SHIVAMOGGA LIVE NEWS | 26 FEBRURARY 2023
SHIMOGA / BHADRAVATHI : ಸೋಗಾನೆಯ ವಿಮಾನ ನಿಲ್ದಾಣ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಟ್ರಯಲ್ ರನ್ ಗೆ ಬಂದ ವಿಮಾನಗಳನ್ನು ಕಂಡು ಜನರು ಪುಳಕಿತರಾಗಿದ್ದಾರೆ. ಆದರೆ ಜಿಲ್ಲೆಯಲ್ಲಿ ಇದಕ್ಕೂ ಮೊದಲು ಒಂದು ರನ್ ವೇ (Run Way) ಇತ್ತು. ಅಲ್ಲಿಗೆ ದೇಶ, ವಿದೇಶದಿಂದ ವಿಮಾನಗಳು ಬಂದು ಲ್ಯಾಂಡ್ ಆಗುತ್ತಿದ್ದವು.
ವಿಮಾನ ಎಲ್ಲಿ ಲ್ಯಾಂಡ್ ಆಗುತ್ತಿದ್ದವು?
ಭದ್ರಾವತಿಯ ಹೊಸ ನಂಜಾಪುರ ಗ್ರಾಮದ ಬಳಿ ರನ್ ವೇ ನಿರ್ಮಸಲಾಗಿತ್ತು. ಗಟ್ಟಿಮುಟ್ಟು ನೆಲದ ಮೇಲೆ ಡಾಂಬರ್ ಇಲ್ಲದೆ ಸುಮಾರು 1 ಕಿಲೋ ಮೀಟರ್ ಮಣ್ಣಿನ ರನ್ ವೇ ನಿರ್ಮಾಣ ಮಾಡಿದ್ದರು. 1970 ರಿಂದ 90ರ ದಶಕದವರೆಗೆ ಇಲ್ಲಿ ವಿಮಾನಗಳು ಬಂದಿಳಿಯುತ್ತಿದ್ದವು. ಅಂದಹಾಗೆ, ಈ ರನ್ ವೇ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ (ವಿಐಎಸ್ಎಲ್) ಸೇರಿತ್ತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ವಿದೇಶದಿಂದ ಬರುತ್ತಿತ್ತು ವಿಮಾನ
ವಿಐಎಸ್ಎಲ್ ಸಂಪದ್ಭಿರತವಾಗಿದ್ದಾಗ ದೇಶ, ವಿದೇಶದಿಂದ ವಿವಿಧ ಕಂಪನಿಗಳ ಮುಖ್ಯಸ್ಥರು, ತಂತ್ರಜ್ಞರು, ಇಂಜಿನಿಯರ್ ಗಳು ಭದ್ರಾವತಿಗೆ ಬರುತ್ತಿದ್ದರು. ಅವರಿಗೆ ಅನುಕೂಲವಾಗಲಿ ಎಂದು ಸಣ್ಣ ರನ್ ವೇ, ಹೆಲಿಪ್ಯಾಡ್ ಗಳನ್ನು ನಿರ್ಮಿಸಲಾಗಿತ್ತು. ಇದೇ ರನ್ ವೇಗೆ (Run Way) ಜರ್ಮನಿಯಿಂದ ಇಂಜಿನಿಯರ್ ಹೂತ್ ಎಂಬುವವರು ತಮ್ಮ ವಿಮಾನದಲ್ಲಿ ಬರುತ್ತಿದ್ದರು.
