ಶಿವಮೊಗ್ಗ ಲೈವ್.ಕಾಂ | SHIMOGA | 10 ಡಿಸೆಂಬರ್ 2019
ಶಿವಮೊಗ್ಗ ನಗರದ ವಿವಿಧೆಡೆ ಡಿಸೆಂಬರ್ 11 ಮತ್ತು 12ರಂದು ಎರಡು ದಿನ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಯಾವ್ಯಾವ ಏರಿಯಾದಲ್ಲಿ ನೀರು ಬರಲ್ಲ?
ಪಂಪನಗರ, ಗುತ್ಯಪ್ಪ ಕಾಲೋನಿ, ವಿಜಯ ನಗರ, ಜೆ.ಪಿ. ನಗರ, ಅಶೋಕನಗರ, ಇಂಡಸ್ಟ್ರಿಯಲ್ ಎಸ್ಟೇಟ್, ಸಾಗರ ರಸ್ತೆ, ಶರಾವತಿನಗರ ಎ ಮತ್ತು ಬಿ ಬ್ಲಾಕ್, ವಿನೋಬನಗರ, ವೀರಣ್ಣ ಲೇಔಟ್, ಕೀರ್ತಿನಗರ, ನಾಗೇಂದ್ರ ಕಾಲೋನಿ, ಮೇದಾರಕೇರಿ, ಹೊಸಮನೆ, ಕಲ್ಲಹಳ್ಳಿ, ಕಾಶಿಪುರ, ಪ್ರಿಯದರ್ಶಿನಿ ಮತ್ತು ಜಯದೇವ ಬಡಾವಣೆ, ಆಲ್ಕೊಳ, ನರ್ಸ್ ಕ್ವಾರ್ಟರ್ಸ್, ಅಂಚೆ ಕಚೇರಿ ಬಿ.ಎಸ್.ಎನ್.ಎಲ್. ನೀರಾವರಿ ಇಲಾಖೆ ವಸತಿ ಗೃಹ, ಮೆಗ್ಗಾನ್ ಆಸ್ಪತ್ರೆ ಪ್ರದೇಶಗಳಲ್ಲಿ ನೀರು ಬರಲ್ಲ.
ನೀರು ಸ್ಥಗಿತಕ್ಕೆ ಕಾರಣವೇನು?
ನಗರದ ಪಂಪ್ ಹೌಸ್’ನಿಂದ ವಿನೋಬನಗರ 60 ಅಡಿ ರಸ್ತೆಯಲ್ಲಿರುವ ನೀರಿನ ಟ್ಯಾಂಕ್, ಶಿವಾಲಯ ಮತ್ತು ಹೊಸಮನೆ ಟ್ಯಾಂಕ್’ಗೆ ನೀರು ಪೂರೈಕೆ ಮಾಡಲು ಅಮೃತ್ ಯೋಜನೆಯಡಿ ಕೊಳವೆ ಮಾರ್ಗ ಲಿಂಕಿಂಗ್ ಮಾಡಿ, ಜಲಸಂಗ್ರಹಗಾರ ಸ್ವಚ್ಛಗೊಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಎರಡು ದಿನ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
Water Board Says that there will be inadequate water supply in various parts of Shimoga due to some maintenance works.