ವಿದ್ಯಾನಗರದಲ್ಲಿ ಬೈಕುಗಳು ಡಿಕ್ಕಿ, ಸವಳಂಗ ರಸ್ತೆ ಅಪಘಾತದಲ್ಲಿ ಮಹಿಳೆ ಸಾವು – 3 CRIME NEWS UPDATE

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 25 NOVEMBER 2022

ಸವಳಂಗ ರಸ್ತೆಯಲ್ಲಿ ಕೂಲಿ ಮುಗಿಸಿ ಮನಗೆ ಬರುತ್ತಿದ್ದ ಮಹಿಳೆಗೆ ವಾಹನ ಡಕ್ಕಿ, ಸ್ಥಳದಲ್ಲೇ ಸಾವು

ಶಿವಮೊಗ್ಗ : ಅಪರಿಚಿತ ವಾಹನ ಡಿಕ್ಕಿಯಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಶಿವಮೊಗ್ಗದ ಸವಳಂಗ ರಸ್ತೆಯ (savalanga road accident) ಕಲ್ಲಾಪುರ ಸುತ್ತುಕೋಟೆ ನಡುವೆ ಕೆಮ್ಮಣ್ಣುಗುಂಡಿ ಬಳಿ ಘಟನೆ ಸಂಭವಿಸಿದೆ. ಕೆಳಗಿನ ಕುಂಚೇನಹಳ್ಳಿಯ ಮಂಜಮ್ಮ (50) ಮೃತ ಮಹಿಳೆ.

Shimoga nanjappa Hospital

ಕೂಲಿ ಕೆಲಸಕ್ಕೆ ಹೋಗಿದ್ದ ಮಂಜಮ್ಮ, ಸಂಜೆ ಕೆಮ್ಮಣ್ಣುಗುಂಡಿ ಬಳಿ ನಡೆದುಕೊಂಡು ಮನೆಗೆ ಮರಳುತ್ತಿದ್ದರು. ಈ ಸಂದರ್ಭ ವಾಹನ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಅಪಘಾತಪಡಿಸಿದ ಚಾಲಕ ವಾಹನವನ್ನು ನಿಲ್ಲಿಸದೆ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(savalanga road accident)

ವಿದ್ಯಾನಗರದಲ್ಲಿ ಬೈಕುಗಳು ಡಿಕ್ಕಿ, ಒಬ್ಬ ಸವಾರನ ಕಾಲಿಗೆ ಗಾಯ

ಶಿವಮೊಗ್ಗ : ಡಿವೈಡರ್ ಪಕ್ಕದಲ್ಲಿ ಬೈಕ್ ನಿಲ್ಲಿಸಿಕೊಂಡು ರಸ್ತೆ ದಾಟಲು ಕಾಯುತ್ತಿದ್ದಾಗ ಮತ್ತೊಂದು ಬೈಕ್ ಡಿಕ್ಕಿ ಹೊಡೆದು ವ್ಯಕ್ತಿ ಗಾಯಗೊಂಡಿದ್ದಾರೆ. ವಿದ್ಯಾನಗರದ ಗುರುರಾಜ ದರ್ಶಿನಿ ಹೊಟೇಲ್ ಬಳಿ ಘಟನೆ ಸಂಭವಿಸಿದೆ. ವಿದ್ಯಾನಗರ ಉಚ್ಚಂಗಮ್ಮ ಬೀದಿಯ ಮಂಜುನಾಥ ಗಾಯಗೊಂಡಿದ್ದಾರೆ. ವಿದ್ಯಾನಗರದಲ್ಲಿ ತರಕಾರಿ ಖರೀದಿಸಿ ಮಂಜುನಾಥ್ ಅವರು ಬೈಕಿನಲ್ಲಿ ಮನೆಗೆ ಮರಳುತ್ತಿದ್ದರು. ಗುರುರಾಜ ದರ್ಶಿನಿ ಹೊಟೇಲ್ ಮುಂಭಾಗ ಡಿವೈಡರ್ ದಾಟಲು ಬೈಕಿನ ಇಂಡಿಕೇಟರ್ ಹಾಕಿಕೊಂಡು ವಾಹನಗಳನ್ನು ಗಮನಿಸುತ್ತ ನಿಂತಿದ್ದರು.

ಕ್ಲಿಕ್ ಮಾಡಿ ಇದನ್ನೂ ಓದಿ ಬೆಳಗಿನ ಜಾವ 4 ಗಂಟೆಗೆ ಗಾಂಧಿ ಬಜಾರಲ್ಲಿ ಅನುಮಾನಾಸ್ಪದ ವರ್ತನೆ | 3 CRIME NEWS

ಈ ಸಂದರ್ಭ, ಹೊಳೆ ಬಸ್ ನಿಲ್ದಾಣ ಕಡೆಯಿಂದ ಎಂ.ಆರ್.ಎಸ್ ಕಡೆಗೆ ವೇಗವಾಗಿ ಸಾಗುತ್ತಿದ್ದ ಬೈಕ್, ಮಂಜುನಾಥ್ ಅವರ ಬೈಕಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮಂಜುನಾಥ್ ಅವರ ಕಾಲಿಗೆ ಗಾಯವಾಗಿದೆ. ಆಸಿಫ್ ಅಲಿ ಖಾನ್ ಎಂಬಾತನ ವಿರುದ್ಧ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(savalanga road accident)

ಶರಾವತಿ ನಗರದಲ್ಲಿ ಬೈಕಿಗೆ ಕಾರು ಡಿಕ್ಕಿ, ಸವಾರನ ಕಾಲಿಗೆ ಸರ್ಜರಿ

ಶಿವಮೊಗ್ಗ : ಕಾರು, ಬೈಕ್ ನಡುವೆ ಅಪಘಾತವಾಗಿದ್ದು ಬೈಕ್ ಸವಾರನ ಕಾಲಿನ ಮೂಳೆಗೆ ಪೆಟ್ಟು ಬಿದ್ದಿದೆ. ಶರಾವತಿ ನಗರದ ಆಂತೋಣಿ ರಾಜ್ ಗಾಯಗೊಂಡಿದ್ದಾರೆ. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸರ್ಜರಿ ಮಾಡಲಾಗಿದೆ. ಶರಾವತಿ ನಗರದ 4ನೇ ಮೇನ್ ರಸ್ತೆಯ ಬಿ ಬ್ಲಾಕ್ ನಲ್ಲಿ ಘಟನೆ ಸಂಭವಿಸಿದೆ. ನಾಗರಾಜ್ ಎಂಬುವವರು ಕಾರು ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shimoga nanjappa HOspital

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment