ಶಿವಮೊಗ್ಗ ಲೈವ್.ಕಾಂ | SHIMOGA NEWS | 14 ಅಕ್ಟೋಬರ್ 2020
ಅರೇಕಾ ಟೀ ಸಂಶೋಧನೆಯಿಂದ ಅಡಿಕೆ ಬೆಳೆಗಾರರಲ್ಲಿ ನಿರೀಕ್ಷೆ ಮೂಡಿಸಿದ್ದ ಮಂಡಗದ್ದೆಯ ನಿವೇದನ್ ನೆಂಪೆ ಮತ್ತೊಂದು ಪ್ರಯೋಗ ಮಾಡಿದ್ದಾರೆ. ಇದು ಅಡಿಕೆ ಬೆಳೆಗಾರರ ಆತಂಕ ದೂರಗೊಳಿಸಿದೆ. ಮಲೆನಾಡ ಪ್ರಮುಖ ವಾಣಿಜ್ಯ ಬೆಳೆಯ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಲಿದೆ.
VIDEO REPORT
ಏನಿದು ಹೊಸ ಪ್ರಯೋಗ?
ಅಡಿಕೆ ಅಂದರೆ ಗುಟ್ಕಾ. ಅಡಿಕೆ ಆರೋಗ್ಯಕ್ಕೆ ಹಾನಿಕಾರಕ. ಕ್ಯಾನ್ಸರ್ ತರಲಿದೆ ಎಂದೆಲ್ಲ ಹಬ್ಬಿಸಿ, ಪ್ರತಿ ವರ್ಷ ನಿಷೇಧದ ಭೀತಿ ಹುಟ್ಟಿಸಲಾಗುತ್ತಿದೆ. ಆದರೆ ಮಂಡಗದ್ದೆಯ ನಿವೇದನ್ ನೆಂಪೆ ಅವರ ಪ್ರಯೋಗದಿಂದ ಅಡಿಕೆಗೆ ಹೊಸ ಇಮೇಜ್ ಬಂದಿದೆ. ಅಡಿಕೆಯಿಂದ ಟೀ, ಅಡಿಕೆಯಿಂದ ಸ್ಯಾನಿಟೈಸರ್ ಸಂಶೋಧನೆ ಮಾಡಿದ್ದರು. ಈಗ ಅಡಿಕೆಯಿಂದ ಶ್ಯಾಂಪು ತಯಾರಿಸಿದ್ದಾರೆ ನಿವೇದನ್.
ಹೇಗಿದೆ ಶ್ಯಾಂಪು?
ಅಡಿಕೆಯಲ್ಲಿ ಇರುವ ಕೆಲವು ವೈಜ್ಞಾನಿಕ ಅಂಶಗಳ ಬಳಕೆ ಮಾಡಿಕೊಂಡು, ಶ್ಯಾಂಪು ತಯಾರಿಸಲಾಗಿದೆ. ಈಗಾಗಲೆ ಶ್ಯಾಂಪು ಸಿದ್ಧವಾಗಿದ್ದು, ಲೈಸೆನ್ಸ್ ಕೂಡ ಲಭಿಸಿದೆ. ಕಾಂಪ್ಲಿಮೆಂಟರಿ ಪ್ಯಾಕೇಜಿಂಗ್ ಮಾಡಲಾಗಿದೆ. ಅಡಿಕೆಯ ಬಣ್ಣವನ್ನೇ ಹೋಲುವ ಬಣ್ಣದ ಪ್ಯಾಕಿಂಗ್ ಮಾಡಲಾಗಿದೆ. ಸಾಮಾನ್ಯವಾಗಿ ಎಲ್ಲ ಶ್ಯಾಂಪುಗಳು ಕೂದಲಿಗೆ ಸೀಮಿತ. ಆದರೆ ನಿವೇದನ್ ನೆಂಪೆ ಅವರ ಪ್ರೋ ಅರೆಕಾ ಶ್ಯಾಂಪು ಹೇರ್ ಅಂಡ್ ಬಾಡಿ ಎರಡಕ್ಕೂ ಅನುಕೂಲ.
ಯಾವಾಗ ಮಾರುಕಟ್ಟೆಗೆ ಬರುತ್ತೆ?
ಅಡಿಕೆ ಶ್ಯಾಂಪು ಮಾರುಕಟ್ಟಗೆ ತರಲು ಸಿದ್ಧತೆಗಳು ಆರಂಭವಾಗಿದೆ. ಡಿಸೆಂಬರ್ ಹೊತ್ತಿಗೆ ಅರೇಕಾ ಶ್ಯಾಂಪು ಅಂಗಡಿಗಳಲ್ಲಿ ಲಭ್ಯವಾಗಲಿದೆ. ಆರಂಭದಲ್ಲಿ ಸ್ಯಾಶೆ ರೂಪದಲ್ಲಿ ಶ್ಯಾಂಪು ಸಿಗಲಿದೆ. ಪ್ರತಿ ಸ್ಯಾಶೆಗೆ ಎರಡು ರುಪಾಯಿ ನಿಗದಿಪಡಲಾಗುತ್ತದೆ ಎಂದು ನಿವೇದನ್ ನೆಂಪೆ ಶಿವಮೊಗ್ಗ ಲೈವ್.ಕಾಂಗೆ ತಿಳಿಸಿದ್ದಾರೆ. ಎರಡನೆ ಹಂತದಲ್ಲಿ ಇತರೆ ಶ್ಯಾಂಪುಗಳ ಹಾಗೆ ದೊಡ್ಡ ಬಾಟಲ್ಗಳಲ್ಲೂ ಅಡಿಕೆ ಶ್ಯಾಂಪು ಲಭ್ಯವಾಗಲಿದೆ.
ಅರೇಕಾ ಶ್ಯಾಂಪು ಅಡಿಕೆ ಬೆಳೆಗಾರರ ನಿರೀಕ್ಷೆ ಹೆಚ್ಚಿಸಿದೆ. ಶ್ಯಾಂಪು ಮಾರುಕಟ್ಟೆ ವಿಸ್ತರಣೆಯಾದರೆ, ಅಡಿಕೆ ಬೆಳೆಗಾರರಿಗೆ ಅನುಕೂಲ ನಿಶ್ಚಿತ. ಅಲ್ಲದೆ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಚಿತಾವಣೆಯಿಂದಲೂ ಪಾರಾಗಬಹುದಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]