ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗ ಲೈವ್.ಕಾಂ | SHIMOGA | 12 ಡಿಸೆಂಬರ್ 2019
ಆಧಾರ್ ಕಾರ್ಡ್ ಮಾಹಿತಿ ಸರಿ ಹೊಂದದೆ ಇರುವ ಕಾರಣ ಸಾವಿರಾರು ವಿದ್ಯಾರ್ಥಿಗಳ ಸ್ಕಾಲರ್’ಶಿಪ್ ಅರ್ಜಿ ತಿರಸ್ಕರಿಸಿರುವುದನ್ನು ಖಂಡಿಸಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರು, ವಿದ್ಯಾಸಿರಿ ಯೋಜನೆ ಅಡಿ ವಿದ್ಯಾರ್ಥಿಗಳಿಗೆ ಸ್ಕಾಲರ್’ಶಿಪ್ ನೀಡಲು ಅರ್ಜಿ ಆಹ್ವಾನಿಸಲಾಗಿತ್ತು. ಆಧಾರ್ ಮಾಹಿತಿ ಸರಿ ಹೊಂದುತ್ತಿಲ್ಲ ಎಂದು 58 ಸಾವಿರ ವಿದ್ಯಾರ್ಥಿಗಳ ಸ್ಕಾಲರ್’ಶಿಪ್ ಅರ್ಜಿಯನ್ನು ತಿರಸ್ಕರಿಸಲಾಗಿದೆ.
ಮಾರ್ಕ್ಸ್ ಕಾರ್ಡ್’ನಲ್ಲಿರುವ ಮಾಹಿತಿಗು, ಆಧಾರ್ ಕಾರ್ಡ್’ನಲ್ಲಿರುವ ಮಾಹಿತಿಗೂ ವ್ಯತ್ಯಾಸವಿದೆ ಎಂಬ ಕಾರಣಕ್ಕೆ ಅರ್ಜಿ ತಿರಸ್ಕರಿಸಲಾಗಿದೆ. ಈಗ ಆಧಾರ್ ಕಾರ್ಡ್ ಮಾಹಿತಿ ಸರಿಪಡಿಸಲು ಕನಿಷ್ಠ 15 ದಿನ ಕಾಲವಕಾಶ ಬೇಕು. ಹಾಗಾಗಿ ಅರ್ಜಿಗಳನ್ನು ತಿರಸ್ಕರಿಸುವ ಬದಲು ಕಾಲವಕಾಶ ನೀಡಬೇಕು ಎಂದು ಎಬಿವಿಪಿ ಕಾರ್ಯಕರ್ತರು ಆಗ್ರಹಿಸಿದರು.
ಶಿವಮೊಗ್ಗ ಮಹಾನಗರದ ಕಾರ್ಯದರ್ಶಿ ಅರವಿಂದ್, ನಿರಂಜನ್, ಹಾಲಸ್ವಾಮಿ, ಮಂಜು, ಸ್ವಾತಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | shivamoggalive@gmail.com
ABVP protest against Government decision to cancel Vidyasiri Scholarship of Students.




