ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ
SHIVAMOGGA LIVE NEWS | 1 MARCH 2023
SHIMOGA : ಯುವಕರ ಗುಂಪೊಂದು ಅಂಗಡಿಯೊಂದಕ್ಕೆ (Shop) ನುಗ್ಗಿ ಮುಚ್ಚಿನಿಂದ ಹೊಡೆದು ವಸ್ತುಗಳನ್ನು ಹಾನಿ ಮಾಡಿದೆ. ಸಮೀಪದಲ್ಲೆ ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಹಾಕಿದೆ. ಅಲ್ಲದೆ ದಾರಿಯಲ್ಲಿ ಬರುತ್ತಿದ್ದ ಯುವಕನೊಬ್ಬನ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ.

ಶಿವಮೊಗ್ಗದ ಬುದ್ಧಾನಗರದ 3ನೇ ಅಡ್ಡರಸ್ತೆಯಲ್ಲಿ ಘಟನೆ ಸಂಭವಿಸಿದೆ. ಈ ರಸ್ತೆಯಲ್ಲಿರುವ ಗಂಗಾಧರ್ ಎಂಬುವವರ ಅಂಗಡಿಗೆ (Shop) ನುಗ್ಗಿದ ಮೂವರು ಯುಕವರು ದಾಂಧಲೆ ನಡೆಸಿದ್ದಾರೆ. ಕೈಯಲ್ಲಿ ಮಚ್ಚು ಹಿಡಿದು ಬಂದಿದ್ದ ಯುವಕರು ಅಂಗಡಿಯಲ್ಲಿದ್ದ ವಸ್ತುಗಳ ಮೇಲೆ ದಾಳಿ ನಡೆಸಿ, ಚಲ್ಲಾಪಿಲ್ಲಿಗೊಳಿಸಿದ್ದಾರೆ. ಗಂಗಾಧರ್ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಅಂಗಡಿ ಪಕ್ಕದಲ್ಲಿಯೇ ನಿಲ್ಲಿಸಿದ್ದ ಕಿಯಾ ಕಾರಿನ ಹಿಂಬದಿ ಗಾಜನ್ನು ಒಡೆದು ಹಾಕಿದ್ದಾರೆ. ಬಳಿಕ ರಸ್ತೆಯಲ್ಲಿ ಜೋರಾಗಿ ಕೂಗಿಕೊಂಡು ಹೋಗುತ್ತಿದ್ದು, ಎದುರಿನಿಂದ ಬರುತ್ತಿದ್ದ ಸೈಯದ್ ಮೊಹಿದ್ದೀನ್ ಎಂಬ ಯುವಕನ ಮೇಲೆ ದಾಳಿ ನಡೆಸಿದ್ದಾರೆ. ಆತ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಇದನ್ನೂ ಓದಿ – ಕಾಲೇಜು ಲೆಕ್ಚರರ್‌ಗೆ ರಸ್ತೆಯಲ್ಲಿ ಚಾಕು ತೋರಿಸಿ ಬೆದರಿಕೆ, ದರೋಡೆ
ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


CLICK HERE TO JOIN SHIVAMOGGA LIVE WHATSAPP GROUP