ಶಿವಮೊಗ್ಗ ಲೈವ್.ಕಾಂ | SHIMOGA | 30 ಮಾರ್ಚ್ 2020
‘ಮೂರು ದಿನದಿಂದ ಬಿಸ್ಕೇಟ್ ತಿಂದು ಬದುಕುತ್ತಿದ್ದೇವೆ. ಉಳಿಯಲು ಜಾಗವಿಲ್ಲ. ಲಾಡ್ಜ್’ನವರು ಹೊರಗೆ ಹೋಗಿ ಎಂದಿದ್ದಾರೆ. ಈಗ ಡಿಸಿ ಆಫೀಸ್ ಮುಂದೆಯೆ ಇರಬೇಕಾಗಿದೆ. ರಾತ್ರಿವರೆಗು ಕಾದು ನೋಡುತ್ತೇವೆ. ಆನಂತರ ನಡೆದುಕೊಂಡೇ ಊರಿಗೆ ಹೋಗುತ್ತೇವೆ..’
ಶಿವಮೊಗ್ಗದಲ್ಲಿ ಗೊಂಬೆ ಮಾರಲು ಬಂದಿದ್ದ ಉತ್ತರ ಪ್ರದೇಶದ ಯುವಕರ ಆತಂಕದ ಮಾತುಗಳಿವು. ಮಾರ್ಚ್ 10ರಂದು ಈ ಯುವಕರು ಶಿವಮೊಗ್ಗಕ್ಕೆ ಬಂದಿದ್ದಾರೆ. ಇನ್ನೇನು ವ್ಯಾಪಾರ ಆರಂಭಿಸಬೇಕು ಅನ್ನುವ ಹೊತ್ತಿಗೆ ಕರೋನ ಲಾಕ್’ಡೌನ್ ಶುರುವಾಗಿತ್ತು. ಹಾಗಾಗಿ ಉತ್ತರ ಪ್ರದೇಶದ ಆಗ್ರಾದಿಂದ ಬಂದಿರುವ ಗೊಂಬೆ ಮಾರಾಟಗಾರರು ಶಿವಮೊಗ್ಗದಲ್ಲಿಯೇ ಸಿಕ್ಕಿಬಿದ್ದಿದ್ದಾರೆ.
ಲಾಡ್ಜ್ ಖಾಲಿ ಮಾಡಬೇಕಾದ ಒತ್ತಡ
ಶಿವಮೊಗ್ಗದ ಲಾಡ್ಜ್’ನಲ್ಲಿ ಉಳಿದುಕೊಂಡಿದ್ದ ಉತ್ತರ ಪ್ರದೇಶದ ಗೊಂಬೆ ಮಾರಾಟಗಾರರಿಗೆ, ಹಣದ ಕೊರತೆ ಎದುರಾಗಿದೆ. ಲಾಡ್ಜ್ ಖಾಲಿ ಮಾಡಿ ಎಂದು ಮಾಲೀಕರು ಸೂಚಿಸಿದ್ದಾರೆ. ಹಾಗಾಗಿ ಉಳಿಯಲು ಜಾಗವಿಲ್ಲದಂತಾಗಿದೆ. ಮತ್ತೊಂದೆಡೆ ತಮ್ಮೂರಿಗೆ ತೆರಳಲು ಆಗುತ್ತಿಲ್ಲ. ಹಾಗಾಗಿ ಅನುಮತಿ ಪತ್ರಕ್ಕಾಗಿ ಮೂರ್ನಾಲ್ಕು ದಿನದಿಂದ ಜಿಲ್ಲಾಧಿಕಾರಿ ಕಚೇರಿಗೆ ಬಂದು ಹೋಗುತ್ತಿದ್ದಾರೆ.
ಪಾಸ್ ಸಿಗದೆ ಪರದಾಟ
ಉತ್ತರ ಪ್ರದೇಶದಿಂದ ಲಾರಿಯಲ್ಲಿ ಬಂದಿರುವ ಯುವಕರು, ಈಗ ಅದೇ ಲಾರಿಯಲ್ಲಿ ಹಿಂತಿರುಗಲು ಸಿದ್ಧವಿದ್ದಾರೆ. ಆದರೆ ಕರೋನ ಲಾಕ್’ಡೌನ್ ಪರಿಣಾಮ ಯಾರೂ ಓಡಾಡುವಂತಿಲ್ಲ. ಹಾಗಾಗಿ ಜಿಲ್ಲಾಧಿಕಾರಿ ಅವರು ಅನುಮತಿ ಪತ್ರ ಕೊಟ್ಟರೆ ನೆಮ್ಮದಿಯಾಗಿ ಊರು ಸೇರಬಹುದು ಅನ್ನುವುದು ಯುವಕರ ಯೋಚನೆ.
ಆದರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅನುಮತಿ ಪತ್ರ ಅಥವಾ ಪಾಸ್ ನೀಡುವುದನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಇದರಿಂದ ಯುವಕರು ದಿಕ್ಕು ತೋಚದಂತಾಗಿದ್ದಾರೆ. ಹಾಗಾಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಶೆಡ್’ನಲ್ಲಿ ಕುಳಿತಿದ್ದಾರೆ. ಸಂಜೆವರೆಗೂ ಕಾದು ನೋಡಿ, ಬಳಿಕ ನಡೆದುಕೊಂಡೇ ಉತ್ತರ ಪ್ರದೇಶಕ್ಕೆ ತೆರಳಲು ನಿರ್ಧರಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200