ಶಿವಮೊಗ್ಗ ಲೈವ್.ಕಾಂ | SHIMOGA | 27 ನವೆಂಬರ್ 2019
ಬಯಲು ರಂಗಮಂದಿರಕ್ಕೆ ಹಿಡಿದಿದ್ದ ಗ್ರಹಣ ಇನ್ನು ಬಿಟ್ಟಂತೆ ಕಾಣುತ್ತಿಲ್ಲ. ರಂಗ ಕರ್ಮಿಗಳ ಬಹು ವರ್ಷದ ಬೇಡಿಕೆ ಈಡೇರುವುದೋ ಇಲ್ಲವೋ ಅನ್ನುವ ಅನುಮಾನ ಮೂಡಿದೆ. ಲಕ್ಷಾಂತರ ರೂಪಾಯಿ ತೆರಿಗೆ ಹಣ ನೀರಲ್ಲಿ ಹೋಮ ಮಾಡಿದಂತೆ ಆಗಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ರಂಗ ಚಟುವಟಿಕೆಗೆ ಅನುಕೂಲವಾಗಲಿ ಎಂದು ಕುವೆಂಪು ರಂಗಮಂದಿರದ ಹಿಂದೆ ವಿಶಾಲವಾದ ಬಯಲು ರಂಗ ಮಂದಿರ ನಿರ್ಮಿಸಲಾಗಿದೆ. 250 ರಿಂದ 300 ಜನರು ಕುಳಿತು ಕಾರ್ಯಕ್ರಮ ವೀಕ್ಷಿಸಬಹುದು. ಆದರೆ ಆರಂಭದಿಂದಲು ಬಯಲು ರಂಗಮಂದಿರಕ್ಕೆ ಗ್ರಹಣ ಹಿಡಿದಿದೆ.
ಸರಿಯಾದ ಯೋಜನೆ ರೂಪಿಸದ ಸಂಸ್ಥೆ
ಬಯಲು ರಂಗಮಂದಿರ ಹಾಗೂ ರಂಗ ತಾಲೀಮು ಕೊಠಡಿ ನಿರ್ಮಿಸಿದ್ದಲ್ಲಿ ರಂಗ ಚಟುವಟಿಕೆಗಳ ಆಯೋಜನೆಗೆ ಅನುಕೂಲವಾಗುತ್ತದೆಂಬ ಕಾರಣಕ್ಕೆ ಕಲಾವಿದರು ಸುಮಾರು ವರ್ಷಗಳಿಂದ ಇದಕ್ಕಾಗಿ ನಿರಂತರ ಒತ್ತಾಯ ಹೇರಿದ್ದರು. ಅದಕ್ಕೆ ಪೂರಕವಾಗಿ, ಇಲಾಖೆಯಿಂದ ಅನುದಾನವೂ ಬಂದಿತ್ತು. ಆದರೆ, ಕಾಮಗಾರಿ ಕೈಗೊಂಡ ಸಂಸ್ಥೆ ಸರಿಯಾದ ಯೋಜನೆ ರೂಪಿಸದ್ದಕ್ಕೆ ಲಕ್ಷಾಂತರ ಹಣ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ.
ತಲೆಯ ಮೇಲೆಯೇ ಹೈ ಟೆನ್ಷನ್ ತಂತಿ
ವೇದಿಕೆ ಮೇಲೆಯೇ ಹೈ ಟೆನ್ಷನ್ ವಿದ್ಯುತ್ ತಂತಿ ಹಾದು ಹೋಗಿದೆ. ಹೀಗಾಗಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಕಷ್ಟಸಾಧ್ಯ. ಕಲಾವಿದರು ಭಯದ ಮಧ್ಯೆಯೇ ಅಭ್ಯಾಸ ಮಾಡಬೇಕಾಗುತ್ತದೆ. ಹೀಗಾಗಿ, ಭೂಗತ ಕೇಬಲ್ ಹಾಕುವಂತೆ ಈ ಹಿಂದೆಯೇ ಗಮನಕ್ಕೆ ತರಲಾಗಿತ್ತು. ಅದಕ್ಕೆ ಪೂರಕವಾಗಿ ರಂಗಮಂದಿರ ಆವರಣದಲ್ಲಿ ಕೇಬಲ್ ಹಾಕಲಾಗಿದೆ. ಆದರೆ, ಆ ಕಾಮಗಾರಿ ಪೂರ್ಣಗೊಂಡಿಲ್ಲ. ಹೀಗಾಗಿ, ಯಮರೂಪಿ ಹಾಗೆಯೇ ಉಳಿದುಕೊಂಡಿದೆ.

ಸಭೀಕರಿಗೆ ಕಾಲು ಜಾರುವ ಭಯ
ಕೂರುವುದಕ್ಕಾಗಿ ಮೆಟ್ಟಿಲುಗಳನ್ನು ಮಾಡಲಾಗಿದ್ದು, ಅವುಗಳ ಮೇಲೆ ಗ್ರೈನೆಟ್ ಹಾಸಲಾಗಿದೆ. ಹೀಗಾಗಿ, ಕಾಲು ಜಾರುವ ಸಾಧ್ಯತೆ ಇದೆ. ಹೀಗಾಗಿ, ಇದನ್ನೂ ಸರಿಪಡಿಸುವಂತೆ ಈ ಹಿಂದಿನ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಇನ್ನೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ಜತೆಗೆ ಅವುಗಳ ಎತ್ತರವೂ ಹೆಚ್ಚಾಗಿರುವುದರಿಂದ ಆರಾಮಾಗಿ ಕೂತುಕೊಳ್ಳುವುದೂ ಸಮಸ್ಯೆಯೆ.

