ಶಿವಮೊಗ್ಗ ಲೈವ್.ಕಾಂ | SHIMOGA NEWS | 12 ಆಗಸ್ಟ್ 2020
ಸಕ್ರೆಬೈಲು ವೈಲ್ಡ್ ಟಸ್ಕರ್ ಟ್ರಸ್ಟ್ನ ವೆಬ್ಸೈಟ್ ಮತ್ತು ಯು ಟ್ಯೂಬ್ ಚಾನಲ್ಗೆ ಇವತ್ತು ಚಾಲನೆ ನೀಡಲಾಯಿತು. ಆನೆಗಳ ಕುರಿತ ಸಮಗ್ರ ಮಾಹಿತಿಯನ್ನು ಈ ವೆಬ್ಸೈಟ್ ಮತ್ತು ಯು ಟ್ಯೂಬ್ ಚಾನಲ್ನಲ್ಲಿ ಸಿಗಲಿದೆ ಎಂದು ಟ್ರಸ್ಟ್ನ ಕೋ ಆರ್ಡಿನೇಟರ್ ಜೇಸುದಾಸ್ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆನೆಗಳ ಬದುಕು, ಜೀವನ, ಮಾವುತ, ಕಾವಾಡಿಗಳು ಅವುಗಳನ್ನು ನೋಡಿಕೊಳ್ಳುವ ರೀತಿ ಸೇರಿದಂತ ಎಲ್ಲಾ ಬಗೆಯ ವಿವರವು ವೆಬ್ಸೈಟ್ನಲ್ಲಿ ಅಪ್ಲೋಡ್ ಆಗುತ್ತಿರುತ್ತದೆ ಎಂದರು.
ಇವತ್ತು ಸಕ್ರೆಬೈಲು ಆನೆ ಬಿಡಾರದಲ್ಲಿ ಸಿಎಫ್ಒ ರವಶಂಕರ್ ಅವರು ವೈಲ್ಡ್ ಟಸ್ಕ್ ಸಕ್ರೆಬೈಲು ಯು ಟ್ಯೂಬ್ ಚಾನಲ್ ಸಬ್ಸ್ಕ್ರೈಬ್ ಮಾಡಿ ಉದ್ಘಾಟನೆ ಮಾಡಿದರು. ಶಿವಮೊಗ್ಗ ಪ್ರೆಸ್ಟ್ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ಅವರು ವೆಬ್ಸೈಟ್ಗೆ ಚಾಲನೆ ನೀಡಿದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]