ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 21 NOVEMBER 2022
SHIMOGA | ನಗರದ ನೆಹರು ಕ್ರೀಡಾಂಗಣದಲ್ಲಿ ವಾಕಿಂಗ್ ಮಾಡುವವರು ಸಿಂಥಟಿಕ್ ಟ್ರ್ಯಾಕ್ (Synthetic Track) ಮೇಲೆ ಕಾಲಿಡುವಂತಿಲ್ಲ ಎಂದು ಆದೇಶಿಸಲಾಗಿದೆ. ಈ ಸಂಬಂಧ ಕ್ರೀಡಾಂಗಣದ ವಿವಿಧೆಡೆ ಬ್ಯಾನರ್ ಹಾಕಲಾಗಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಕಳೆದ ಮೂರು ದಿನದಿಂದ ನೆಹರು ಕ್ರೀಡಾಂಗಣದ ವಿವಿಧೆಡೆ ಬ್ಯಾನರ್ ಹಾಕಲಾಗಿದೆ. ಕ್ರೀಡಾ ಇಲಾಖೆ ವತಿಯಿಂದ ಬ್ಯಾನರ್ ಮುದ್ರಿಸಿ, ಸಾರ್ವಜನಿಕರ ಕಣ್ಣಿಗೆ ಬೀಳುವಂತೆ ಪ್ರಕಟಿಸಲಾಗಿದೆ.
(Synthetic Track)
ಬ್ಯಾನರ್ ನಲ್ಲಿ ಏನಿದೆ?
ಶಿವಮೊಗ್ಗದ ವಾಕಿಂಗ್ ಬಂಧುಗಳೆ ಸಿಂಥಟಿಕ್ ಟ್ರ್ಯಾಕನ್ನು ಅಥ್ಲೆಟಿಕ್ಸ್ ಕ್ರೀಡಾಪಟುಗಳಿಗೆ ಬಿಡೋಣ. ನಾವು ವಾಕಿಂಗಿಗೆ ಕ್ರೀಡಾಂಗಣದ ಹೊರಗಿನ ವಾಕಿಂಗ್ ಪಥವನ್ನು ಬಳಸೋಣ ಎಂದು ಪ್ರಕಟಿಸಲಾಗಿದೆ. ಇದರ ಕೆಳಗೆ ನೆಹರು ಕ್ರೀಡಾಂಗಣದ ಸಿಂಥಟಿಕ್ ಅಥ್ಲೆಟಿಕ್ ಟ್ರ್ಯಾಕಿನಲ್ಲಿ ವಾಕಿಂಗ್ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಕ್ರೀಡಾಂಗಣದ ಹೊರ ಭಾಗದ ವಾಕಿಂಗ್ ಪಥವನ್ನು ಬಳಸಲು ತಿಳಿಸಲಾಗಿದೆ. ಸಿಂಥಟಿಕ್ ಟ್ರ್ಯಾಕ್ ಬಳಸುವವರು ಕಡ್ಡಾಯವಾಗಿ ಶೂ ಬಳಸಬೇಕು ಎಂದು ಬ್ಯಾನರಿನಲ್ಲಿ ಪ್ರಕಟಿಸಲಾಗಿದೆ.
(Synthetic Track)
ಬ್ಯಾನರ್ ಹಾಕಲು ಕಾರಣವೇನು?
ನೆಹರು ಕ್ರೀಡಾಂಗಣದಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಅಥ್ಲೆಟಿಕ್ ಕ್ರೀಡಾಪಟುಗಳು ಅಭ್ಯಾಸ ಮಾಡುತ್ತಾರೆ. ವಿವಿಧ ಸ್ಪರ್ಧೆಗಳಿಗೆ ತರಬೇತಿ ನೀಡಲಾಗುತ್ತಿದೆ. ಪ್ರತಿದಿನ ಅಂದಾಜು 100 ಅಥ್ಲೆಟಿಕ್ ಕ್ರೀಡಾಪಟುಗಳು, ವಿವಿಧ ಸ್ಪರ್ಧೆಗೆ ಪ್ರಾಕ್ಟೀಸ್ ಮಾಡುತ್ತಾರೆ. ಅಥ್ಲೆಟಿಕ್ ಕ್ರೀಡಾಪಟುಗಳ ಅನುಕೂಲಕ್ಕಾಗಿಯೇ ಸಿಂಥಟಿಕ್ ಟ್ರಾಕ್ ಮಾಡಲಾಗಿದೆ.
ಕೆಲ ತಿಂಗಳಿಂದ ಈಚೆಗೆ ಹಲವು ನಾಗರಿಕರು ಸಿಂಥಟಿಕ್ ಟ್ರ್ಯಾಕ್ ಮೇಲೆ ವಾಕಿಂಗ್ ಮಾಡುತ್ತಿದ್ದಾರೆ. ಇದು ಕ್ರೀಡಾಪಟುಗಳ ಅಭ್ಯಾಸಕ್ಕೆ ಅಡ್ಡಿಯಾಗಿದೆ. ಇದನ್ನು ಪ್ರಶ್ನಿಸಿದ ಕ್ರೀಡಾಪಟುಗಳು, ಕೋಚ್ ಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ವಾಗ್ವಾದಕ್ಕು ಕಾರಣವಾಗಿದೆ. ಹಾಗಾಗಿ ಕ್ರೀಡಾ ಇಲಾಖೆ ವತಿಯಿಂದ ಬ್ಯಾನರ್ ಮೂಲಕ ಜಾಗೃತಿ ಆರಂಭಿಸಲಾಗಿದೆ.
