SHIVAMOGGA LIVE NEWS | 4 ಏಪ್ರಿಲ್ 2022
ಈಜುಕೊಳದಲ್ಲಿ ಮುಳುಗಿ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ಯುವಕನ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಹೊಸನಗರದ ಅರುಣ್ ಕುಮಾರ್ ಮೃತ ದುರ್ದೈವಿ. ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮ ಸಮೀಪ ಇರುವ ಈಜುಕೊಳದಲ್ಲಿ ಅರುಣ್ ಕುಮಾರ್ ತನ್ನ ಸ್ನೇಹಿತನೊಂದಿಗೆ ಈಜಲು ತೆರಳಿದ್ದ. ಆ ಆತ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಹೇಗಾಯ್ತು ಘಟನೆ?
ಅರುಣ್ ಕುಮಾರ್ ತನ್ನ ಸ್ನೇಹಿತರಾದ ಶರತ್, ಪ್ರಜ್ವಲ್, ಸನೀತ್ ಎಂಬುವವರ ಜೊತೆಗೆ ಈಜುಕೊಳಕ್ಕೆ ತೆರಳಿದ್ದರು. ಸಂಜೆ ಈಜುಕೊಳದಲ್ಲಿ ಈಜುತ್ತಿದ್ದಾಗ ಅರುಣ್ ಕುಮಾರ್ ಪ್ರಜ್ಞೆ ತಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಕೂಡಲೆ ಆತನನ್ನು ಗಾಡಿಕೊಪ್ಪದ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಗೆ ಕರೆತರಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸಿದೆ ಅರುಣ್ ಕುಮಾರ್ ಮೃತಪಟ್ಟಿದ್ದಾನೆ ಎಂದು ಆರೋಪಿಸಲಾಗಿದೆ.
ಸಾವಿನ ಕುರಿತು ಅನುಮಾನ
ಅರುಣ್ ಕುಮಾರ್ ಸಾವಿನ ಕುರಿತು ಆತನ ಪೋಷಕರು ಶಂಕೆ ವ್ಯಕ್ತಪಡಿಸಿದ್ದಾರೆ. ಹೊಸನಗರ ತಾಲೂಕು ನಗರ ಹೋಬಳಿಯ ಅಂಡಗದೋದುರು ಗ್ರಾಮದ ಅರುಣ್ ಕುಮಾರ್ ಆರು ತಿಂಗಳಿಂದ ಸ್ನೇಹಿತರ ಜೊತೆ ಶಿವಮೊಗ್ಗದಲ್ಲಿ ವಾಸವಾಗಿದ್ದ. ಏಪ್ರಿಲ್ 2ರಂದು ಸ್ನೇಹಿತರೊಂದಿಗೆ ಈಜುಕೊಳಕ್ಕೆ ಬಂದಾಗ ಘಟನೆ ಸಂಭವಿಸಿದೆ. ತಮ್ಮ ಮಗನ ಸಾವಿನ ಕುರಿತು ಸಂಶಯವಿದ್ದು, ಸೂಕ್ತ ತನಿಖೆ ನಡೆಸುವಂತೆ ಪೋಷಕರು ದೂರಿನಲ್ಲಿ ಮನವಿ ಮಾಡಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200