ಲಿ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಿಢೀರ್ ಅಸ್ವಸ್ಥ, ಆಸ್ಪತ್ರೆಗೆ ದಾಖಲು

About The Editor
ನಿತಿನ್ ಆರ್.ಕೈದೊಟ್ಲು





