ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಅವೈಜ್ಞಾನಿಕ ಹಂಪ್‌ಗಳಿಂದಾಗಿ ಶಿವಮೊಗ್ಗ ನಗರದಲ್ಲಿ ಪ್ರತಿದಿನ ಅಪಘಾತಗಳು ಸಂಭವಿಸುತ್ತಿವೆ. ರೈಲ್ವೆ ನಿಲ್ದಾಣ ಸಮೀಪ ಅಳವಡಿಸಿರುವ ಹಂಪ್‌ನಿಂದಾಗಿ ಹತ್ತಾರು ಅಪಘಾತಗಳಾಗಿವೆ. ಇದನ್ನು ತಪ್ಪಿಸಲು ಸ್ಥಳೀಯ ವ್ಯಕ್ತಿಯೊಬ್ಬರು ರೇಡಿಯಂ ಸ್ಟಿಕರ್ (radium) ಅಂಟಿಸಿ ವಾಹನ ಸವಾರರನ್ನು ಎಚ್ಚರಿಸುವ ಪ್ರಯತ್ನ ಮಾಡಿದ್ದಾರೆ.
ರೈಲ್ವೆ ನಿಲ್ದಾಣ ಪಕ್ಕದ ಅಮೀರ್ ಅಹಮದ್ ಕಾಲೋನಿಯ ಮಸೀದಿ ಮುಂಭಾಗ ಎರಡು ರಬ್ಬರ್ ಹಂಪ್‌ಗಳಿದ್ದವು. ಅದರ ಮುಂಭಾಗ ಮತ್ತೊಂದು ಬೃಹತ್ ಡಾಂಬರ್ ಹಂಪ್ ನಿರ್ಮಿಸಲಾಗಿದೆ. ಈ ಹಂಪ್‌ನ ಮುಂದೆ ರಿಫ್ಲೆಕ್ಟರ್ ಇಲ್ಲ, ಹಂಪ್‌ನ ಮೇಲ್ಭಾಗ ಬಿಳಿ ಬಣ್ಣ ಬಳಿದಿಲ್ಲ. ಇನ್ನು, ಹಂಪ್ ಪಕ್ಕದಲ್ಲೇ ಇರುವ ಬೀದಿ ದೀಪವು ಉರಿಯುತ್ತಿಲ್ಲ. ಇದರಿಂದಾಗಿ ವಾಹನ ಸವಾರರಿಗೆ ಹೊಸ ಹಂಪ್ ಇರುವುದೇ ಗೊತ್ತಾಗುತ್ತಿಲ್ಲ.