‘1968 ರಿಂದ 1975ರವರೆಗೆ ನಾನು ಭದ್ರಾವತಿಗೆ ವಿಮಾನ ಬರುತ್ತಿದ್ದದ್ದನ್ನು ನೋಡಿದ್ದೇನೆ. ಜರ್ಮನಿಯ ಪ್ರಖ್ಯಾತ ಇಂಜಿನಿಯರ್ ಹೂತ್ ಎಂಬುವವರು ವಿಐಎಸ್ಎಲ್ ಕಾರ್ಖಾನೆಯ ಟೆಕ್ನಿಕಲ್ ಡೈರೆಕ್ಟರ್ ಆಗಿದ್ದರು. ಅವರು ಜರ್ಮನಿಯಿಂದ ನೇರವಾಗಿ ಭದ್ರಾವತಿಗೆ ವಿಮಾನದಲ್ಲಿ ಬರುತ್ತಿದ್ದರು. ಅಲ್ಲಲ್ಲಿ ಇಂಧನ ಭರ್ತಿ ಮಾಡಿಸಿಕೊಂಡು, ಊಟ, ತಿಂಡಿ ಮುಗಿಸಿಕೊಂಡು ಇಲ್ಲಿ ಬಂದು ವಿಮಾನ ಇಳಿಸುತ್ತಿದ್ದರು. ವಿಐಎಸ್ಎಲ್ ಕಾರ್ಖಾನೆಯ ಇಂಜಿನಿಯರ್ ಆಗಿದ್ದ ನಜೀರ್ ಅಹಮದ್ ಅವರು ನನ್ನ ಮೇಲಾಧಿಕಾರಿ. ನಜೀರ್ ಅಹಮದ್ ಮತ್ತು ಹೂತ್ ಅವರು ನಿಟಕವರ್ತಿಗಳು. ಹೂತ್ ಅವರು ಬಂದಾಗಲೆಲ್ಲ ನಜೀರ್ ಅಹಮದ್ ಅವರು ನನ್ನನ್ನು ವಿಮಾನ ನಿಲ್ದಾಣಕ್ಕೆ ಕರೆದೊಯ್ಯುತ್ತಿದ್ದರು’ ಎಂದು ನೆನಪಿಸಿಕೊಳ್ಳುತ್ತಾರೆ ಸಾಹಿತಿ, ವಿಐಎಸ್ಎಲ್ ನಿವೃತ್ತ ಉದ್ಯೋಗಿ ಜಿ.ವಿ.ಸಂಗಮೇಶ್ವರ.
ಬಿಗಿ ಭದ್ರತೆ, ಕುತೂಹಲದಿಂದ ನೋಡ್ತಿದ್ರು ಜನ
ವಿಮಾನಗಳ ಕುರಿತು ಕುತೂಹಲ ಈಗಲೂ ಇದೆ. ಆಗಲೂ ಇತ್ತು. ಭದ್ರಾವತಿಗೆ ವಿಮಾನ ಬಂದಿಳಿಯುವುದನ್ನು ನೋಡಲು ಜನ ಸಾಗರವೆ ಸೇರುತ್ತಿತ್ತು.
ಇದನ್ನೂ ಓದಿ – ವಿಮಾನ ನಿಲ್ದಾಣದ ರನ್ ವೇ ಪಕ್ಕದಲ್ಲಿ ಶಕ್ತಿಶಾಲಿ ಆಂಜನೇಯ, ಕೊನೆತನಕ ಉಳಿದಿದ್ದ ಗುಡಿ ದಿಢೀರ್ ತೆರವಾಗಿದ್ದೇಕೆ?
‘ಹೂತ್ ಅವರು ಬರುವ ವಿಚಾರ ತಿಳಿಯುತ್ತಿದ್ದಂತೆ ವಿಐಎಸ್ಎಲ್ ಭದ್ರತಾ ಪಡೆ ಸಿಬ್ಬಂದಿ ರನ್ ವೇ ಬಳಿ ತೆರಳುತ್ತಿದ್ದರು. ಆಗ ಓಲ್ಡ್ ಟೌನ್ ಮತ್ತು ಗ್ರಾಮಾಂತರ ಠಾಣೆಗಳು ಮಾತ್ರ ಇತ್ತು. ಅಲ್ಲಿಯ ಪೊಲೀಸರು, ಮಿಲಿಟರಿ ಕ್ಯಾಂಪಿನಿಂದ 50 ಸಿಬ್ಬಂದಿ ಭದ್ರತೆಗೆ ಬರುತ್ತಿದ್ದರು. ನಾಲ್ಕು ಸೀಟಿನ ವಿಮಾನ ರನ್ ವೇಗೆ ಬಂದಿಳಿಯುತ್ತಿತ್ತು. ಜನರು ತುಂಬಾ ಕುತೂಹಲದಿಂದ ವಿಮಾನವನ್ನು ನೋಡುತ್ತಿದ್ದರು’ ಎಂದು ಎಸ್.ಜಿ.ಸಂಗಮೇಶ್ವರ ಅವರು ಸ್ಮರಿಸಿಕೊಳ್ಳುತ್ತಾರೆ.
