ಶಿವಮೊಗ್ಗ ಲೈವ್.ಕಾಂ | SHIMOGA NEWS | 09 JUNE 2021
ಶಿವಮೊಗ್ಗದಲ್ಲಿ ಪೆಟ್ರೋಲ್ ದರ ಶತಕ ಬಾರಿಸಿದ್ದು, ಜನಾಕ್ರೋಶ ವ್ಯಕ್ತವಾಗಿದೆ. ಪೆಟ್ರೋಲ್ ಬಂಕ್ ಒಂದರ ಮುಂದೆ ವಿಭಿನ್ನವಾಗಿ ಪ್ರತಿಭಟನೆ ನಡೆಸಲಾಯಿತು.
ನಗರದ ಕುವೆಂಪು ರಸ್ತೆಯಲ್ಲಿ ಇರುವ ನಂದಿ ಪೆಟ್ರೋಲ್ ಬಂಕ್ ಮುಂದೆ ತಟ್ಟೆ ಬಡಿದು, ಪೆಟ್ರೋಲ್ ಹಾಕಿಸಲು ಬಂದವರಿಗೆ ಸಿಹಿ ಹಂಚಲಾಯಿತು.
ಬಂದೇ ಬಿಡ್ತು ಅಚ್ಛೇ ದಿನ
ಪೆಟ್ರೋಲ್ ಬಂಕ್ ಎದುರು ತಟ್ಟೆ ಬಡಿದ ಯುವ ಕಾಂಗ್ರೆಸ್ ಕಾರ್ಯಕರ್ತರು, ಅಚ್ಛೇ ದಿನ ಬಂದೇಬಿಡ್ತು ಅಂತಾ ಘೋಷಣೆ ಕೂಗಿದರು. ಶಿವಮೊಗ್ಗದಲ್ಲಿ ಪೆಟ್ರೋಲ್ ದರ ದಾಖಲೆ ಬರೆದಿದೆ ಎಂದು ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ಅಣಕು ಮಾಡುವಂತೆ ಸಂಭ್ರಮಾಚರಣೆ’
ಪೆಟ್ರೋಲ್ ಬೆಲೆ ನೂರು ರೂ. ತಲುಪಿದ್ದರಿಂದ ಶಿವಮೊಗ್ಗಕ್ಕೆ ಅಚ್ಛೇ ದಿನ ಬಂದಂತಾಗಿದೆ ಅಂತಾ ಕಾಂಗ್ರೆಸ್ ಕಾರ್ಪೊರೇಟರ್ ಹೆಚ್.ಸಿ.ಯೋಗೇಶ್ ವ್ಯಂಗ್ಯ ಮಾಡಿದರು. ಅಚ್ಛೇ ದಿನ ಬಂದ ಕಾರಣಕ್ಕೆ ಪೆಟ್ರೋಲ್ ಹಾಕಿಸಿಕೊಳ್ಳಲು ಬಂದ ಗ್ರಾಹಕರಿಗೆ ಸಿಹಿ ಹಂಚಿದರು.
ಬಹುಬೇಗ ಪದಕ ಕೊಡಿ
ಪೆಟ್ರೋಲ್ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆ ಆಗಿದೆ. ಆದ್ದರಿಂದ ಕೇಂದ್ರ ಸರ್ಕಾರಕ್ಕೆ ರಾಷ್ಟ್ರಪತಿ ಪದಕ ನೀಡಬೇಕು ಅಂತಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಿರೀಶ್ ಆಕ್ರೋಶ ವ್ಯಕ್ತಪಡಿಸಿದರು.
ಸಿಹಿ ಹಂಚಿದ ವಿಡಿಯೋ ರಿಪೋರ್ಟ್
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ.ಗಿರೀಶ್, ಮುಖಂಡರಾದ ಕೆ.ರಂಗನಾಥ್, ಹೆಚ್.ಸಿ.ಯೋಗೇಶ್, ಯುವ ಕಾಂಗ್ರೆಸ್ ಮುಖಂಡರಾದ ಲೋಕೇಶ್, ನಿತಿನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]