SHIVAMOGGA LIVE NEWS | 4 ಏಪ್ರಿಲ್ 2022
ಶಿವಮೊಗ್ಗ ನಗರ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಇವತ್ತು ಚಂದ್ರ ದರ್ಶನವಾಗಿದೆ. ಜನರು ಚಂದ್ರನ ದರ್ಶನ ಪಡೆಯುತ್ತಿದ್ದ ಹಾಗೆ ಕೈ ಮುಗಿದು ಭಕ್ತಯಿಂದ ಪ್ರಾರ್ಥನೆ ಸಲ್ಲಿಸಿದರು.
ಯುಗಾದಿ ಬಳಿಕ ಮೋಡ ಕವಿದ ವಾತಾವರಣವಿತ್ತು. ಹಾಗಾಗಿ ಶಿವಮೊಗ್ಗ ನಗರ ಮತ್ತು ಸುತ್ತಮುತ್ತಲ ಹಳ್ಳಿಗಳಲ್ಲಿ ಚಂದ್ರ ದರ್ಶನ ಆಗಿರಲಿಲ್ಲ. ಇವತ್ತು ಆಗಸ ತಿಳಿಯಾಗಿದ್ದು ಚಂದ್ರ ದರ್ಶನವಾಗಿದೆ.
ನಗರದ ರಸ್ತೆಗಳು, ಖಾಲಿ ಬಡಾವಣೆಗಳು, ಮನೆಯ ಟೆರೇಸ್ ಮೇಲೆ ನಿಂತು ಜನರು ಚಂದ್ರನ ದರ್ಶನ ಪಡೆದರು. ಬೇವು, ಬೆಲ್ಲ ಹಂಚಿ ಹಿರಿಯರ ಆಶೀರ್ವಾದ ಪಡೆದರು.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200