ಮೈಕು, ಲೈಟಿಂಗು ಯಾವುದು ಇಲ್ಲ
ಇಲ್ಲಿ ಕಾರ್ಯಕ್ರಮ ಆಯೋಜಿಸಿದ್ದಲ್ಲಿ ಮೈಕ್ ಮತ್ತು ಲೈಟಿಂಗ್‌ಗೆ ವಿದ್ಯುತ್ ಸಂಪರ್ಕವಿಲ್ಲ. ಬಯಲು ರಂಗಮಂದಿರದಲ್ಲಿ ಕಾರ್ಯಕ್ರಮ ಮಾಡುವವರೇ ಲೈಟು, ಮೈಕು ಎಲ್ಲವನ್ನು ತುಂದೊಳ್ಳಬೇಕಾಗುತ್ತದೆ. ಇನ್ನು, ಬಯಲು ರಂಗಮಂದಿರ ಮತ್ತು ಕುವೆಂಪು ರಂಗಮಂದಿರದಲ್ಲಿ ಒಟ್ಟಿಗೆ ಕಾರ್ಯಕ್ರಮ ಆಯೋಜಿಸಿದರೆ ಅತಿಯಾಗಿ ಪ್ರತಿಧ್ವನಿಸುವುದರಿಂದ ಇದಕ್ಕೆ ಬೇಡಿಕೆಯೇ ಇಲ್ಲದಂತಾಗಿದೆ.

ಬಯಲು ರಂಗಮಂದಿರದ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಕೂಡಲೇ ಈ ಬಗ್ಗೆ ಗಮನಹರಿಸಲಾಗುವುದು. ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು. ಸಾರ್ವಜನಿಕರ ಬಳಕೆಗೆ ಪೂರಕವಾಗುವ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ತಿಳಿಸಿದ್ದಾರೆ.
ಏನೆಲ್ಲ ಆಗಬೇಕಿದೆ ಗೊತ್ತಾ?
ಬಯಲು ರಂಗಮಂದಿರಕ್ಕೂ ಮೊದಲು ರಂಗ ತಾಲೀಮು ಕೊಠಡಿಯ ಅಗತ್ಯವಿತ್ತು. ಆರಂಭದಲ್ಲಿ ಈ ಬಗ್ಗೆ ಕಲಾವಿದರು ಸಲಹೆಗಳನ್ನು ನೀಡಿದರೂ ಅದಕ್ಕೆ ಮಾನ್ಯತೆ ಸಿಗಲಿಲ್ಲ. ಈಗ ತಾಲೀಮೂ ಇಲ್ಲ ರಂಗಮಂದಿರವೂ ಇಲ್ಲ ಎಂಬ ಸ್ಥಿತಿ ಏರ್ಪಟ್ಟಿದೆ. ೬೦ ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಬಯಲು ರಂಗಮಂದಿರ ಮರುಬಳಕೆ ಆಗಬೇಕಾದರೆ, ಪ್ರಮುಖವಾಗಿ ಮೂರು ಅಂಶಗಳೆಡೆಗೆ ಒತ್ತು ನೀಡಬೇಕು.

1) ಕುವೆಂಪು ರಂಗಮಂದಿರ ಮತ್ತು ಬಯಲು ರಂಗಮಂದಿರದಲ್ಲಿ ಏಕ ಕಾಲಕ್ಕೆ ಕಾರ್ಯಕ್ರಮ ಆಯೋಜಿಸಿದರೂ ಧ್ವನಿಯಿಂದ ಪರಸ್ಪರ ತೊಂದರೆ ಆಗದಂತೆ ಗಮನಹರಿಸಬೇಕು.
2) ಎನ್‌ಇಎಸ್ ಮೈದಾನದಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಇದರಿಂದ ಬಯಲು ರಂಗಮಂದಿರದ ಕಾರ್ಯಕ್ರಮಕ್ಕೆ ತೊಂದರೆ ಆಗಬಾರದು. ಈ ನಿಟ್ಟಿನಲ್ಲಿ ಕ್ಲೋಸ್ಡ್ ಇಂಟರ್‌ನಲ್ ಥಿಯೇಟರ್ ಮಾಡುವುದೇ ಶಾಶ್ವತ ಪರಿಹಾರ. ಇದಕ್ಕಾಗಿ, ತಾಂತ್ರಿಕ ಸಲಹೆ ಪಡೆಯುವುದು ಒಳಿತು.
3) ರಂಗ ತಾಲೀಮು ಕೊಠಡಿ, ಗ್ರೀನ್ ರೂಂ, ಲೈಟಿಂಗ್ ವ್ಯವಸ್ಥೆ, ಯುಜಿ ಕೇಬಲ್ ಅಳವಡಿಕೆ, ಪ್ರತ್ಯೇಕ ಶೌಚಾಲಯ, ಜನರೇಟರ್ ಮತ್ತಿತರ ಸೌಲಭ್ಯ ಕಲ್ಪಿಸಬೇಕಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
Bayalu Rangamandira behind Kuvempu Rangamandir is in a sick condition. It has been not handed over to Shimoga Kannada and Culture Department.