ಸೇಲ್ ಅಧಿಕಾರಿಗಳು ಬರುತ್ತಿದ್ದರು
ವಿಐಎಸ್ಎಲ್ ಕಾರ್ಖಾನೆಯನ್ನು ಭಾರತೀಯ ಉಕ್ಕು ಪ್ರಾಧಿಕಾರಕ್ಕೆ (SAIL) ವಹಿಸಲಾಯಿತು. ಆಗ ಉಕ್ಕು ಪ್ರಾಧಿಕಾರದ ಅಧಿಕಾರಿಗಳು ವಿಮಾನದಲ್ಲಿ ಈ ರನ್ ವೇಗೆ ಬಂದಿಳಿಯುತ್ತಿದ್ದರು. ಹೊಸ ನಂಜಾಪುರ ಗ್ರಾಮದಲ್ಲಿ ಈ ವಿಮಾನಗಳು ಬಂದಿಳಿಯುತ್ತಿದ್ದದ್ದನ್ನು ಕಂಡ ಹಲವರು ಈಗಲೂ ಇದ್ದಾರೆ. ಶಿವಮೊಗ್ಗದ ಕಡೆಯಿಂದು ಲ್ಯಾಂಡ್ ಆಗುತ್ತಿದ್ದ ವಿಮಾನಗಳು, ಸರ್.ಎಂ.ವಿ. ವಿಜ್ಞಾನ ಕಾಲೇಜು ಕಟ್ಟಡದವರೆಗೂ ಹೋಗಿ ಬರುತ್ತಿದ್ದವು ಎಂದು ಸ್ಮರಿಸಿಕೊಳ್ಳುವ ಹಲವರಿದ್ದಾರೆ.
ಈಗ ಹೇಗಿದೆ ರನ್ ವೇ?
ವಿಐಎಸ್ಎಲ್ ಕಾರ್ಖಾನೆ ರೋಗಗ್ರಸ್ಥವಾಗುತ್ತಿದ್ದಂತೆ ರನ್ ವೇ ಚಹರೆ ಬದಲಾಯಿತು. ಕೆಲವು ಸಂದರ್ಭ ರನ್ ವೇ ಯುಕವರಿಗೆ ಕ್ರಿಕೆಟ್ ಆಡಲು, ಭತ್ತದ ಕಣವಾಗಿತ್ತು. ಈಗ ನಿರ್ವಹಣೆ ಇಲ್ಲದೆ ಗಿಡಗಳು ಬೆಳೆದು ಕಾಡಿನಂತಾಗಿದೆ. ರನ್ ವೇ ಇದ್ದ ಜಾಗದಲ್ಲಿ ಕೆರೆಯೊಂದು ಜನ್ಮ ಪಡೆದಿದೆ. ರಾಶಿ ರಾಶಿ ಮದ್ಯದ ಬಾಟಲಿಗಳು ಕಾಲಿಗೆ ಸಿಗುತ್ತವೆ.
ಇದನ್ನೂ ಓದಿ – ಪ್ರವಾಸಿ ತಾಣವಾಯ್ತು ಶಿವಮೊಗ್ಗ ವಿಮಾನ ನಿಲ್ದಾಣ, ಗೇಟ್ ಬಳಿ ಕಾದು ನಿಲ್ಲುತ್ತಿದ್ದಾರೆ ನೂರಾರು ಜನ
ವಿಮಾನ ನಿಲ್ದಾಣಕ್ಕೆ ಪರಿಶೀಲನೆ ನಡೆದಿತ್ತು
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಯೋಜನೆ ಸಿದ್ಧವಾದಾಗ ಹೊಸ ನಂಜಾಪುರದ ರನ್ ವೇ ಪರಿಶೀಲನೆ ನಡೆಸಲಾಗಿತ್ತು. ಅಧಿಕಾರಿಗಳ ತಂಡ ಇಲ್ಲಿಗು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ವಿವಿಧ ಕಾರಣಕ್ಕೆ ಈ ಜಾಗ ಆಯ್ಕೆಯಾಗಲಿಲ್ಲ.