ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | SHIMOGA | 31 ಮಾರ್ಚ್ 2020
ಶಿವಮೊಗ್ಗ ನಗರದ ವ್ಯಾಪ್ತಿಯಲ್ಲಿ ಮಾರಾಣಾಂತಿಕ ಕೊರೋನ ವೈರಸ್ ನಿಯಂತ್ರಣ ಮತ್ತು ನಿರಾಶ್ರಿತ ಕಾರ್ಮಿಕರ ಊಟ, ವಸತಿ, ಆರೋಗ್ಯ ಸೇರಿದಂತೆ ತುರ್ತು ಸಮಸ್ಯೆಗಳ ಪರಿಹಾರಕ್ಕೆ, ಪ್ರತಿ 7 ವಾರ್ಡುಗಳಿಗೆ ಒಬ್ಬರಂತೆ ಅಧಿಕಾರಿಗಳನ್ನು ಒಳಗೊಂಡ ತಂಡ ನಿಯೋಜಿಸಲಾಗಿದ್ದೆ. ಸಂಕಷ್ಟಕ್ಕೊಳಗಾದವರು ಈ ಕೆಳಕಂಡವರನ್ನು ಸಂಪರ್ಕಿಸಿ ಸಹಾಯ ಪಡೆದುಕೊಳ್ಳುವಂತೆ ಮಹಾನಗರಪಾಲಿಕೆಯ ಆಯುಕ್ತ ಚಿದಾನಂದ ಎಸ್.ವಟಾರೆ ಅವರು ತಿಳಿಸಿದ್ದಾರೆ.
ಯಾರನ್ನು ಸಂಪರ್ಕಿಸಬೇಕು?
- ಒಂದರಿಂದ ಏಳನೇ ವಾರ್ಡ್‍ವರೆಗಿನ ಬಾಧಿತರು ಚಾಮರಾಜ್, ಸಹಾಯಕ ಕಾರ್ಯಪಾಲಕ ಅಭಿಯಂತರ ಮೊ.9448127454,
- ವಾರ್ಡ್ ಎಂಟರಿಂದ ಹದಿನಾಲ್ಕನೆ ವಾರ್ಡಿನ ಬಾಧಿತರು ಶ್ರೀಧರ್ ಜೆ., ಕಾರ್ಯಪಾಲಕ ಅಭಿಯಂತರರು, ಮೊ.8762288680,
- ವಾರ್ಡ್ ನಂಬರ್ 15ರಿಂದ 21ರವರಗಿನ ಬಾಧಿತರು ಅನಂತಪದ್ಮನಾಭ ಎಂ.ಆರ್. ಕಾರ್ಯಪಾಲಕ ಅಭಿಯಂತರರು ಮೊ.7022116800,
- ವಾರ್ಡ್ 22ರಿಂದ 28ರವರೆಗಿನ ಬಾಧಿತರು ಭರಮರೆಡ್ಡಿ ಬಿ.ಎಲ್., ಕಾರ್ಯಪಾಲಕ ಅಭಿಯಂತರರು, ಮೊ.9448425301
- ವಾರ್ಡ್ ನಂಬರ್ 29ರಿಂದ 35ರವರೆಗಿನ ಬಾಧಿತರು ಬಾಲಾಜಿರಾವ್ ಹೆಚ್.ಎಂ. ಉಪ ಆಯುಕ್ತರು, ಕಂದಾಯ ವಿಭಾಗ, ಮೊ. 9901716488

