ಶಿಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ಓದು, ಬರಹ ಆರಂಭಿಸಿ ವಿಭಿನ್ನವಾಗಿ ಪ್ರತಿಭಟಿಸಿದ ಉರ್ದು ಶಾಲೆ ಮಕ್ಕಳು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 9 NOVEMBER 2022

SHIMOGA | ಮೂಲ ಸೌಕರ್ಯವಿಲ್ಲದ ಶಾಲೆ (urdu school). ಬೇಸತ್ತು ಪೋಷಕರೊಂದಿಗೆ ಶಿಕ್ಷಣ ಇಲಾಖೆ ಆವರಣಕ್ಕೆ ಬಂದ ಮಕ್ಕಳು. ಡಿಡಿಪಿಐ ಕಚೇರಿ ಮುಂದೆಯೇ ಪುಸ್ತಕ ತೆಗೆದು ಓದು ಆರಂಭಿಸಿದ ಪುಟಾಣಿಗಳು.

ನಗರದ ನ್ಯೂ ಮಂಡ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯ ದುಸ್ಥಿತಿ ಮಕ್ಕಳು, ಪೋಷಕರು ಬೇಸರ ಮತ್ತು ಆತಂಕ ಮೂಡಿಸಿದೆ. ಇದೆ ಕಾರಣಕ್ಕೆ ವಿಭಿನ್ನವಾಗಿ ಪ್ರತಿಭಟನೆ ನಡೆಸಲಾಯಿತು.

ಇಲ್ಲ.. ಇಲ್ಲ.. ಇಲ್ಲ.. (urdu school)

ಸರ್ಕಾರಿ ಉರ್ದು ಶಾಲೆಯಲ್ಲಿ (urdu school) ಇಲ್ಲಗಳ ಪಟ್ಟಿ ದೊಡ್ಡದಿದೆ. ಕೊಠಡಿಗಳು ಶಿಥಿಲಗೊಂಡಿವೆ. ಕುಡಿಯಲು ನೀರಿಲ್ಲ. ಭದ್ರತೆ ಇಲ್ಲ. ಕಾಂಪೌಂಡ್ ಇಲ್ಲ. ಹಂದಿ, ಬೀದಿ ನಾಯಿಗಳ ಕಾಟ. ನೀರಿನ ಪೈಪ್ ಒಡೆದಿದೆ. ಶೌಚಾಲಯಕ್ಕೆ ನೀರಿಲ್ಲ. ಇದು ಮಕ್ಕಳು, ಶಿಕ್ಷಕರಿಗೆ ಬೇಸರ ಮೂಡಿಸಿದ್ದರೆ, ಯಾವಾಗ ಏನಾಗುತ್ತೋ ಎಂದು ಪೋಷಕರು ಆತಂಕಕ್ಕೀಡಾಗಿದ್ದಾರೆ.

ಮಕ್ಕಳ ದಾಖಲಾತಿ ಇಳಿಮುಖ

ಮೂಲ ಸೌಕರ್ಯವಿಲ್ಲದ ಶಾಲೆಗೆ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. 70 ವರ್ಷದ ಹಿಂದೆ ನಿರ್ಮಾಣವಾದ ಶಾಲೆಯಲ್ಲಿ ಈವೆರೆಗೂ 270 ಮಕ್ಕಳು ಓದುತ್ತಿದ್ದರು. ಈಗ ಅದು 95ಕ್ಕೆ ಕುಸಿದಿದೆ. ಶಾಲೆಗೆ ಮೂಲ ಸೌಕರ್ಯ ಒದಗಿಸಿ ಎಂದು ಎಸ್.ಡಿ.ಎಂ.ಸಿ ನೇತೃತ್ವದಲ್ಲಿ ಜನಪ್ರತಿನಿಧಿಗಳಿಂದ, ಅಧಿಕಾರಿಗಳವರೆಗೆ ಎಲ್ಲರಿಗು ಮನವಿ ಸಲ್ಲಿಸಿದ್ದಾಗಿದೆ. ಆದರೆ ಬೇಡಿಕೆ ಈಡೇರಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.

ಕ್ಲಿಕ್ ಮಾಡಿ ಇದನ್ನೂ ಓದಿ 3 ಹೆಲ್ಮೆಟ್ ಧರಿಸಿ ಪಟ್ಟಣದಲ್ಲಿ ಸೈಕಲ್ ಸವಾರಿ, ಗಮನ ಸೆಳೆದ ಸಾಮಾಜಿಕ ಕಾರ್ಯಕರ್ತ, ಉದ್ದೇಶವೇನು?

ಇದೆ ಕಾರಣಕ್ಕೆ ಮಕ್ಕಳನ್ನು ಡಿಡಿಪಿಐ ಕಚೇರಿ ಆವರಣಕ್ಕೆ ಕರೆ ತಂದಿದ್ದ ಪೋಷಕರು, ಅಲ್ಲಿಯೇ ಪುಸ್ತಕ ಕೊಟ್ಟು ಓದುವಂತೆ ತಿಳಿಸಿದ್ದರು.

ಪ್ರತಿಭಟನೆಯಲ್ಲಿ  ಎಸ್.ಡಿ.ಎಂ.ಸಿ ಅಧ್ಯಕ್ಷ ರಿಯಾಜ್ ಅಹ್ಮದ್, ಪ್ರಮುಖರಾದ ಅಯೂಬ್ ಖಾನ್, ಸಯ್ಯದ್ ಶಫಿವುಲ್ಲಾ, ಸಮೀವುಲ್ಲಾ, ಮುಬಿನ್, ನೂರುಲ್ಲಾ, ಮಹ್ಮದ್ ಜಬೀರ್, ಜಫ್ರುಲ್ಲಾ ಸೇರಿದಂತೆ ಹಲವರಿದ್ದರು.

Shimoga Nanjappa Hospital

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : November 9, 2022

Leave a Comment