SHIVAMOGGA LIVE NEWS | BIKE ACCIDENT | 07 ಮೇ 2022
ಡಿವೈಡರ್’ಗೆ ಬೈಕ್ ಡಿಕ್ಕಿಯಾಗಿ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವ ಉಂಟಾಗಿ ಸಾವನ್ನಪ್ಪಿದ್ದಾರೆ.
ಮೃತರನ್ನು ಅಭಯ್ ಮತ್ತು ವರುಣ್ ಎಂದು ಗುರುತಿಸಲಾಗಿದೆ. ಶಿವಮೊಗ್ಗದ ಆಲ್ಕೊಳದ ಎಫ್.ಸಿ.ಐ ಗೋಡನ್ ಬಳಿ ಇವತ್ತು ಸಂಜೆ ಅಪಘಾತ ಸಂಭವಿಸಿದೆ.
ಹೇಗಾಯ್ತು ಅಪಘಾತ?
ಬೈಕ್ ಸವಾರರು ಅತಿ ವೇಗವಾಗಿ ಬಂದಿದ್ದು ತಿರುವಿನಲ್ಲಿ ನಿಯಂತ್ರಣ ತಪ್ಪಿ ಡಿವೈಡರ್’ಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಅಪಘಾತದಲ್ಲಿ ಇಬ್ಬರು ಕೆಳಗೆ ಬಿದ್ದು ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ರಕ್ತಸ್ರಾವ ಉಂಟಾಗಿ ಸ್ಥಳದಲ್ಲೇ ಇಬ್ಬರೂ ಮೃತರಾಗಿದ್ದಾರೆ.
ಹೊಚ್ಚ ಹೊಸ ಬೈಕ್
ಅಭಯ್ ಮತ್ತು ವರುಣ್ ಚಲಾಯಿಸುತ್ತಿದ್ದದ್ದು ಹೊಚ್ಚ ಬೈಕ್ ಆಗಿದೆ. ಕಳೆದ ಎರಡು ತಿಂಗಳ ಹಿಂದಷ್ಟೆ ಈ ಬೈಕ್ ರಿಜಸ್ಟರ್ ಆಗಿತ್ತು ಎಂದು ತಿಳಿದು ಬಂದಿದೆ. ವಿಚಾರ ತಿಳಿಯುತ್ತಿದ್ದಂತೆ ಅವರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ.
ಇದನ್ನೂ ಓದಿ – ಡ್ರಾಪ್ ಕೇಳಿದವನೆ ಬೈಕ್ ಕದ್ದೊಯ್ದ, ಶಿವಮೊಗ್ಗದ ಸಾಗರ ರಸ್ತೆಯಲ್ಲಿ ಪ್ರಕರಣ, ಹೇಗಾಯ್ತು ಕಳವು?