ರೇಡಿಯಂ ಸ್ಟಿಕ್ಕರ್ ಅಂಟಿಸಿದ ವ್ಯಕ್ತಿ
ರಾತ್ರಿ ವೇಳೆ ಹಂಪ್ ಇರುವುದೇ ಗೊತ್ತಾಗದೆ ಹಲವರು ಬಿದ್ದು ಗಾಯಗೊಂಡಿದ್ದಾರೆ. ಇದರಿಂದ ಬೇಸರಗೊಂಡ ಸ್ಥಳೀಯರಾದ ಜಮೀಲ್, ಸ್ವಂತ ಖರ್ಚಿನಲ್ಲಿ ರೇಡಿಯಂ ಸ್ಟಿಕರ್‌ಗಳನ್ನು ತಂದು ಹಂಪ್‌ಗಳ ಮೇಲೆ ಅಂಟಿಸಿದ್ದಾರೆ. ವಾಹನಗಳ ಲೈಟ್‌ಗೆ ರೇಡಿಯಂ ಸ್ಟಿಕ್ಕರ್‌ಗಳು ಗೋಚರಿಸುತ್ತವೆ. ಇದರಿಂದ ವಾಹನಗಳು ವೇಗ ತಗ್ಗಿಸಬಹುದು ಎಂಬುದು ಜಮೀಲ್ ಅವರ ಅಭಿಪ್ರಾಯ.
ಇದನ್ನೂ ಓದಿ – ಶಿವಮೊಗ್ಗದ ಅವೈಜ್ಞಾನಿಕ ಹಂಪ್‌ಗೆ ಮೊದಲ ಬಲಿ, ಸಿಸಿಟಿವಿಯಲ್ಲಿ ಭೀಕರತೆ ಸೆರೆ, ಇಲ್ಲಿದೆ ವಿಡಿಯೋ
‘ಮಹೇಂದ್ರ ಶೋ ರೂಂ ಉದ್ಯೋಗಿಯೊಬ್ಬರು ಹಂಪ್ ಹಾರಿ ಬಿದ್ದು ಗಾಯಗೊಂಡಿದ್ದಾರೆ. ನಾವೇ ಅವರನ್ನು ಆಸ್ಪತ್ರೆಯಲ್ಲಿ ಕರೆದೊಯ್ದಿದ್ದೆವು. ಮತ್ಯಾರಿಗು ಇಲ್ಲಿ ಸಮಸ್ಯೆ ಆಗಬಾರದು ಎಂದು ರೇಡಿಯಂ ತಂದು ಅಂಟಿಸುತ್ತಿದ್ದೇನೆʼ ಎಂದು ಜಮೀಲ್ ತಿಳಿಸಿದರು. ಇಲ್ಲಿದೆ ವಿಡಿಯೋ
ಅರ್ಧಕ್ಕೆ ಹಂಪ್ ಕಟ್
ಇದೇ 100 ಅಡಿ ರಸ್ತೆಯಲ್ಲಿ ಬಸವನಗುಡಿಯ ತಿರುವಿನಲ್ಲಿ ಬೃಹತ್ ಹಂಪ್ ನಿರ್ಮಿಸಲಾಗಿತ್ತು. ಎರಡೇ ದಿನಕ್ಕೆ ಸಾಲು ಸಾಲು ಅಪಘಾತಗಳು ಸಂಭವಿಸಿದವು. ಆಟೋ ಪಲ್ಟಿಯಾಗಿ ಚಾಲಕನಿಗೆ ಗಾಯವಾಗಿತ್ತು. ರೊಚ್ಚಿಗೆದ್ದ ಸ್ಥಳೀಯರು ಮತ್ತು ರೈಲ್ವೆ ನಿಲ್ದಾಣದ ಆಟೋ ಚಾಲಕರು ಮಹಾನಗರ ಪಾಲಿಕೆ, ಸಂಚಾರ ಪೊಲೀಸರಿಗೆ ಹಂಪ್ ತೆರವು ಮಾಡುವಂತೆ ಆಗ್ರಹಿಸಿದರು. ನಿರ್ಮಾಣವಾದ ನಾಲ್ಕೈದು ದಿನಕ್ಕೆ ಹಂಪ್‌ನ ಅರ್ಧ ಭಾಗ ಕಟ್ ಮಾಡಲಾಗಿದೆ.
LATEST NEWS
- ಶಿವಮೊಗ್ಗದ ಡೇಂಜರ್ ಹಂಪ್ಗಳಿಗೆ 24 ಗಂಟೆಯ ಗಡುವು, ಬೈಕ್ನಲ್ಲಿ ಕಮಿಷನರ್ ಸಿಟಿ ರೌಂಡ್ಸ್

- ಶಿವಮೊಗ್ಗ, ಸಾಗರದಲ್ಲಿ ಕೆಲಸ ಹುಡುಕ್ತಿದ್ದೀರಾ? ಫೆಬ್ರವರಿ 18ರಂದು ನಡೆಯಲಿದೆ ಸಂದರ್ಶನ

- ಶಿವಮೊಗ್ಗ ಲೈವ್ BIG IMPACT, ಡೇಂಜರಸ್ ಹಂಪ್ಗಳಿಂದ ಶೀಘ್ರ ಮುಕ್ತಿ, ಮಹತ್ವದ ಮೀಟಿಂಗ್

- ಕೋಟೆ ಮಾರಿಕಾಂಬೆಗೆ 1 ಕೆಜಿ 600 ಗ್ರಾಂ ತೂಕದ ಚಿನ್ನದ ಮುಖವಾಡ

- ಫುಡ್ ಕೋರ್ಟ್ನಿಂದ ಹೊರ ಬಂದ ವ್ಯಕ್ತಿಯ ಕಾಲಿನ ಮೇಲೆ ಬೈಕ್ ಹತ್ತಿಸಿ, ಕಲ್ಲಿನಿಂದ ಹೊಡೆದು ಹಲ್ಲೆ

About The Editor
ನಿತಿನ್ ಆರ್.ಕೈದೊಟ್ಲು