(Synthetic Track)
ಹೊರಾಂಗಣದಲ್ಲಿ ವಾಕಿಂಗ್ ಗೆ ಅವಕಾಶ
ನೆಹರು ಕ್ರೀಡಾಂಗಣದಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ 500ಕ್ಕೂ ಹೆಚ್ಚು ಜನರು ವಾಕಿಂಗ್ ಮಾಡುತ್ತಾರೆ. ಇದಕ್ಕಾಗಿಯೇ ಕ್ರೀಡಾಂಗಣದ ಹೊರ ಆವರಣದಲ್ಲಿ ವಾಕಿಂಗ್ ಪಾಥ್ ಇದೆ. ಈವರೆಗೂ ಜನರು ವಾಕಿಂಗ್ ಪಾಥ್ ನಲ್ಲಿಯೇ ವಾಯು ವಿಹಾರ ಮಾಡುತ್ತಿದ್ದರು. ಆದರೆ ಸ್ಮಾರ್ಟ್ ಸಿಟಿ ಕಾಮಗಾರಿ ಹಿನ್ನೆಲೆ ವಾಕಿಂಗ್ ಪಾಥ್ ನಲ್ಲಿ ಸಮಸ್ಯೆಯಾಗಿತ್ತು. ಜೋರು ಮಳೆಯಾಗಿದ್ದರಿಂದ ಕೆಸರುಮಯವಾಗಿತ್ತು.
ವಾಕಿಂಗ್ ಪಾಥ್ ನಲ್ಲಿ ಸಮಸ್ಯೆಯಾಗಿದ್ದರಿಂದ ಹಲವರು ಕ್ರೀಡಾಂಗಣದ ಒಳಗೆ ಸಿಂಥಟಿಕ್ ಟ್ರ್ಯಾಕ್ ಮೇಲೆ ವಾಯು ವಿಹಾರ ಆರಂಭಿಸಿದ್ದರು. ಅಥ್ಲೆಟಿಕ್ ಕ್ರೀಡಾಪಟುಗಳು ವೇಗವಾಗಿ ಓಡುವಾಗ, ವಾಕಿಂಗ್ ಮಾಡುವವರು ಅಡ್ಡ ಬರುತ್ತಿದ್ದರು. ಇದರಿಂದ ಅಭ್ಯಾಸಕ್ಕೆ ತೊಂದರೆಯಾಗಿತ್ತು.
ರಾಜ್ಯ, ರಾಷ್ಟ್ರಮಟ್ಟಕ್ಕೆ ಸಿದ್ಧತೆ
ನೆಹರು ಕ್ರೀಡಾಂಗಣದಲ್ಲಿ ತರಬೇತಿ ಪಡೆಯುತ್ತಿರುವ ಹಲವು ಕ್ರೀಡಾಪಟುಗಳು ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದ್ದಾರೆ. ಇಲ್ಲಿ ಅಭ್ಯಾಸ ಮಾಡುತ್ತಿರುವ ಗೌತಮಿ ಗೌಡ, ಗೌರಾಂಗಿ ಗೌಡ, ಆಕಾಶ್ ಗೊಲ್ಲರ್, ನಿತಿನ್ ಸಿಂಗ್, ಅಭಯ್ ಡಿ.ವಿ, ಶ್ರೀದೇವಿಕಾ, ಐಮನ್ ಸೇರಿದಂತೆ ಹಲವು ಕ್ರೀಡಾಪಟುಗಳು ಈಚೆಗೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದಾರೆ.
ಸಿಂಥಟಿಕ್ ಟ್ರ್ಯಾಕ್ ಮೇಲೆ ವಾಕಿಂಗ್ ಮಾಡದಂತೆ ಮೊದಲ ಹಂತದಲ್ಲಿ ಜಾಗೃತಿ ಮೂಡಿಸಲು ಯೋಜಿಸಲಾಗಿದೆ. ಪರಿಸ್ಥಿತಿ ಬದಲಾಗದಿದ್ದರೆ ಸ್ಟೇಡಿಯಂ ಕಮಿಟಿಯಲ್ಲಿ ವಿಷಯ ಪ್ರಸ್ತಾಪಿಸಲಾಗುತ್ತದೆ. ಈ ಸಮಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಸೇರಿದಂತೆ ಹಲವರು ಇದ್ದಾರೆ. ಇಲ್ಲಿ ಕ್ರೀಡಾಂಗಣದ ಒಳಗೆ ವಾಕಿಂಗ್ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಬಹುದಾಗಿದೆ. ಅಲ್ಲದೆ ಸಿಂಥಟಿಕ್ ಟ್ರ್ಯಾಕ್ ಬಳಿ ಪೊಲೀಸರನ್ನು ಕೂಡ ನಿಯೋಜಿಸಬಹುದಾಗಿದೆ.
ಕ್ಲಿಕ್ ಮಾಡಿ ಇದನ್ನೂ ಓದಿ | ಕರೆಂಟ್ ಬಿಲ್ ಕಟ್ಟಿ ಅಂತಾ ಬಂತು ಮೆಸೇಜ್, ಆ ನಂಬರ್ ಗೆ ಕರೆ ಮಾಡಿದ ಮೇಲೆ ಕಾದಿತ್ತು ಶಾಕ್
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.