ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 24 DECEMBER 2023
SHIMOGA : ಜಿಲ್ಲೆಯಾದ್ಯಂತ ಶ್ರದ್ಧಾ, ಭಕ್ತಿಯಿಂದ ವೈಕುಂಠ ಏಕಾದಶಿ ಆಚರಿಸಲಾಯಿತು. ಬೆಳಗ್ಗೆಯಿಂದಲೆ ಭಕ್ತರು ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಸ್ವರ್ಗದ ಬಾಗಿಲಿನ ಮೂಲಕ ಹಾದು ಹೋಗಿ ಪುನೀತರಾದರು. ಇನ್ನು, ವೈಕುಂಠ ಏಕಾದಶಿ ಹಿನ್ನೆಲೆ ದೇಗುಲಗಳಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಎಲ್ಲೆಲ್ಲಿ ಹೇಗಿತ್ತು ಪೂಜೆ, ಅಲಂಕಾರ?
ಶಿವಮೊಗ್ಗದ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನ, ನವುಲೆ ಶ್ರೀ ಲಕ್ಷ್ಮಿ ವೆಂಕಟರಮಣ ದೇಗುಲ, ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಾಲಯ, ವೆಂಕಟೇಶ ನಗರದ ವೆಂಕಟೇಶ ಸ್ವಾಮಿ ದೇವಾಲಯ, ಅಶ್ವತ್ಥ ನಗರದ ದೇವಗಿರಿ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ, ರವೀಂದ್ರ ನಗರದ ಗಣಪತಿ ದೇವಾಲಯ, ಗೌಡ ಸಾರಸ್ವತ ಕಲ್ಯಾಣ ಮಂದಿರದ ಲಕ್ಷ್ಮಿ ವೆಂಕಟರಮಣ ದೇಗುಲ, ಭದ್ರಾವತಿಯ ಲಕ್ಷ್ಮಿ ವೆಂಕಟೇಶ್ವರ ದೇವಾಲಯ, ಹುತ್ತಾ ಕಾಲೋನಿಯ ಶ್ರೀ ತಿರುಮಲ ದೇವಾಲಯ, ಹಳೇನಗರದ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು.
ಇದನ್ನೂ ಓದಿ – ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆಗೆ ದಿನಾಂಕ ನಿಗದಿ, ಸಿದ್ಧತೆ ಕುರಿತು ಮಹತ್ವದ ಮೀಟಿಂಗ್
ಇಲ್ಲಿದೆ ಫೋಟೊ ಆಲ್ಬಂ
ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇಗುಲ
ವೆಂಕಟೇಶ ನಗರದ ಶ್ರೀ ವೆಂಕಟೇಶ್ವರ ದೇಗುಲ
ಅಶ್ವತ್ಥ ನಗರದ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇಗುಲ
ನವುಲೆ ಶ್ರೀ ವೆಂಕಟೇಶ್ವರ ಸ್ವಾಮಿ ದೇಗುಲ
ಹಾಡೋನಹಳ್ಳಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇಗುಲ
ಪಿಳ್ಳಂಗಿರಿಯ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ದೇಗುಲ
ವಿಶೇಷ ಪೂಜೆ, ವೈಕುಂಠನಾಥನ ದರ್ಶನಕ್ಕೆ ಬಾಗಿಲು
ವೈಕುಂಠ ಏಕಾದಶಿ ಹಿನ್ನೆಲೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ವೈಕುಂಠನಾಥನ ದರ್ಶನಕ್ಕೆ ಪರಮಪದದ ಬಾಗಿಲು ತೆಗೆಯಲಾಯಿತು. ಸ್ವಾರ್ಗದ ಬಾಗಿಲಿನ ಮೂಲಕ ಹಾದು ಹೋಗಿ ದೇವರ ದರ್ಶನ ಪಡೆದು ಭಕ್ತರು ಪುನೀತರಾದರು. ಶನಿವಾರ ಬೆಳಗ್ಗೆಯಿಂದ ತಡರಾತ್ರಿವರೆಗು ವಿವಿಧೆಡೆ ಭಕ್ತರು ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422