ಶಿವಮೊಗ್ಗ ಲೈವ್.ಕಾಂ | SHIMOGA | 26 ಮಾರ್ಚ್ 2020
ಯುಗಾದಿ ಬಳಿಕ ಚಂದ್ರ ದರ್ಶನ ಮಾಡಬೇಕು ಎಂಬ ಸಂಪ್ರದಾಯವಿದೆ. ಶಿವಮೊಗ್ಗ ನಗರದ ವಿವಿಧೆಡೆ ಇವತ್ತು ಜನರು ಚಂದ್ರ ದರ್ಶನ ಮಾಡಿ, ಪ್ರಾರ್ಥನೆ ಸಲ್ಲಿಸಿದರು.
ಶಿವಮೊಗ್ಗ ನಗರದಾದ್ಯಂತ ಕಟ್ಟಡಗಳ ಮೇಲೆ, ಖಾಲಿ ಜಾಗಗಳಲ್ಲಿ ನಿಂತು ಜನರು ಚಂದ್ರನ ದರ್ಶನ ಪಡೆದರು. ಬಳಿಕ ಹಿರಿಯರಿಗೆ ನಮಸ್ಕಾರ ಮಾಡಿ, ಆಶೀರ್ವಾದ ಪಡೆದರು.
ಕರೋನ ಭೀತಿಯ ನಡುವೆಯು ಜನರು ಮನೆಯಿಂದ ಹೊರಬಂದು ಚಂದ್ರನನ್ನು ಕಣ್ತುಂಬಿಕೊಂಡರು. ಯುಗದಿ ಮರುದಿನ ಚಂದ್ರ ದರ್ಶನ ಮಾಡಬೇಕು ಎಂಬ ಸಂಪ್ರದಾಯವಿದೆ. ಆದರೆ ಬುಧವಾರ ಮೋಡವಿದ್ದ ಕಾರಣ ಚಂದ್ರ ದರ್ಶನ ಸಾದ್ಯವಾಗಿರಲಿಲ್ಲ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]