ವಲಸಿಗರು, ಕಾರ್ಮಿಕರಿಗೆ ವಸತಿ ಸೌಲಭ್ಯ
ಈಗಾಗಲೇ ಸಂಕಷ್ಟಕ್ಕೊಳಗಾದ, ವಲಸೆ ಬಂದ ಕಾರ್ಮಿಕರು ಹಾಗೂ ನಿರಾಶ್ರಿತರಿಗಾಗಿ ನಗರದ ಆಯ್ದ ಕಡೆಗಳಲ್ಲಿ 20 ಸ್ಥಳಗಳನ್ನು ಗುರುತಿಸಲಾಗಿದೆ. ಈಗ ನಾಲ್ಕು ಸ್ಥಳಗಳಲ್ಲಿ ವಸತಿ ಸೌಲಭ್ಯವನ್ನು ಕಲ್ಪಿಸಿ, ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಕಮಿಷನರ್ ತಿಳಿಸಿದ್ದಾರೆ.
ಹೊಳೆ ಬಸ್‍ಸ್ಟಾಪ್ ಬಳಿ ಬೆಕ್ಕಿನ ಕಲ್ಮಠದಲ್ಲಿ ಹೈದರಾಬಾದ್ ಕರ್ನಾಟಕ ಭಾಗದ ಕಲಬುರಗಿ ಮತ್ತು ಬೀದರ್‍ನ 30 ಕಾರ್ಮಿಕರು, ಖಾಸಗಿ ಬಸ್‍ನಿಲ್ದಾಣದ ಲಾಡ್ಜ್‍ನಲ್ಲಿ ಬಿಕ್ಷಕರು ಹಾಗೂ ವಸತಿಹೀನ 40 ಜನರಿಗೆ, ನಗರದ ಓ.ಟಿ.ರಸ್ತೆಯಲ್ಲಿರುವ ದುರ್ಗಾ-ಅಮೃತ ಲಾಡ್ಜ್‍ನಲ್ಲಿ ಉತ್ತರ ಪ್ರದೇಶದಿಂದ ವಲಸೆ ಬಂದಿದ್ದ 17 ಕಾರ್ಮಿಕರಿಗೆ ಹಾಗೂ ಪಾಲಿಕೆ ವತಿಯಿಂದ ನಗರದಲ್ಲಿ ವಸತಿ ರಹಿತವಾಗಿರುವವರಿಗಾಗಿ ಮಿಳ್ಳಘಟ್ಟದ ಗುರುನಾಥ ಸಾಮಿಲ್‍ನ ಸಮೀಪದಲ್ಲಿ 27ಜನರಿಗೆ ಊಟೋಪಹಾರ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಲ್ಲದೇ ನಗರ ವ್ಯಾಪ್ತಿಯ ಹಲವು ಪ್ರದೇಶಗಳ ಹೊರವಲಯದಲ್ಲಿ ಬೀಡು ಬಿಟ್ಟಿರುವ ಕುಶಲಕರ್ಮಿಗಳು, ಕಾರ್ಮಿಕರು ಹಾಗೂ ಊರೊಳಗೆ ವಸತಿ ಸೌಲಭ್ಯ ಹೊಂದಿದ್ದು, ಉದ್ಯೋಗಾವಕಾಶ ದೊರೆಯದೆ ಆಹಾರಕ್ಕಾಗಿ ಪರಿತಪಿಸುತ್ತಿದ್ದ 563 ಜನ ಬಾಧಿತರಿಗೆ ಊಟೋಪಹಾರ ಒದಗಿಸಲಾಗುತ್ತಿತ್ತು. ಪ್ರಸ್ತುತ ಸ್ಥಳೀಯ ಬಸವಕೇಂದ್ರದ ಸಹಕಾರದೊಂದಿಗೆ ಮಲವಗೊಪ್ಪದ ಬೈಪಾಸ್‍ನಲ್ಲಿರುವ ಹಕ್ಕಿಪಿಕ್ಕಿ ಜನಾಂಗದ 57ಕುಟುಂಬಗಳ 180 ಜನರಿಗೆ ಅಗತ್ಯ ದಿನಸಿ ಆಹಾರಗಳ ಕಿಟನ್ನು ಪೂರೈಸಲಾಗಿದೆ.
ಇಂತಹ ಸಂದಿಗ್ಧ ಸಂದರ್ಭದಲ್ಲಿ ಪಾಲಿಕೆಯ ಈ ಮಹತ್ವದ ಕಾರ್ಯದಲ್ಲಿ ಸಾರ್ವಜನಿಕರು ಕೈಜೋಡಿಸುವಂತೆ ಕಮಿಷನರ್ ಚಿದಾನಂದ ವಟಾರೆ ಮನವಿ ಮಾಡಿದ್ದಾರೆ. ನಗರದ ದಾನಿಗಳು ಸಿದ್ಧಪಡಿಸಿದ ಆಹಾರದ ಬದಲಾಗಿ ಅಕ್ಕಿ, ಬೇಳೆ ಮತ್ತಿತರ ದಿನಸಿ ವಸ್ತುಗಳನ್ನು ಮಹಾನಗರಪಾಲಿಕೆಯಲ್ಲಿ ಆರಂಭಿಸಲಾಗಿರುವ ಕೌಂಟರಿನಲ್ಲಿ ನೀಡಿ ಸಹಕರಿಸುವಂತೆ ಅವರು ಮನವಿ ಮಾಡಿದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
LATEST NEWS
- ಆಲ್ಕೊಳ ಬಳಿ ಪೊಲೀಸರ ಕಾರ್ಯಾಚರಣೆ, ಬೈಕ್ ಸಹಿತ ಇಬ್ಬರು ಅರೆಸ್ಟ್, ಕಾರಣವೇನು?

- ಶರಾವತಿ ನಗರದಲ್ಲಿ ಕಾರು ಗಾಜು ಪೀಸ್ ಪೀಸ್ ಕೇಸ್, ಮೂವರು ಅರೆಸ್ಟ್, ಘಟನೆಗೆ ಕಾರಣ ಮನೆ

- ಶಿವಮೊಗ್ಗದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಉಪಕರಣ ಕಳವು, ಆಗಿದ್ದೇನು?

- ಶಿವಮೊಗ್ಗ ಕಾಂಗ್ರೆಸ್ ಕಾರ್ಯದರ್ಶಿ ಸೇರಿ ಇಬ್ಬರು 6 ವರ್ಷ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

- ಬೇಡರ ಹೊಸಹಳ್ಳಿ ಬಳಿ ಚಲಿಸುತ್ತಿದ್ದ ಬಸ್ಸಿನ ಸೀಟಿನಿಂದಲೇ ಹೊರಗೆ ಬಿದ್ದ ಪ್ರಯಾಣಿಕ

About The Editor
ನಿತಿನ್ ಆರ್.ಕೈದೊಟ್ಲು






