
ಶಿವಮೊಗ್ಗ ಲೈವ್.ಕಾಂ | SHIMOGA | 20 ಫೆಬ್ರವರಿ 2020
ಶಿವರಾತ್ರಿ ಹಿನ್ನೆಲೆ ಜಿಲ್ಲೆಯ ವಿವಿಧೆಡೆಯ ಶಿವ ದೇಗುಲಗಳಲ್ಲಿ ನಾಳೆ ವಿಶೇಷ ಪೂಜೆ ಆಯೋಜಿಸಲಾಗಿದೆ. ನಗರದ ವೀರಶೈವ ಕಲ್ಯಾಣ ಮಂದಿರ ಬಳಿಯ ಶಿವನ ದೇಗುಲ, ವಿನೋಬನಗರದ ಶಿವಾಲಯ ಅರೆಕೆರೆ ದೇಗುಲಗಳಲ್ಲಿ ವಿಶೇಷ ಪೂಜೆಗೆ ವ್ಯವಸ್ಥೆ ಮಾಡಲಾಗಿದೆ.
ಉದ್ಭವ ಬಸವೇಶ್ವರ ರಥೋತ್ಸವ
ಪುರದಾಳು ಗ್ರಾಮದಲ್ಲಿ ಉದ್ಭವ ಬಸವೇಶ್ವರ ದೇವಸ್ಥಾನದಲ್ಲಿ ರಥೋತ್ಸವ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜೆ ಏರ್ಪಡಿಸಲಾಗಿದೆ. ವಿಶೇಷ ಪೂಜೆ ಹಿನ್ನೆಲೆ ದೇವಸ್ಥಾನದಕ್ಕೆ ವಿಶೇಷ ಅಲಂಕಾರ ಮಾಡಲಾಗಿದೆ.
ಆಯನೂರು ಸಿದ್ಧೇಶ್ವರ ದೇಗುಲ
ಶಿವಮೊಗ್ಗ ತಾಲೂಕು ಆಯನೂರು ಸಿದ್ಧೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಹಿನ್ನೆಲೆ ಮಹಾಮೃಂತ್ಯುಂಜಯ ಹೋಮ, ಶತರುದ್ರಾಭಿಷೇಕ ಆಯೋಜಿಸಲಾಗಿದೆ. ಅಲ್ಲದೆ ಭಕ್ತರಿಗೆ ದೇವರ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ಭದ್ರಾವತಿ ಉದ್ಧಾಮ ಕ್ಷೇತ್ರ
ಉದ್ಧಾಮ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಶಿವರಾತ್ರಿ ಜಾಗರಣೆ ಹಿನ್ನೆಲೆ ನಾಲ್ಕು ಯಾಮಗಲ ಪಂಚಾಮೃತ ಅಭಿಷೇಕ ಆಯೋಜಿಸಲಾಗಿದೆ. ಬೆಳಗ್ಗೆ 8.30 ರಿಂದ ಮೊದಲನೆ ಯಾಮದ ಪೂಜೆ, 11 ಗಂಟೆಗೆ ಎರಡನೆ ಯಾಮದ ಪೂಜೆ, 1.30ರಿಂದ ಮೂರನೇ ಯಾಮದ ಪೂಜೆ, ಸಂಜೆ 4ಕ್ಕೆ ನಾಲ್ಕನೆ ಯಾಮದ ಪೂಜೆ ನಡೆಯಲಿದೆ. ಫೆ.22ರಂದು ಬೆಳಗ್ಗೆ 6.30ರಿಂದ ರುದ್ರಹೋಮ ಇರಲಿದೆ.
ಹೊನಲು ಬೆಳಕಿನ ಶಟಲ್ ಬ್ಯಾಡ್ಮಿಂಟನ್
ಶಿವಮೊಗ್ಗದ ನಹೆರೂ ಒಳ ಕ್ರೀಡಾಂಗಣದಲ್ಲಿ ವೀರಶೈವ ಯುವ ಸಂಗಮದ ವತಿಯಿಂದ ಹೊನಲು ಬೆಳಕಿನ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸಲಾಗಿದೆ. ಸಂಸದ ಬಿ.ವೈ.ರಾಘವೇಂದ್ರ ಪಂದ್ಯಾವಳಿ ಉದ್ಘಾಟಿಸಲಿದ್ದಾರೆ. ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿರಲಿದ್ದಾರೆ.
ಪಂದ್ಯಾವಳಿಯಲ್ಲಿ ಹೆಸರು ನೊಂದಾಯಿಸಲು ರಮೇಶ್ 9844040231, ಜೆ.ಪಿ.ಚಂದ್ರು 9448007619 ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200