‘ಉಚಿತವಾಗಿ ಆಯುರ್ವೇದ ಕಿಟ್ ಕೊಡೋದು ಓಕೆ, ಆಧಾರ್ ಕಾರ್ಡ್ ಮಾಹಿತಿ ಏಕೆ?’

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 1 ಆಗಸ್ಟ್ 2020

ಸಚಿವ ಕೆ.ಎಸ್.ಈಶ್ವರಪ್ಪ ನಗರದ ಜನತೆಗೆ ಆಯುಷ್ ಶಕ್ತಿವರ್ಧಕ ಕಿಟ್‍ನ್ನು ವಿತರಿಸುತ್ತಿರುವುದು ಸ್ವಾಗತವೇ. ಇದಕ್ಕಾಗಿ ಆಧಾರ್ ಕಾರ್ಡ್ ಏಕೆ ಬೇಕು ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಪ್ರಶ್ನೆ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ  ಪ್ರಸನ್ನ ಕುಮಾರ್‍, ಆಧಾರ್ ಕಾರ್ಡ್ ಎಂಬುದು ಒಂದು ಗೌಪ್ಯತೆಯ ಸಂಕೇತ. ಇದನ್ನು ಬಳಸಿಕೊಂಡು ಬಿಜೆಪಿಯವರು ಏನು ಮಾಡುತ್ತಾರೆ. ಹಾಗಾಗಿ ಕೂಡಲೇ ಆಧಾರ್ ಕಾರ್ಡ್ ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು.  ಕಿಟ್ ವಿತರಣೆ ವಿಚಾರದಲ್ಲಿ ನಮ್ಮ ವಿರೋಧ ಇಲ್ಲ ಎಂದರು.

112754364 1179775075717244 3481518913399776072 o.jpg? nc cat=109& nc sid=8024bb& nc ohc=WLJvvs7CdzAAX9RdEf4& nc ht=scontent.fblr11 1

ಕೆಲವು ಕಡೆ ಕಿಟ್‍ಗಾಗಿ ಹಣ ಕೂಡ ಪಡೆಯುತ್ತಿದ್ದಾರೆ ಎಂದ ಆರೋಪವಿದೆ. ಇದು ಈಶ್ವರಪ್ಪನವರಿಗೆ ಗೊತ್ತಿರಲಿಕ್ಕಿಲ್ಲ. ಇಂತವಕ್ಕೆಲ್ಲ ಅವರು ಆಸ್ಪದ ನೀಡಬಾರದು ಎಂದರು.

ಮಾಸ್ಕ್ ದಂಡದ ಕುರಿತು ಗಮನ ಕೊಡಿ

ಮಾಸ್ಕ್ ಧರಿಸದವರಿಗೆ  ಇರುವವರಿಗೆ ದಂಡ ಹಾಕಲು ಪಾಲಿಕೆ ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಇವರು ಕೆಲವರನ್ನು ಸೇರಿಸಿಕೊಂಡು ಗಲಾಟೆ ಕೂಡ ಮಾಡಿ ಹಣ ವಸೂಲಿ ಮಾಡುತ್ತಾರೆ. ಇದರಿಂದ ರಸ್ತೆಯಲ್ಲಿ ಜನ ಗುಂಪುಗೂಡುವಂತಾಗುತ್ತಿದೆ. ಹಾಗಾಗಿ ಅವರಿಂದ ವಸೂಲಿ ಮಾಡಿದ ದಂಡದ ಹಣದಲ್ಲೇ ಮಾಸ್ಕ್ ನೀಡಲಿ ಎಂದು ಪ್ರಸನ್ನಕುಮಾರ್‍ ಆಗ್ರಹಿಸಿದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment