ಶಿವಮೊಗ್ಗ ಲೈವ್.ಕಾಂ | SHIMOGA NEWS | 7 ನವೆಂಬರ್ 2021
ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಹುಟ್ಟಹಬ್ಬದ ಅಂಗವಾಗಿ ಗೋ ಶಾಲೆಯಲ್ಲಿ ಗೋವುಗಳಿಗೆ ಮೇವು ವಿತರಿಸಲಾಯಿತು. ಶಿವಮೊಗ್ಗದ ಅಬ್ಬಲಗೆರೆಯಲ್ಲಿರುವ ಶ್ರೀ ಜ್ಞಾನೇಶ್ವರಿ ಗೋಶಾಲೆಯಲ್ಲಿ ಮೇವು ನೀಡಲಾಯಿತು. ಯುವ ಕಾಂಗ್ರೆಸ್, ಸ್ನೇಹ ಕೂಟದ ಸಹಯೋಗದಲ್ಲಿ ಮೇವು ವಿತರಣೆ ಮಾಡಲಾಯಿತು.
ಇದೆ ವೇಳೆ ಮಾತನಾಡಿದ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್, ಸೇವಾ ಮನೋಭಾವನೆಯಿಂದ ನಿಸ್ವಾರ್ಥ ಸೇವೆ ಮಾಡಿದರೆ ಮನುಷ್ಯ ಎಂತಹ ಎತ್ತರಕ್ಕೂ ಏರಬಹುದು ಎನ್ನುವುದನ್ನು ಬಿ.ವಿ. ಶ್ರೀನಿವಾಸ್ ತೋರಿಸಿಕೊಟ್ಟಿದ್ದಾರೆ ಎಂದರು.
ಇನ್ನು, ಭದ್ರಾವತಿ ಕಾಂಗ್ರೆಸ್ ಯುವ ಮುಖಂಡ ಗಣೇಶ್ ಮಾತನಾಡಿ, ಬಿ.ವಿ. ಶ್ರೀನಿವಾಸ್ ಅವರು ರಾಜಕೀಯವಾಗಿ ಹೆಸರಾಗುವುದಕ್ಕಿಂತ ತಮ್ಮ ಸೇವೆಯ ಮೂಲಕವೇ ದೇಶಾದ್ಯಂತ ಖ್ಯಾತಿ ಪಡೆದಿದ್ದಾರೆ. ದೇಶಾದ್ಯಂತ ಸಂಚರಿಸಿ ಜನರ ಸಂಕಷ್ಟ ಆಲಿಸುತ್ತಿದ್ದಾರೆ. ಇಂತಹವರು ನಮ್ಮ ಊರಿನವರು ಎನ್ನುವುದೇ ನಮ್ಮ ಹೆಮ್ಮೆ ಎಂದರು.
ಪ್ರಮುಖರಾದ ವಿಜಯಕುಮಾರ್, ಎನ್.ರಮೇಶ್, ಪಾಲಿಕೆ ಸದಸ್ಯ ರಮೇಶ್ ಹೆಗ್ಡೆ, ದರ್ಶನ್ ಬಳ್ಳೇಶ್ವರ, ಚೇತನ್, ಮಧುಸೂದನ್, ಚಿರಂಜೀವಿ ಬಾಬು, ಬಿ.ವಿ.ಶ್ರೀನಿವಾಸ್ ಅವರ ಕುಟುಂಬದವರು ಈ ವೇಳೆ ಉಪಸ್ಥಿತರಿದ್ದರು.
(ಆಗಿಂದಾಗ್ಗೆ ಆರೋಗ್ಯ ತಪಾಸಣೆಯಿಂದ ಸಂಭವಿಸಬಹುದಾದ ಅಪಾಯ ತಪ್ಪಲಿದೆ. ಇಲ್ಲಿದೆ ತಜ್ಞ ವೈದ್ಯರಿಂದ ಸೂಕ್ತ ತಪಾಸಣೆ, ಸೂಕ್ತ ಸಲಹೆ)